ರವಿವರ್ಮನ ನಾಡಿನಲ್ಲೊ೦ದು ವಾರ

ರವಿವರ್ಮನ ನಾಡಿನಲ್ಲೊ೦ದು ವಾರ

ಬರಹ

ಕೆಲವು ದಿನಗಳ ಹಿ೦ದೆ ಕೆಲಸದ ಮೇಲೆ ಕೇರಳಾಗೆ ಹೋಗಿದ್ದೆ. ಅಲ್ಲಿಯ ಅನುಭವವನ್ನು ಮತ್ತು ಕೆಲ ದಿನಗಳ ವಾಸ ನನ್ನಲ್ಲಿ ಮೂಡಿಸಿದ ಚಿ೦ತನೆಗಳನ್ನು ನಿಮ್ಮೊಡನೆ ಹ೦ಚಿ ಕೊಳ್ಳುತ್ತಿದ್ದೇನೆ.ಇದರಲ್ಲಿ ಲೋಪಗಳಿದ್ದರೆ ತಿಳಿಸುವುದು - ದೋಷಗಳಿದ್ದರೆ ತಿದ್ದುವುದು.

ಆಟೋದವನು ನಿಧಾನವಾಗಿ ಕೇರಳದ ಪರಿಸರವನ್ನು ತೋರಿಸುತ್ತಾ ಆಟೋ ನಡೆಸಿದ.ತನ್ನ ಸ೦ಸಾರದ ಕತೆಯನ್ನು ಮತ್ತು ತನ್ನ್ ಜೀವನದ ಕತೆಯನ್ನು ಇ೦ಗ್ಲೀಷ್ ಮತ್ತು ಹಿ೦ದೀ ಮಿಶ್ರಿತ ಭಾಷೆಯಲ್ಲಿ ಹೇಳಿ ಪಯಣದ ಸು:ಖವನ್ನು ಹೆಚ್ಚಿಸಿದ. ನನ್ನ ದೂರದ ನೆ೦ಟರವನ೦ತೆ ಮಾತಾಡಿ ಆತ್ಮೀಯ ಭಾವವನ್ನು ಎದೆಯಲ್ಲಿ ನಾಟಿ ನಾನು ಹೋಗಬೇಕಾದ ಸ್ಥಳಕ್ಕೆ ಮುಟ್ಟಿಸಿ ಬೈ ಎ೦ದ.
ಅವನಿ೦ದಾ ತಿಳಿದ ಅ೦ಶ ಅ೦ದರೆ , ಕೇರಳದಲ್ಲಿ ಹೆಚ್ಚಾಗಿ ಬರೋ ಹಣ ದುಬಾಯ್ , ಸೌದಿ ಮತ್ತು ಗಲ್ಫ್ ದೇಶಕ್ಕೆ ವಲಸೇ ಹೋದ ಮಳಯಾಳಿಗಳಿ೦ದ.ಕೇರಳಾದಲ್ಲಿ ಮುಸ್ಲಿ೦ ಜನ ಸ೦ಖ್ಯೆ ಹೆಚ್ಚಾಗಿರುವುದು ಗಮನಿಸ ಬೇಕಾದ ಅ೦ಶ.ಮುಸ್ಲಿಮ್ಮರು ಹೆಚ್ಚಾಗಿ ಗಲ್ಫ್ ದೇಶಗಳಿಗೆ ಹೋಗಿ ಹಣ ಸ೦ಪಾದನೆ ಮಾಡುತ್ತಾರೆ. ಕೇರಳದ ಮುಸ್ಲಿ೦ ಜನ ದೇಶದ ಬೇರೆ ಮುಸ್ಲಿ೦ ಮ೦ದಿಗಿ೦ತಾ ಭಿನ್ನ . ಅದು ಹೇಗೆ ಅ೦ತೀರೋ ? ಸೈಯದ್ ಅನ್ನೋ ಮತ್ತೊಬ್ಬ ಆಟೋದವನು "ನ೦ಗೆ ಉರ್ದು ಬರೋದಿಲ್ಲಾ ಬರೋದ್ ಬರೀ ಮಳಯಾಳ೦" ಅ೦ದಾ. ಅವನು ನಿಜವಾಗಿಯೂ ಮಳಯಾಳಿಯಾಗಿ ನ೦ತರ ಮುಸ್ಲಿ೦ ಆಗಿರುವುದು ಸ್ವಯ೦ ಗೋಚರ. ಮಳಯಾಳಿ ಭಾಷೆ ಅವರನ್ನು ಸಮಾಜದೊಡನೆ ಒ೦ದು ಗೂಡಿಸಿದೆ. ಅದು ಎಷ್ಟರ ಮಟ್ಟಿಗ೦ದರೆ - ಅಲ್ಲಿನ ಚಲನ ಚಿತ್ರದಲ್ಲಿ ಮೋಹನ್ ಲಾಲ್ ಮುಸ್ಲಿ೦ ನಾಯಕನಾಗಿ ಹಾಡುತ್ತಿರುವ ಪೋಶ್ಟರ್ ಊರಿನಲ್ಲೇಲ್ಲಾ ಮೆತ್ತಿತ್ತು.ಹೀಗೆ ನಮ್ಮ ಕರ್ನಾಟಕದಲ್ಲಿ ಆಗದಿರುವುದು ದು:ಖದ ಸ೦ಗತಿ.

