ಮಾರಾಟ
ಕವನ
ಮಾರುವೆ ಸಂತಸವ ಬೊಗಸೆಯಲಿ
ಬೆಲೆ ಕಡಿಮೆ ಈ ಕನಸುಗಳಿಗೆ!!
ಕೊಳ್ಳುವ ಮನಸು ನಿಮಗಿರಲಿ
ಕೀಲಿ ಕೊಳ್ಳಿರಿ ನಗುವ ಬುಗ್ಗೆಗೆ!!
ಹರಿಯುವ ಹಲವು ಕಂಗಳ ನೋಟ
ನಿಂತಲ್ಲಿ ನಿಲ್ಲವು ಕಾಲು ಮನದಂತೆ!!
ಇವೇ ನನಗೆ ಬದುಕಿನ ಒಳನೋಟ
ಸೊರಗೆನು ಮುದುಡುವ ಸುಮದಂತೆ!!
ಕೂಗಿ ಸೆಳೆವೆ ನಾ ಮಂದಿಯನು
ನನ್ನೆಲ್ಲಾ ಶಕ್ತಿಯ ಜೊತೆಸೇರಿಸಿ
ಸಿಡುಕು ಮೂತಿಗಳಿಗೆ ಅಳುಕೆನು!
ನಾ ನಗುವೆ ನೋವನು ನಿವಾಳಿಸಿ!
ನಾ ಅಡಗಿಸಿಹೆ ನನ್ನ ಕನಸುಗಳ
ಬಣ್ಣದ ವಸ್ತುಗಳ ಅಡಿಯಲಿ
ರಂಗೇರಿದೆ ಕಾಣು ಈ ಅಂಗಳ
ಎದುರಾಗುವೆ ನಾ ನಗುವಲಿ!!
-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್