ಮೊದಲ ತೊದಲ ಬರಹ
ಕವನ
ಮೊದಲ ತೊದಲ ಬರಹ
ಒಂದು ಮುಂಜಾನೆ ೫ ಘಂಟಿಯೊಳು
ತಟ್ಟೆಂದು ಎಚ್ಚೆತ್ತೆ ನಿದ್ರಯಿಂದ
ಬರೆಯಬೇಕೆಂದಿತು ನನ್ನ ಮನ
ಕವಿತೆಯೊಂದ.
ನಾ ಹೇಗೆ ಬರೆಯಲಿ ಕವಿತೆ?
ಅದರ ಬಗ್ಗೆ ನನಗೆ ಏನೂ ತಿಳಿಯದು
ಬರೆಯ ಬೇಕೆಂದು ಮಾತ್ರ ಅನಿಸುತ್ತಿದೆ
ಆದರೆ ಬರೆಯ ಬೇಕೆಂದರೆ ಮಾತ್ರ
ಲೇಖನಿ ನಿಂತಲ್ಲೇ ನಿಲ್ಲುತಿದೆ.
ನನೆಗೇಕೆ ಈ ಕವನದ ಹುಚ್ಚು ?
ಕವನವೆಂದರೆ ನನಗಿರಲಿಲ್ಲ ಅಚ್ಚುಮೆಚ್ಚು
ಓದಿಲ್ಲ ನಾನು ಕವನಗಳನ್ನು ಹೆಚ್ಚು
ಇಡಬೇಕೆ ನನ್ನ ಹುಚ್ಚಿಗೆ ಕಿಚ್ಚು ?
ಸಾಹಿತ್ಯದ ಅರಿವಿಲ್ಲ ,
ವ್ಯಾಕರಣದ ಜ್ಞಾನವಿಲ್ಲ ,
ಪದ ಪ್ರಯೋಗದ ಅನುಭವವಿಲ್ಲ ,
ಕವಿತೆಯ ರಚನೆ ಏನೆಂದು ತಿಳಿದಿಲ್ಲ ,
ಆದರೂ ಬರೆಯದೆ ಇರಲು ಮನಸಿಲ್ಲ .
ಇದು ನನ್ನ ಮೊದಲ, ತೊದಲ ಬರಹ
ಪ್ರಯತ್ನಿಸಿರುವೆ ತೀರಿಸಿಕೊಳ್ಳಲು
ಬರಹದ ವಿರಹ
ನನಗೇಕೆ ಈ ಕವನದ ಹುಚ್ಚು ?
ಇಡಬೇಕೆ ನನ್ನ ಹುಚ್ಚಿಗೆ ಕಿಚ್ಚು?
- ಸೆಂದಿಲ್