ಮೇ 18 - ವಿಶ್ವ ಏಡ್ಸ್ ಲಸಿಕೆ ದಿನ

ಮೇ 18 - ವಿಶ್ವ ಏಡ್ಸ್ ಲಸಿಕೆ ದಿನ

* ಪ್ರತಿ ವರ್ಷ ವಿಶ್ವ ಏಡ್ಸ್ ಲಸಿಕೆ ದಿನವನ್ನು ಮೇ 18ರಂದು ಆಚರಿಸಲಾಗುತ್ತದೆ. 

* ಮೇ 18, 1997 ರಂದು ವಿಶ್ವ ಏಡ್ಸ್ ಲಸಿಕೆ ದಿನದ ಪ್ರಸ್ತಾವನೆಯನ್ನು ಮೋರ್ಗನ್ ಸ್ಟೇಟ್ ಯೂನಿವರ್ಸಿಟಿಯ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಮಾಡಿದರು.

* 1998 ರಿಂದ ಪ್ರತಿವರ್ಷ ಮೇ 18ರಂದು ವಿಶ್ವ ಏಡ್ಸ್ ಲಸಿಕೆ ದಿನವನ್ನು ಆಚರಿಸಲಾಗುತ್ತಿದೆ.

ಏಡ್ಸ್ ಅಂದರೇನು?

* ಅಕ್ವೈರ್ಡ್ ಇಮ್ಯುನೋ ಡಿಫಿಷಿಯೆನ್ಸಿ ಸಿಂಡ್ರೋಮ್ ಹೃಸ್ವ ರೂಪವೇ ಏಡ್ಸ್ (Acquired immune deficiency syndrome.) ಇದನ್ನು ರೋಗ ಅನ್ನುವಂತಕ್ಕಿಂತ ರೋಗಗಳ ಸರಮಾಲೆ ಎಂದು ಕರೆಯಬಹುದು. 

* ಇದನ್ನು ಮೊಟ್ಟ ಮೊದಲ ಬಾರಿಗೆ 1981ರಲ್ಲಿ ಅಮೆರಿಕದಲ್ಲಿ ಗುರುತಿಸಲಾಯಿತು. 

* ಭಾರತದಲ್ಲಿ 1986ರಲ್ಲಿ ಭಾರತದ ಚೆನ್ನೈನಲ್ಲಿ ಪತ್ತೆ ಮಾಡಲಾಯಿತು. 

* ಏಡ್ಸ್ ಗೆ ಕಾರಣವಾದ ವೈರಸ್ ಹೆಚ್‍ಐವಿ (Human Immunodeficiency Virus) ಇದನ್ನು ಮೊಟ್ಟ ಮೊದಲ ಬಾರಿಗೆ 1983ರಲ್ಲಿ ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದರು. 

* 1984ರಲ್ಲಿ ಅಮೆರಿಕಾದ ವಿಜ್ಞಾನಿಗಳು ಏಡ್ಸ್ ಗೆ ಕಾರಣವಾಗುವ ವೈರಸ್ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.

(ಮಾಹಿತಿ ಸಂಗ್ರಹ) ಅರುಣ್ ಡಿಸೋಜ, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