ಮೌನ ಬೆಳಕು
ಕವನ
ಮೌನ ಬೆಳಕು ಇಂದೂ
ನನಗೆ ಮುತ್ತಾ ಇತ್ತಿತ್ತ || ಪ ||
ಸೊಗಸಲ್ಲಿ ಬಂದು ಕೂತು
ನನ್ನನ್ನು ತಬ್ಬಿತ್ತ
ಮನದೊಳಗೆ ಆಸೆಯ ಹರಡಿ
ಮೈದಡವಿ ಸೆಳೆದಿತ್ತ
ನಗುಮೊಗವ ಚೆಲ್ಲಿತ್ತ
ಸಿಹಿಗನಸ ತುಂಬುತಲಿ
ಮೈಬಳುಕಿಸಿ ನಡುತಿರುಗಿಸಿ
ಕೈಹಿಡಿದು ನಿಂತಿತ್ತss ||೧||
ಚೆಲುವಿಂದ ತಂಪುಗಾಳಿ
ಒಲವನ್ನು ಚಿಮ್ಮಿಸಿತ್ತ
ಸವಿಯುಡುಗೆಯನ್ನು ತೊಡಿಸಿ
ಸಿಹಿಯನ್ನು ಉಣಿಸಿತ್ತ
ಮುನಿಸನ್ನು ಮುರಿಯುತ ತಾನು
ಹರುಷವನು ನೀಡಿತ್ತ
ಖುಷಿಯಾಗುತ
ಮನಸೆಳೆಯುತ ಹಾಡಿತ್ತss ||೨||
ಜೀವನದ ಕನಸನ್ನು
ನನಸಾಗಿ ತುಂಬಿತ್ತ
ನನಸಿನೊಳು ಹೊಸ ಬದುಕ
ಸುತ್ತೆಲ್ಲ ಹರಡಿತ್ತ
ಚಂದ್ರ ಬೆಳಕಿನ ರೀತಿ
ಒಲವನ್ನು ತೋರಿತ್ತ
ಸೆರೆಯಾಗುತ ಮೈತಣಿಸುತ್ತ
ಒಂದಾಗಿತ್ತss ||೩||
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್