ಮೌನವೇ ಮಾತಾಯಿತು ನಮ್ಮಿಬ್ಬರ ನಡುವೆ

ಮೌನವೇ ಮಾತಾಯಿತು ನಮ್ಮಿಬ್ಬರ ನಡುವೆ

ಕವನ

ದಿನಗಳು ಕಳೆದಿದ್ದವು ನಿನ್ನ ನೋಡದೆ ನನ್ನ ಕಣ್ಣುಗಳು
ದಿನಗಳು ಕಳೆದಿದ್ದವು ನಿನ್ನ ಮಾತುಗಳ ಕೇಳದ ನನ್ನ ಕಿವಿಗಳು
ದಿನಗಳು ಕಳೆದಿದ್ದವು ನಿನ್ನ ಪ್ರೀತಿಯ ಸವಿಯದ ನನ್ನ ಹೃದಯ.


ಎಂದು ನೋಡುವೆನೋ ನಿನ್ನ ನಾನೆಂಬ ಕಾತುರತೆ ತುಂಬಿತ್ತು ಮನದಲ್ಲಿ
ವಿರಹ ವೇದನೆಯ ಹೊತ್ತು  ನಾ ಬಂದೆ ನಿನ್ನ ನೋಡಲು
ನಿನ್ನ ಕಂಡೊಡನೆ ಮೌನವೇ ಮಾತಾಯಿತು ನಮ್ಮಿಬ್ಬರ ನಡುವೆ


ಮುದುಡಿದ ತಾವರೆ ಅರಳಿದಂತಾಯಿತು ನನ್ನ ಮುಖ ನಿನ್ನ ನಗುವ ಕಂಡು
ಮೊದಲ ಭೇಟಿಯ ಸುಂದರ ನೆನಪು ಮರುಕಳಿಸಿತು ಆ ಕ್ಷಣದಲ್ಲಿ
ಆದರೂ ಮೊದಲ ಭೇಟಿಗಿಂತಲೂ ಅತಿ ಸುಂದರ ಈ ಮಧುರ ಕ್ಷಣ.
 

Comments