ಮಾರು, ಮಾಱು

ಮಾರು, ಮಾಱು

Comments

ಬರಹ

ಮಾರು(ನಾಮಪದ)= ಒಂದು ಉದ್ದದ ಅಳತೆ. ಸಾಮಾನ್ಯವಾಗಿ ಎರಡು ಕೈಗಳನ್ನು ಚಾಚಿದಾಗ ಅದಱ ಒಟ್ಟು ಉದ್ದ.
ಉದಾಹರಣೆ:- ಮಾರುದ್ದ ಜಡೆಯವಳೆ, ವೈಯಾರದ ನಡೆಯವಳೆ

ಮಾಱು(ಕ್ರಿಯಾಪದ)=ವಿನಿಮಯ ಮಾಡು, ಅದಲು ಬದಲು ಮಾಡು, ಯಾವುದನ್ನಾದರೂ ಇನ್ಯಾವುದಕ್ಕಾದರೂ ಬದಲಾಯಿಸಿಕೊಳ್ಳುವುದು(ಸಾಮಾನ್ಯವಾಗಿ ಹಣಕ್ಕಾಗಿ ವಸ್ತುವನ್ನು ಬದಲಾಯಿಸಿಕೊಳ್ಳು).
ಉದಾಹರಣೆ:- ಪೀತಾಂಬರ ಉಟ್ಟರೂ ಕೋತಂಬರಿ ಮಾಱೋದು ಬಿಡಲಿಲ್ಲ.
ವರ್ತಮಾನ ಕೃದ್ವಾಚಿ: ಮಾರ್ಪ/ಮಾರ್ವ/ಮಾಱುವ
ಭೂತಕೃದ್ವಾಚಿ: ಮಾಱಿ
ವಿಶೇಷಣ:- ಉತ್ತರವಾಗಿ ತಿರುಗಿ ಹೇೞು. ಮಾಱುತ್ತರ= ಹೇೞಿದ ಮಾತಿಗೆ ಬದಲಾಗಿ(ವಿನಿಮಯವಾಗಿ) ಉತ್ತರ. ಮಾಱುವೇಷ=ಬದಲಾದ ವೇಷ.
ಭಾವನಾಮಗಳು: ಮಾರ್ಪು=ಬದಲಾವಣೆ, ಮಾತ/ಮಾತು=ಒಂದು ಮಾತಿಗೆ ಉತರವಾಗಿ ತಿರುಗಿ ಉತ್ತರ ಹೇೞು. ಉದಾಹರಣೆಗೆ:- (ಮಾತವಿಗೆ)ಮಾತಿಗೆ ಮಾತು/ತ ಬೆಳೆಸಬೇಡ. ತಿರುಗಿ ಮಾತಾಡಬೇಡ (ಮಾತವಾಡಬೇಡ).
ಮಾರ್ಪಡು=ಬದಲಾಗು.
ಮಾರ್ಪಾಡು=ಬದಲಾವಣೆ.
ಮಾಱನೆಯ ದಿನ=ನಂತರದ ದಿವಸ (ಬದಲಾದ ದಿವಸ). ಭೂತಕಾಲಕ್ಕೆ ನಮ್ಮ ಹಿಡಿತವಿಲ್ಲದಿರುವುದಱಿಂದ ಮಾಱನೆಯ ದಿವಸ= ಮುಂದಿನ ದಿನ.

ಮಾಱುವೋಗು, ಮಾಱು ಹೋಗು:- ಇರುವ ರೂಪ ಬದಲಾಗು. ಆಶ್ಚರ್ಯ ಹೊಂದು.
ಅವಳ ರೂಪಿಂಗೆ ಮಾಱುವೋದೆನು. ಅವಳ ರೂಪಕ್ಕೆ ಮಾಱು ಹೋದನು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet