ಮರೆ, ಮಱೆ

ಮರೆ, ಮಱೆ

ಬರಹ

ಮರೆ (ನಾಮಪದ)= ಒಂದು ಜಾತಿಯ ಜಿಂಕೆ. ಮರೆ=ನಂಕು, ನ್ಯಂಕು ಅಂದರೆ ಒಂದು ಜಾತಿಯ ಜಿಂಕೆಯೆನ್ನುತ್ತದೆ ಹಲಾಯುಧನ ಅಭಿಧಾನರತ್ನಮಾಲಾ. ಶಬರಶಂಕರವಿಳಾಸದಲ್ಲಿ ಕಾೞ್ಮರೆ=ಕಾಡ್+ಮರೆ=ಕಾಡು ಜಿಂಕೆ. ಮರೆಯಡಗು=ಮರೆಯ=ಜಿಂಕೆಯ + ಅಡಗು= ಮಾಂಸ. ಹಿರಿದಹ ಮರೇಮೃಗ. ಇತ್ಯಾದಿ ಶಬ್ದಗಳು ದೊರೆಯುತ್ತವೆ.

ಮಱೆ(೧)=ಮುಚ್ಚು, ಕಾಣದಂತೆ ಮಾಡು. ಉದಾಹರಣೆ: ಮೋಡದ ಹಿಂದೆ ಚಂದಿರ ಮಱೆಯಾದನು. ಬೆಳಕು ಬೀೞದಂತೆ ಮಱೆಮಾಡು. ಇತ್ಯಾದಿ.

ಮಱೆ(೨)=ನೆನೆಯಲು ಅಥವಾ ನೆನಪಿಸಿಕೊಳ್ಳಲು ಅಸಮರ್ಥನಾಗು. ನೆನೆಯದಿರು. ಉದಾಹರಣೆಗೆ: "ನೀನು ನನ್ನಿಂದ ದುಡ್ಡಿಸಕೊಂಡಿದ್ದನ್ನು ಮಱೆತಿದ್ದೀಯಾ?". ನಿನಗೆ ಹೇೞಲು ಮಱೆತು ಹೋಯ್ತು. ಹರಿಭಕ್ತಿಸಾರದ "ಮಱೆದೆನಭ್ಯುದಯದಲಿ ಮಱೆಯೆನಾಪತ್ತಿನಲಿ".
ಭಾವನಾಮ:- ಮಱೆವು, ಮಱಹು.
ಭೂತಕೃದ್ವಾಚಿ=ಮಱತು/ಮಱೆತು, ಮಱೆದು
ಭವಿಷ್ಯತ್/ವರ್ತಮಾನ ಕೃದ್ವಾಚಿ=ಮಱೆವ, ಮಱೆಯುವ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet