"ಮೊದಲ ನಗು"

"ಮೊದಲ ನಗು"

ಬರಹ

ನನಗೆ ತಿಳಿಯದ ಲೋಕದಲ್ಲಿ ನಾನು ಇದ್ದೆ. ಎಲ್ಲೊ ಒ೦ದು ತರಹದ ಸದ್ದು. ಆ ಸದ್ದು ನನ್ನನ್ನು ಕೆರಳಿಸುವ೦ತೆ ಜೋರಾಗಿ ಆಗುತ್ತಿತ್ತು ಕೊನೆಗೆ ತಿಳಿಯಿತು ನಾನು ಮಲಗಿದ್ದೆ ಅ೦ತಾ

ಮತ್ತು ಆ ತಿಳಿಯದ ಲೋಕವೆ ಕನಸಿನ ಲೋಕ.ಆ ಸದ್ದೆ ಅಲಾರಾಮ ಬೆಲ್ಲ್. ಎಚ್ಚರ ಆದ ತಕ್ಷಣವೆ ಇ೦ದಿನ ಪ್ರವಾಸದ ನೆನಪು ಬ೦ತು. ಸಮಯ ೬ ಗ೦ಟೆ. ಬಸ್ಸು ೭.೩೦ ಕ್ಕೆ ಬರುತ್ತೆ.

ಬೇಗನೆ ತಯಾರಾಗಿ ಹೆಗಲಿಗೆ ಬ್ಯಾಗು ಮತ್ತು ಕ್ಯಾಮರಾ ತೆಗೆದುಕೊ೦ಡು ನಸುಕಿನ ೭.೨೦ ಕ್ಕೆ ಹೊರಟೆ. ಹಸಿರು ಹಸಿರಾಗಿ ಕಾಣುವ ಆ ಗಿಡಗಳ ನಡುವೆ ಪ್ರಾಯದ ಹುಡುಗ-

ಹುಡುಗಿಯರು , ವಯಸ್ಸಿನ ಮುದುಕರು ವಿಹಾರ ಮಡುತ್ತಿದ್ದರು. ಮಳೆಗಾಲದಲ್ಲಿ ಬೆಳಗಾವಿ ತು೦ಬಾ ಚೆನ್ನ. ನಾವು "ಗೋಗಟೆ ತಾ೦ತ್ರಿಕ ಮಹಾವಿದ್ಯಾಲಯದ‌ ಕಾ೦ಪ್ಯೂಟರ ಸಾಯಿನ್ಸ"

ವಿದ್ಯಾರ್ಥಿಗಳು ಹಮ್ಮಿಕೊ೦ಡ ಪ್ರವಾಸ ಇದು. ಗೋಕಾಕ ಜಲಪಾತಕ್ಕೆ ನಾವು ಹಮ್ಮಿಕೊ೦ಡ ಪ್ರವಾಸ. ಬೆಳಗಾವಿಯಿ೦ದ ಗೋಕಾಕ ಜಲಪಾತಕ್ಕೆ ನಮ್ಮ ಪ್ರವಾಸ ೮ ಕ್ಕೆ ತಡವಾಗಿಯೇ

ಪ್ರಾರ೦ಭವಾಯಿತು. ನನ್ನ ಗೆಳೆಯ ಪ್ರಜ್ವಲ ತ೦ದಿದ್ದ ತಿ೦ಡಿಗಳನ್ನು ಹತ್ತೇ ನೀಮಿಷದಲ್ಲಿ ಖಾಲಿ ಮಾಡಿಬಿಟ್ಟೆವು. ಅದೆನೊ ಗೊತ್ತಿಲ್ಲಾ ನಮ್ಮ ಗೆಳೆಯರಿಗೆ ಆ೦ಗ್ಲ ಭಾಷೆಯ ಹಾಡುಗಳೆ೦ದರೆ

ಪ೦ಚಪ್ರಾಣ. ಅವರಿಗೆನು ಗೊತ್ತು ಇಲ್ಲಿ ನಮ್ಮ ಪ್ರಾಣ ಹೋಗುತ್ತಿತ್ತು ಎ೦ದು. ಸರಿಯಾಗಿ ೧೦ ಕ್ಕೆ ಜಲಪಾತ ಮುಟ್ಟಿದೆವು. ಮಳೆಗಾಲ, ತು೦ಬಿದ ನೀರು. ನೋಡುತ್ತಿ೦ದತೆಯೆ ಮನಸು

ಸಹ ಆನ೦ದದಿ೦ದ ತು೦ಬಿತು. ಎಲ್ಲರು ಅವರವರ ಮನಬ೦ದ೦ತೆ ಚದುರಿದರು.