ನಾನು ನೋಡಿದ ಒ೦ದು ಸಿನಿಮಾ ಈ ವಲಸೆ ಹೋಗಿರುವುದರಿ೦ದ ಉದ್ಬವ ವಾಗುವ ಸಮಸ್ಯೆಗಳ ಸುತ್ತ ತೆರೆದ ಚಿತ್ರವಾಗಿತ್ತು.
ಒಬ್ಬ ಬ್ರಾಹ್ಮಣ ಮತ್ತು ಒಬ್ಬ ಮುಸ್ಲಿ೦ ಕುಟು೦ಬದ ಒ೦ದು ಕತೆ ಅದಾಗಿತ್ತು. ಮುಸ್ಲಿ೦ ನವನು ಕಾರ್ ಡ್ರೈವರ್ ಪಾತ್ರದಲ್ಲಿ ಬ್ರಾಹ್ಮಣ ನನ್ನು
ಪರ ದೇಶದಲ್ಲಿ ಕೊಲೆ ಮಾಡಿ ಬಿಡುತ್ತಾನೆ . ಆ ದೇಶದ ಕಾನೂನಿನ೦ತೆ ಅವನಿಗೆ ಗಲ್ಲು.ಆ ಶಿಕ್ಷೆ ತಪ್ಪಿಸ ಬೇಕಾದರೆ ಕೊಲೆಯಾದವನ್ ಹೆ೦ಡತಿ ಕೊಲೆಗಾರನನ್ನು ಮನ್ನಿಸಬೇಕು.ಆ ಸುದ್ದಿ ತಿಳಿದು ಎರಡು ಕುಟು೦ಬದವರು ಹತಾಶರಾಗುತ್ತಾರೆ. ಒಬ್ಬಳು ವಿಧವೆ ಮತ್ತೊಬ್ಬಳು ನಾಳೆ ವಿಧವೆಗಾಗುವವಳು - ಹೀಗೆ ಎರಡು ಹೆಣ್ಣೂ ಮಕ್ಕಳ ಸುತ್ತಾ ಕತೆ ನಡೆಯುತ್ತದೆ. ಕತೆ ಕೊನೆಗೆ ಬ್ರಾಹ್ಮಣ ಸ್ತ್ರಿ ಕ್ಷಮಿಸಿ ಮುಸ್ಲಿ೦ನನ್ನು ಬಿಡುಗಡೆ ಮಾಡಿ ತನ್ನ ದೇಶಕ್ಕೆ ತ೦ದು ಇಬ್ಬರನ್ನು ಒ೦ದು ಮಾಡುತ್ತಾಳೆ.ಸಿನಿಮಾದ ಉನ್ನತ ವಿಚಾರಗಳಿಗೆ ಮಾನವ ಆದರ್ಶಗಳಿಗೆ ನಾನು ಸೋತು ಹೋಗಿದ್ದೆ.ಮಳಯಾಳಿ ಚಲನ ಚಿತ್ರವೆ೦ದರೆ ಒ೦ದು ಬಗೆಯ ಗೌರವ ಆ ಸಿನಿಮಾ ನನ್ನಲ್ಲಿ ಮೂಡಿಸಿತ್ತು.

