ಯೋಧನಿಗೆ ನಮನ

ಯೋಧನಿಗೆ ನಮನ

ಬರಹ

ತಾಯೆ ಭಾರತಿಯೆ
ನಿನ್ನ ಸಿರಿಯಡಿಗೆ
ಬಂದಿತೊಂದು ಗಂಧ
ತನ್ನ ಜನಕಾಗಿ
ಮಣ್ಣ ಋಣಕಾಗಿ
ಬಲಿಯಾದ ವೀರ ಯೋಧ

ನಾನು ನನದಿಲ್ಲ
ಗುರಿಯೇ ಅವಗೆಲ್ಲಾ
ದೇಶವೊಂದೇ ವ್ಯಾಪ್ತಿ
ಮನದಿ ಅಳುಕಿಲ್ಲ
ಹಗೆಯ ಭಯವಿಲ್ಲ
ಇದುವೇ ಅವನ ರೀತಿ

ಮೋಸದಿಂದ
ಒಳನುಗ್ಗಿ ಬಂದ
ಶತ್ರುವಿಗೆಷ್ಟು ಧೈರ್ಯ
ಹಗೆಯ ಎದೆಯೊಳಗೆ
ನಡುಕ ಹುಟ್ಟಿಸುತ
ಬಂದ ನೋಡು ಯೋಧ

ಮಾತೆ ಭಾರತಿಯೆ
ನಿನ್ನ ರಕ್ಷಣೆಯು
ಅದುವೇ ನನ್ನ ಒಲವು
ಬೇರೇನೂ ಬೇಡೆನು
ಎನುವ ಅವಗೆ
ಸಿಗಲಿ ನಿತ್ಯ ಗೆಲುವು

ನಮಗಾಗಿ ಜೀವ
ತೇಯ್ದಂಥ ವೀರನೆ
ನಿನ್ನತ್ಮಕಿರಲಿ ಶಾಂತಿ
ನಿನಗಾಗಿ ಮಿಡಿವ
ನೂರಾರು ಮನವ
ಗೆದ್ದವನಿಗದುವೆ ಕೀರ್ತಿ

ಮುಂಬೈ ಹೋರಾಟದಲ್ಲಿ ವೀರಮರಣವನಪ್ಪಿದ ಹೇಮಂತ್ ಕರ್ಕರೆ , ವಿಜಯ್ ಸಾಲಸ್ಕರ್ , ಅಶೋಕ್ ಕಾಮ್ಟೆ ಇವರಿಗೆ ಈಕವನವೊಂದು ಅಶ್ರು ತರ್ಪಣ