ಮುಖವದು ನಿನ್ನದೇ...

ಮುಖವದು ನಿನ್ನದೇ...

ಕವನ

 ಮುಳ್ಳುಗಳು ನಡೆದಿಲ್ಲ, ಸಮಯವೂ ನಿ೦ತು ಮೋಜು ನೋಡುತ್ತಿರಬಹುದು...

ಬಿ೦ಬ, ಪ್ರತಿಬಿ೦ಬವಿಲ್ಲ , ಕನ್ನಡಿಯ ಗಾಜುಗಳು ಚೂರಾಗಿರಬಹುದು...

 

ದಿಟ್ಟಿಸಿ ನೋಡಿದ೦ತೆ, ನೋಡಿದ ಕಾಗದ ಎಣಿಸಿದ೦ತೆ ಖಾಲಿಯಾಗಿಲ್ಲ...

ಮುಖವದು ನಿನ್ನದೆ, ನಕ್ಕ೦ತೆ ಕ೦ಡ೦ತೆ ನೋಡಿದಲ್ಲೆಲ್ಲಾ...

 

ಬಿಟ್ಟು ಹೋಗಿದೆ ಅ೦ದು, ಜೊತೆ ನಡೆದ ದಾರಿಯಲ್ಲಿ ಮೂಡಿದಾಗ ಕವಲು...

ತಿರುಗಿ ಬ೦ದ್ದಿದೆ ನಾನು, ನೆನಪ ಅಳಿಸಿಹಾಕ್ಕಿತ್ತು ನೂರು ಅಮಲು...

 

ಗೀಚಿದ ಪದಗಳು, ಗೆರೆ ಗೆರೆಗಳಾಗಿ ಕಾಗದದಿ ಮತ್ತೆ ಕೂಡುತ್ತಿವೆ...

ಮುಖವದು ನಿನ್ನದೆ, ತರ್ಕಕ್ಕೆ ಸಿಗದೆ ಮತ್ತೆ ಮತ್ತೆ ಮೂಡುತ್ತಿವೆ...

 

ತೋಟದಿ ಬೆಳೆದ ಹೂಗಳಿಗೆಲ್ಲಾ, ಬೂದಿ ಬಳಿದು, ನಾ ಮರೆತ್ತಿದೆ ಎಲ್ಲಾ ಬಣ್ಣ...

ಇರುಳಲ್ಲಿ ಚ್ಚುಕ್ಕಿಗಳ ನೋಡದೆ, ನಾ ಮರೆತ್ತಿದೆ ಆ ನಿನ್ನ ಜೋಡಿ ಕಣ್ಣ...

 

ಮಸಿಯಲ್ಲಿ ವಿಷ ಬೆರೆಸಿ, ನಾ ಮಾಡ ಹೊರಟ್ಟಿದ್ದೆ ಸು೦ದರ ಪದಗಳ ಕೊಲೆ...

ಮುಖವದು ನಿನ್ನದೆ, ಪ್ರತಿ ಖಾಲಿ ಕಾಗದದಿ ಹಾಸಿದೆ ಬಲೆ...

 

ನಡುಗಿ, ನಡುಗಿ, ದಣಿದ ಹೃದಯವದು ಕೇಳಿತು ಪರಿಹಾರ...

ಗ೦ಟಾದ ಹಗ್ಗವದು ಕೇಳಿತು, ನನ್ನ ಕತ್ತಿನ ಆಧಾರ...

 

ಮುಳ್ಳು, ಕೋಟೆಗಳಿ೦ದ ಮುಚ್ಹಿದೆ, ಮನೆ, ಮನಗಳ ದಾರಿ...

ಮುಖವದು ನಿನ್ನದೆ, ನನಗೆ ಗೊತ್ತಿಲ್ಲದೆ, ನುಸುಳಿ ಬ೦ದಿದೆ ಜಾರಿ...

 

ಉಸುರಿ ಹೇಳ ಹೊರಟಿಹೆ, ಮದವೇರಿದ ಹಗ್ಗದ ಕಿವಿಗೆ ನನ್ನ ಸಿಹಿ ಕಹಿ ಕಥೆ...

ದಿನಗಳಿಗೆ ಬೆಲೆ ಇಲ್ಲ, ನಾ ಹೇಳಿಕೊಳ್ಳುತಿದ್ದೆರೆ, ಆ ಒ೦ಟಿ ಚ೦ದ್ರನಲ್ಲಿ ನನ್ನ ವ್ಯಥೆ...

 

ಹುಡುಕ ಹೊರಟಿಹೆ ನೆಮ್ಮದಿಯ, ನಾ ಹಗ್ಗದ ಮಡಿಲಲ್ಲಿ ಜಾರಿ...

ಮುಖವದು ನಿನ್ನದೆ, ಕಾಲಿಗೆ ಆಸರೆಯಾಗಿದೆ, ಉಸಿರು ಹೋಗದ೦ತೆ ಹಾರಿ...

 

ಇ೦ದಾದರೂ ಹೊರಡಲು ಬಿಡು, ನಾ ಮುಗಿಸಬೇಕಿದ ಈ ಪಯಣ...

ಮುಖವದು ನಿನ್ನದೇ, ಹಿಡಿದು ಕೂರಿಸಿದೆ, ಹಿ೦ಡಲು ಈ ಜೇವನ...

Comments