ಮೂರು ಮುಕ್ತಕಗಳು

ಮೂರು ಮುಕ್ತಕಗಳು

ಕವನ

ಬುದ್ಧಿ ಹೇಳುವುದೊಂದು ಪೆದ್ದುತನ ದಡ್ಡಗುರು|

ತಿದ್ದಿದರೆ ತಿರುಗಿ ಬೀಳುವರು ಪಂಡಿತರು|

ಎದ್ದೇಳು ಸುಮ್ಮನಿರು ಬಿದ್ದವರು ಅರಿಯುವರು|

ಸದ್ದುಗಳ ಮುಗಿಸಿಬಿಡು ವಿಶ್ವನಾಥ|

***

ಸಂವಿಧಾನದಿ ಹದದ ನಿಯಮಗಳ ಬರೆದವರ|

ಸಂಧಾನ ಸೂತ್ರಗಳು ಉರಿಸಿದವು ಬೆಳಕು|

ಸಂದಿ ಗೊಂದಿಗಳಲಿ ಅರಚಾಡಿದ ನಿಂದೆಗಳು|

ಬಂಧಿಯಾದವು ಸೋತು ವಿಶ್ವನಾಥ|

***

ಪದಗಳು ವಜ್ರಭಾರವಾದೊಡೆ ಬೆಲೆಯಿದೆಯೆ|

ಮುದವಲ್ಲ ಬರಹವಿರೆ ಕಬ್ಬಿಣದ ಕಡಲೆ|

ಮೆದುವಾಗಿ ಹಿತವಾಗೆ ಬಲುಸೊಗಸು ತಪ್ಪಿದರೆ|

ಕವಿತೆ ಪಂಜರದೊಳಗೆ ವಿಶ್ವನಾಥ|

-ಕಾ.ವೀ.ಕೃಷ್ಣದಾಸ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್