ಮಧ್ಯಂತರ ಚುನಾವಣೆ ಬೇಕೆ?????????
ಬರಹ
ರಾಜ್ಯ ರಾಜಕೀಯ ಹಳಸುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ಪಕ್ಷಕರು ಮರು ಚುನಾವಣೆಯ ತಯಾರಿಯಾಗಿ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಬಿಜೆಪಿ ಅನುಕಂಪ ನೆಪ ಹೂಡಿದ್ರೆ, ಜೆಡಿಎಸ್ ತಾವು ಮಾಡಿದ್ದೇ ಸರಿ ಎಂದು ಸಾಬೀತು ಪಡಿಸಲು ಹೊರಟಿದೆ. ಈ ಮಧ್ಯೆ ಕಾಂಗ್ರೆಸ್ ಏನೂ ಸಾಚಾವಲ್ಲ...
ಒಂದು ವೇಳೆ ಚುನಾವಣೆ ನಡೆದರೆ ರಾಜ್ಯಕ್ಕೆ ನಷ್ಟವಂತೂ ಗ್ಯಾರಂಟಿ. ಅಲ್ಲದೇ ಒಂದೇ ಪಕ್ಷಕ್ಕೆ ಬಹುಮತ ಸಿಗಬಹುದೆಂದು ಹೇಳುವ ಹಾಗಿಲ್ಲ. ಚುನಾವಣೆ ನಡೆದರೂ ಅತಂತ್ರ ಪರಿಸ್ಥಿತಿ ಮತ್ತೆ ಕಂಡುಬರುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಶೇಕಡಾ ೭೫ರಷ್ಟು ಜನ ಮತದಾನವನ್ನೇ ನೀಡದೇ ಇರಬಹುದು.
ಈಗ ಹೇಳಿ ಮರು ಚುನಾವಣೆ ಬೇಕಾ? ಮರು ಚುನಾವಣೆ ಬಗ್ಗೆ ಅಂತಿಮ ತೀರ್ಮಾನ ಇನ್ನೂ ದ್ರಡವಾಗಿಲ್ಲ ಆದರೂ ಈ ಬಗ್ಗೆ ನಿಮ್ಮ ಅಭಿಪ್ರಾಯ, ಚರ್ಚೆ, ವಿಮರ್ಶೆಯನ್ನು ತಿಳಿಸಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಮಧ್ಯಂತರ ಚುನಾವಣೆ ಬೇಕೆ?????????