ಮಹಾಲಕ್ಷ್ಮಿ
ಮಹಾಲಕ್ಷ್ಮಿ
ಲಕ್ಷ್ಮೀ ಸಕಲವೂ ನಿನ್ನ ಮಾಯೆ
ಸದಾ ನಮ್ಮ ಮೇಲಿರಲಿ ನಿಮ್ಮ ದಯೇ
ಧನಕ್ಕೂ ನೀನೇ ದೇವತೆ
ಧಾನ್ಯಕ್ಕೂ ನೀನೇ ದೇವತೆ
ನೀನೇ ಸಂತಾನ ಭಾಗ್ಯದಾತೆ
ನೀನೇ ಶಕ್ತಿ ಪ್ರದಾಯಿತೆ
!!ಲಕ್ಷ್ಮೀ ಸಕಲವೂ ನಿನ್ನ ಮಾಯೆ!!
ನೀನೋಲಿದರೆ ಧನಿಕ
ನೀ ಮುನಿದರೆ ತಿರುಕ
ನಿಜಭಕ್ತಿಗೆ ಒಲಿಯುವ ಸಂಕೇತ
ನಿನ್ನ ಗುಣ ಸ್ವಾಭಿಮಾನ ಪ್ರತೀಕ
!!ಲಕ್ಷ್ಮೀ ಸಕಲವೂ ನಿನ್ನ ಮಾಯೆ!!
ಒಲ್ಲದ ಸ್ಥಳದಲ್ಲಿ ಇರಲ್ಲೋಲ್ಲೇ
ಚಂಚಲೆ ನೀನು ನಿಂತಲ್ಲೇ ನಿಲ್ಲವಲ್ಲೇ
ಬಂಧನ ಎಂಬುದು ನಿನಗೆ ಇಲ್ಲ
ಸ್ವಾತಂತ್ರ್ಯೆ ನೀನು ಸಂಚರಿಸದ ಸ್ಥಳವಿಲ್ಲ
!!ಲಕ್ಷ್ಮೀ ಸಕಲವೂ ನಿನ್ನ ಮಾಯೆ!!
ಅದೃಷ್ಟಕ್ಕೆ ನೀನು ಅಧಿದೇವತೆ
ದುರಾದೃಷ್ಟಕ್ಕೂ ನೀನು ದಾರಿದ್ರ್ಯ ದೇವತೆ
ಕೊಡುವವಳು ನೀನೇ ವರಲಕ್ಷ್ಮೀ
ಪಡೆಯುವವಳು ನೀನೇ ದರಿದ್ರ ಲಕ್ಷ್ಮೀ
!!ಲಕ್ಷ್ಮೀ ಸಕಲವೂ ನಿನ್ನ ಮಾಯೆ!!
ನಿನ್ನಯ ರೂಪ ಹಲವಾರು
ನಿನಗಾಗಿ ನಡೆಯುವುದು ತಕರಾರು
ಎಲ್ಲರೂ ನಿನ್ನ ದಯೇ ಬೇಡುವರು
ನಿನ್ನಯ ಕೃಪೆಯಿಂದ ಬಾಳುವರು
!!ಲಕ್ಷ್ಮೀ ಸಕಲವೂ ನಿನ್ನ ಮಾಯೆ!!
ರಚನೆ:-ತುಂಬೇನಹಳ್ಳಿ ಕಿರಣ್ ರಾಜು ಎನ್