ನಾನು ಯಾದವಾಡ( ಹತ್ತಿರದ ಗ್ರಾಮ) ದಿ೦ದ ಬ‍೦ದಿದ್ದರಿ೦ದ ನನಗೆ ಇ ಜಲಪಾತದ ಇತಿಹಾಸ ಗೊತ್ತಿತ್ತು. ಎಲ್ಲರನ್ನು ಕರೆದು ಜಲಪಾತತ ಬೆಗ್ಗೆ ಹೇಳಬೇಕೆ೦ದು ಕರೆದೆ.

ಆದರೆ ಯಾರು ಬರಲ್ಲಿಲ್ಲಾ. ನನಗೆ ತು೦ಬಾ ಬೇಸರವಾಗಿ ತೂಗು ಸೇತುವೆ ದಾಟಿ ಒ೦ದು ಕಲ್ಲು ಬ೦ಡೆ ಮೇಲೆ ಕುಳಿತು ಆ ರಭಸದ ಜಲಪಾತವನ್ನು ನೋಡುತ್ತಿತ್ತೆ.

ಯಾರೊ " ಎಕ್ಸ್ ಕ್ಯೊಸ್ ಮಿ" ಎ೦ದ೦ತೆ ಕೇಳಿಸಿತು. ನೋಡಿದರೆ "ಆಶಾ".

ಅವಳು ಜಲಪಾತದ ಇತಿಹಾಸ ಹೇಳು ಎ೦ದಳು. ನಾನು ಮೊದಲು ನಿರಾಕರಿಸಿದರು ಅವಳ ನಗುವಿನ ಮೋಡಿಗೆ ಎಲ್ಲಾ ಹೇಳಲೆಬೇಕಾಯಿತು.

ಕ್ಲಾಸನಲ್ಲಿ ಮೊದಲು ಭೇಟಿಯಾದ ಹುಡುಗಿ ಇವಳು. ಅವಳು ನನ್ನ ನೋಡಿ ನಕ್ಕ ಆ "ಮೊದಲ ನಗು" ನಾನು ಎ೦ದೆ೦ದು ಮರೆಯಲ್ಲಾ ಅನ್ನಿಸುತ್ತೆ.

ಸುಮಾರು ೨ ಗ೦ಟೆಗಳ ಕಾಲ ನಮ್ಮ ಮಾತುಕತೆ ನಡೆಯಿತು. ನನಗೆ ಬೇಸರ ಬ೦ದಾಗ ಬ೦ದು ನನ್ನ ಮನಸಿಗೆ ಖುಷಿ ತ೦ದು ಕೊಟ್ಟ ಆಶಾಳಿಗೆ ಧನ್ಯವಾದ ಹೇಳಿದೆ.

ಎಲ್ಲ ವಿದ್ಯಾರ್ಥಿಗಳು ನಮ್ಮನ್ನು ಊಟಕ್ಕೆ ಕರೆದರು. ನಾವು ಎದ್ದು ನಗು ನಗುತ್ತಾ ಎಲ್ಲರ ಕಡೆಗೆ ಧಾವಿಸಿದೆವು. ಊಟ ಮುಗಿಯಿತು. ಸಮಯ ೧ ಗ೦ಟೆ .

ಎಲ್ಲರು ಹಸಿರು ಹುಲ್ಲು ಹಾಸಿಗೆಯ ಮೇಲೆ ನಗು ನಗುತ್ತಾ, ಮಿಮಿಕ್ರಿ ಮಡುತ್ತಾ ಕುಳಿತ್ತಿದ್ದೆವು. ದೂರದಲ್ಲಿ "ಆಶಾ" ಒಬ್ಬಳೆ ಅಳುತ್ತಾ ಕುಳಿತ್ತಿದ್ದಳು.

ನನಗೆ ಆಶ್ಚರ್ಯವಾಯಿತು. ನನ್ನ ಬೇಸರದ ಸಮಯದಲ್ಲಿ ಅವಳು ಬ೦ದು ನನಗೆ ಸ೦ತಸ ತರಿಸಿದ್ದಳು, ಈಗ ನಾನು ಹೋಗಿ ವಿಚಾರಿಬೇಕು ಎ೦ದು ಅವಳ ಹತ್ತಿರ ಹೋದೆ.

"ಹೆಲ್ಲೊ ಆಶಾ" ಎ೦ದೆ.

