ಮರಳಲಿ ಮೇಲುಕೋಟೆ ಕಲ್ಯಾಣಿಯ ವೈಭವ

ಮರಳಲಿ ಮೇಲುಕೋಟೆ ಕಲ್ಯಾಣಿಯ ವೈಭವ

ಬರಹ

ಮರಳಲಿ ಮೇಲುಕೋಟೆ ಕಲ್ಯಾಣಿಯ ವೈಭವ

ಇದು ನಾನು ಕಂಡಂತೆ ಕರ್ನಾಟಕದ ಬೃಹತ್ ಕಲ್ಯಾಣಿ. ಒಂದು ಕೆರೆಯನ್ನು ಹೋಲುತ್ತದೆ. ಮೇಲುಕೋಟೆ ಬೆಟ್ಟದ ತಪ್ಪಲಲ್ಲಿದೆ. ಮೊದಲು ಬೆಟ್ಟದ ಅಷ್ಟೂ ನೀರು ಈ ಕಲ್ಯಾಣಿಗೆ ಬರುವಂತೆ ಸಂಪರ್ಕವಿತ್ತು. ಹಾಗೆ ಬಂದ ನೀರು ಕಲ್ಯಾಣಿಗೆ ತುಂಬಿ ಹೆಚ್ಚಾದರೆ ಆ ಹೆಚ್ಚಾದ ನೀರನ್ನು ಹೊರ ಹಾಕಲು ಕಲ್ಯಾಣಿಗೆ ತೂಬಿನ ವ್ಯವಸ್ಥೆಯೂ ಇದೆ. ಕಲ್ಯಾಣಿಗೆ ತೂಬಿನ ವ್ಯವಸ್ಥೆ ಇರುವುದು ತುಂಬಾ ಅಪರೂಪ.

ಈ ತೂಬಿನಿಂದ ಹೊರ ಹೋದ ನೀರು ಕೆಳಗಿನ ಕೆರೆಯನ್ನು ಸೇರುತ್ತಿತ್ತು. ಕಲ್ಯಾಣಿಗೆ ನೀರು ಬರುವ ನೀರ ಮಾರ್ಗಗಳನ್ನು ಈಗಲೂ ನೋಡಬಹುದು. ಆದರೆ ಅವೆಲ್ಲಾ ಮುಚ್ಚಿ ಹೋಗಿವೆ. ಮುಚ್ಚಿ ಹೋಗಿವೆ ಎಂಬುದಕ್ಕಿಂತಲೂ ಜನರೇ ಮುಚ್ಚಿದ್ದಾರೆ ಎಂಬುದೇ ಸೂಕ್ತ. ಏಕೆಂದರೆ ನೀರು ಹೊರ ಹೋಗುವ ತೂಬಿನ ರಂಧ್ರ ಕಸ ಕಡ್ಡಿ ತುಂಬಿ ಹಾಳಾಯಿತು. ಅದನ್ನು ಸರಿ ಮಾಡದೆ ಕಲ್ಯಾಣಿಗೆ ಬರುವ ನೀರನ್ನೇ ಬೇರೆಡೆ ತಿರುಗಿಸಿದ್ದಾರೆ ಭೂಪರು.

ಈಗ ಇದಕ್ಕೆ ಬೆಟ್ಟದ ಜೋಪು ನೀರೇ ಆಸರೆ. ಯತೇಚ್ಚ ನೀರು ಬಂದು ವೈಭವದಿಂದ ಇರಬೇಕಾಗಿದ್ದ ಕಲ್ಯಾಣಿ ಸ್ವಲ್ಪವೇ ನೀರಿನಿಂದ ಕೂಡಿದೆ. ನೀರು ಹೊರ ಹೋಗುವುದನ್ನು ಸರಿಪಡಿಸಿದರೆ ನೀರಿನ ಗುಣಮಟ್ಟವೂ ಉತ್ತಮವಾಗಿರುತ್ತಿತ್ತು. ಅದರ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ.

- ಚಿತ್ರ ಲೇಖನ: ಮಲ್ಲಿಕಾರ್ಜುನ ಹೊಸಪಾಳ್ಯ