ರಜನಿ ಮೇನಿಯಾ ಆಯ್ತು ಈಗ ಸಚಿನ್ ಮೇನಿಯಾ..

ರಜನಿ ಮೇನಿಯಾ ಆಯ್ತು ಈಗ ಸಚಿನ್ ಮೇನಿಯಾ..

ಇಷ್ಟು ದಿನ ರಜನಿ ಬಗ್ಗೆ ದಿನಕ್ಕೊಂದು ಸಂದೇಶಗಳು ಬರುತ್ತಿದ್ದವು. ಈಗ ಸಚಿನ್ ಸರಣಿ ಶುರುವಾಗಿದೆ ಎಂದೆನಿಸುತ್ತೆ. ಏಕೆಂದರೆ ನೆನ್ನೆ ನನ್ನ ಮೊಬೈಲ್ ಗೆ ಬಂದ ಸಂದೇಶವನ್ನು ನೋಡಿ ಹಾಗೆನಿಸಿತು. ಅದರ ಒಂದು ನೋಟ ಇಲ್ಲಿದೆ 


೧) ನನ್ನ ಮಗ ಸಚಿನ್ ತೆಂಡೂಲ್ಕರ್ ಹಾಗೆ ಆಗಬೇಕು (ಬ್ರಯಾನ್ ಲಾರ, ವೆಸ್ಟ್ ಇಂಡೀಸ್)


೨) ನಾವು ಸೋತಿದ್ದು ಭಾರತ ಎಂಬ ತಂಡದ ಎದುರು ಅಲ್ಲ, ಸಚಿನ್ ಎಂಬ ಮಾಂತ್ರಿಕನ ಎದುರು (ವೆಟ್ಟೊರಿ, ನ್ಯೂಜಿಲೆಂಡ್ ನಾಯಕ)


೩) ಸಚಿನ್ ನಮ್ಮೊಂದಿಗೆ ವಿಮಾನದಲ್ಲಿದ್ದರೆ ಏನು ಅಪಘಾತ ಸಂಭವಿಸುವುದಿಲ್ಲ (ಹಶಿಮ್ ಆಮ್ಲ, ದಕ್ಷಿಣ ಆಫ್ರಿಕಾ)


೪) ಸಚಿನ್ ಬ್ಯಾಟ್ಟಿಂಗ್ ಗೆ ಬ್ಯಾಟ್ ಬೇಕೇ ಬೇಕೆಂದಲ್ಲ, ಆತ ಊರುಗೋಲಿಂದಲೂ ಆಡಬಲ್ಲ (ವಾಸಿಂ ಅಕ್ರಂ, ಪಾಕಿಸ್ತಾನ್)


೫) ಪ್ರಪಂಚದಲ್ಲಿ ಎರಡು ರೀತಿಯ ಬ್ಯಾಟ್ಸಮನ್ ಗಳು ಇದ್ದಾರೆ, ಒಂದು ಸಚಿನ್ ರೀತಿ ಆದರೆ, ಉಳಿದವರೆಲ್ಲ ಒಂದು ರೀತಿ (ಆಂಡಿ ಫ್ಲವರ್, ಜಿಂಬಾಬ್ವೆ)


೬) ನಾನು ದೇವರನ್ನು ನೋಡಿದ್ದೇನೆ, ಆತ ಭಾರತ ತಂಡದ ಟೆಸ್ಟ್ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಾನೆ (ಮ್ಯಾಥ್ಯೂ ಹೇಡನ್, ಆಸ್ಟ್ರೇಲಿಯಾ)


೭) ಸಚಿನ್ ಆಡುವಾಗ ನಾನು ನನ್ನನ್ನು ಕಾಣುತ್ತೇನೆ (ಡಾನ್ ಬ್ರಾಡ್ಮನ್)


೮) ನೀವು ಏನಾದರೂ ತಪ್ಪು ಮಾಡಬೇಕಾದರೆ ಅದನ್ನು ಸಚಿನ್ ಬ್ಯಾಟ್ಟಿಂಗ್ ಮಾಡಬೇಕಾದರೆ ಮಾಡಿ, ಏಕೆಂದರೆ ಆ ಸಮಯದಲ್ಲಿ ದೇವರು ಸಚಿನ್ ಆಟವನ್ನು ನೋಡುತ್ತಿರುತ್ತಾರೆ (ಆಸ್ಟ್ರೇಲಿಯಾ ಅಭಿಮಾನಿ)

Comments