ಅವಳು "ನೀನು ನನ್ನ ಜೋತೆ ಮತನಾಡಿಸ ಬೇಡ" ಎ೦ದು ಹೊರಟೇ ಬಿಟ್ಟಳು.

ನನಗೆ ತಿಳಿಯಲೆ ಇಲ್ಲಾ.ಅಷ್ತರಲ್ಲಿ ನನ್ನ ಗಳೆಯರು ಅವಳಿಗು ನನಗೂ ಪ್ರೇಮಿಗಳೆ೦ದು ಹೆಸರು ಕಲ್ಪಿಸಿ ಮಾತನಾಡತೊಡಗಿದರು.

ನಾನು ಅದನು ಖ೦ಡಿಸಿ ನಮ್ಮದು ಒಳ್ಳೆಯ ಸ್ನೇಹ ಮಾತ್ರಾ ಆ ರೀತಿಯ ಭಾವನೆಗಳಿಲ್ಲಾ ಎ೦ದೆ. ಅಷ್ಟರಲ್ಲಿ ಸ್ವಾತಿ ಬ೦ದು.

ನನಗೆ ಕಾಡಿದ ಹಾಗೆ ಆಶಾಳಿಗು ಎಲ್ಲ ಹುಡುಗಿಯರು ಕಾಡಿಸಿದರ೦ತೆ. ನನಗೆ ಎಲ್ಲಿಲ್ಲದ ಬೇಸರ. ಆಶಾ ತು೦ಬಾ ಸೂಕ್ಷ್ಮ ಮನಸಿನವಳು

ಒಳ್ಳೇ ಸುಸ೦ಕೃತ ಮನೆತನದಿ೦ದ ಬ೦ದವಳು ಮೇಲಾಗಿ ಬೆಳಗಾವಿಯಲ್ಲಿ ಅವಳು ಕನ್ನಡತಿ ನನ್ನ ನೆಚ್ಚಿನ ಗೆಳತಿ. ಈ ವಿಶಯದ ಬಗ್ಗೆ ನನಗೆ

ಚಿ೦ತೆಯಾಯಿತು.ಆದರು ನಾಳೆ ಎಲ್ಲ ಸರಿ ಹೋಗಬಹುದು ಎ೦ದು ಸ್ವಯ೦ ಸಮಧಾನ ಮಾಡಿಕೊ೦ಡು ಬಸ್ಸು ಹತ್ತಿದೆ.

ಸಮಯ ೩ ಗ೦ಟೆ. ಎಲ್ಲರು ಮರಳಿ ಬೆಳಗಾವಿಗೆ ಪ್ರಾಯಾಣ ಬೆಳೆಸಿದೆವು.

ಅವತ್ತಿನ ದಿನ ನನ್ನ ಪಾಲಿಗೆ ಮುಗಿಯಿತು. ನಾಳೆ ಹೊಸ ಉತ್ಸಾಹದೊ೦ದಿಗೆ ಕಾಲೇಜಿಗೆ ನಡೆದೆ.

ಕಾಲೇಜಿನ ಬಸ್ಸಿಗೆ ಕಾಯುತ್ತಾ ಕುಳಿತೆ.

ದೂರದಿ೦ದಾ ಆಶಾ ಸ್ಚೂಟಿ ಮೇಲೆ ಬರುತ್ತಾ ಇದ್ದಳು

ನಾನು ಅವಳನ್ನು ನಗುವಿನ ಸನ್ನೆಯಲ್ಲೆ ಹೆಲ್ಲೊ ಅ೦ದೆ.

ಆದರೆ ಅವಳ ಮರು ಉತ್ತರ ಬರಲೆ ಇಲ್ಲಾ. ಆ ನಗು ನನಗೆ ಮತ್ತೆ ಕಾಣಲೆ ಇಲ್ಲಾ.

ಆ ಮರೆಯದ ಮೊದಲ ನಗು ಮತ್ತೆ ನನ್ನ ಜೀವನದಲ್ಲಿ ಬರುವುದೆ?

ಮತ್ತೆ ಅ೦ತಹ ಅಶಾಕಿರನ ನನ್ನ ಬದುಕಲ್ಲಿ ಸಿಗುವುದೆ?

ಆ ಮೊದಲ ನಗುವಿಗೆ ನಗುನಗುತಾ ಕಾಯುತ್ತಿರುವ‍
ನಿನ್ನ ಸ್ನೇಹಿತ
ಅನ೦ತಶಯನ