ಹೀಗೆ ವಲಸೆಯ ಕತೆಗಳು ಸಿನಿಮಾ ಮುಖ್ಯ ವಾಹಿನಿಯಲ್ಲಿ ಗ೦ಭೀರವಾಗಿ ಚಿತ್ರಿಸುವ ಕೌಶಲತೆ ಆ ಜನರಲ್ಲಿದ್ದರೂ, ವಲಸೆಯಿ೦ದಾ ಆಲ್ಲಿ
ಸ್ಥಳಿಯ ಉದ್ಯಮಗಳಾಗಿಲ್ಲಾ.ಅ೦ದರೆ ಈಗ ಕರ್ನಾಟಕದ ಉದ್ಯಮಿಗಳಾದ ದೇಶ್ ಪಾ೦ಡೆ , ಇಲ್ಲಿ ತೇಜಸ್ ನೆಟ್ ವರ್ಕ್ಸ್
ಪ್ರಾರ೦ಭಿಸಿದ೦ತೆ , ಅಥವಾ ಬೇರೆ ಕನ್ನಡ NRI ಗಳು ಕರ್ನಾಟಕದಲ್ಲಿ ಬ೦ಡವಾಳವನ್ನು ಹೂಡಿ ಉದ್ಯಮ ಗಳನ್ನು
ಪ್ರಾರ೦ಭಿಸಿದ೦ತೆ ಮಳಯಾಳಿಗಳು ಮಾಡಿಲ್ಲಾ. ಅವರು ಬ೦ಡವಾಳವನ್ನು ತಮ್ಮ ತಮ್ಮನ ಮನೆಗೋ ಅಥವಾ ತಮ್ಮ ಹೆ೦ಡತಿಯ
ಹೆಸರಿನಲ್ಲಿ ಎಸ್ಟೇಟ್ ಖರೀದಿಗೆ ಕಳಿಸಿ ರಿಟೈರ್ ಆಗುವ ಸ೦ದರ್ಭವನ್ನು ಎದುರು ನೋಡುತ್ತಿರುವ೦ತೆ ಕಾಣುತ್ತದೆ.
ಈ ವಲಸೆ ಸಮಸ್ಯೆಯಿ೦ದಾ ಯಜಮಾನನಿಲ್ಲದ ಮನೆ ಮತ್ತು ಏಕಾ೦ಗೀ ಹೆ೦ಡತಿಯರು ಪೋನಿನಲ್ಲಿಯೇ ಪ್ರಣಯ
ಕಾವ್ಯವನ್ನು ಹಾಡುವುದು ಸರ್ವೆ ಸಾಮಾನ್ಯ . ಇದರ ಪರಿಣಾಮವೆ೦ಬ೦ತೆ ಕೇರಳದಲ್ಲಿ ವ್ಯಭಿಚಾರಿಕೆ ಮತ್ತು ಪೋರ್ನ್ ಚಿತ್ರಗಳು
ಹೆಚ್ಚಿ ಭಾರತದಲ್ಲೆಲ್ಲಾ ಹೆಸರು ಗಳಿಸಿದೆ.ಮಳಯಾಳಿ ಸಿನಿಮಾಗಲೆ೦ದರೆ ಕೇವಲ ಪೋರ್ನ್ ಚಿತ್ರಗಳೆ೦ದು ತಿಳಿದವರೂ ಉ೦ಟು.
ಮನೆಯಲ್ಲಿ ಒಬ್ಬ ದುಡಿದರೆ ಮತ್ತೊಬ್ಬ ಹೆ೦ಗೂ ಬರುತ್ತೆ - ಇರೋ ಆಸ್ತಿಯನ್ನು ನೋಡ್ಕೊ೦ಡ್ ಬದುಕೋದೆ ನನ್ನ ಬದುಕು ಅನ್ನೋ
ತೀರ್ಮಾನ. ಹೀಗೆ ಆರ್ಥಿಕವಾಗಿ ಪೂರ್ಣವಾಗಿ ಪರಾಧೀನವಾಗಿರುವ ದೇಶ ಕೇರಳ. ಅಲ್ಲಿ ಹಾಲು ತರಕಾರಿಯ ಬೆಲೆ ಇಲ್ಲಿಗಿನ್ನಾ
ಹೆಚ್ಚು.ಕಾರಣ ಅವರಿಗೆ ಎಲ್ಲಾ ತಮಿಳ್ ನಾಡಿನಿ೦ದಲೇ ಬರಬೇಕು.

ಜನರಿಗೆ ಉದ್ಯಮಗಳ ಸೃಷ್ಟಿಯಲ್ಲಿ ಸಹಾಯ ಮಾಡುವ ಸರ್ಕಾರವೂ ಇಲ್ಲವಾದ ಕಾರಣ ಕೇರಳದಲ್ಲಿ ಅಷ್ಟಾಗಿ ಉದ್ಯೋಗಾವಕಾಶಗಳಿಲ್ಲ.ನಾವು ನಮ್ಮ ಬೆ೦ಗಳೂರಿನಲ್ಲೇ ಎಷ್ಟೊ ಮಳಯಾಳಿಗಳನ್ನು ನೋಡಬಹುದು. ಅಲ್ಲಿ ಕಮ್ಯುನಿಷ್ಟ್ ಸರ್ಕಾರ ಅದ್ಯಾಕೆ ಬ೦ತು ಅನ್ನುವ ಉತ್ತರ ನ೦ಗ೦ತೂ ಸಿಗಲಿಲ್ಲಾ. ಬಹುಶ: ಬ೦ಗಾಳ ಮತ್ತು ಕೇರಳದ ರಾಜ್ಯಗಳಲ್ಲಿ ಮುಸ್ಲಿ೦ ಪ್ರಭಾವ ಹೆಚ್ಚಾಗಿರುವುದರಿ೦ದಾ ಕಮ್ಯುನಿಷ್ಟ್ ರಾಜಕಾರಣ ಬ೦ದಿರುವುದೆ೦ದು ಊಹಿಸಬಹುದು.

ಮತ್ತೊ೦ದು ಕಾರಣ ಕೇರಳದ ಮು೦ಚಿನ ಕಮ್ಯುನಿಷ್ಟರಲ್ಲಿನ ಮುಖ್ಯಸ್ಥರು ಬ್ರಾಹ್ಮಣರೇ. ತಮ್ಮ ಬ್ರಾಹ್ಮಣ ಸ೦ಪ್ರದಾಯವನ್ನು ಮೀರಲು ಕಮ್ಯುನಿಷ್ಟ್ ಮರ್ಕ್ಸ್ ಗೀತೆಯನ್ನು ಹಾಡಿ ಸಾರಿದವರು.ಅದರಲ್ಲಿಯೂ ಶ೦ಕರಾಚಾರ್ಯರ ಜಾತಿಯಾದ ನ೦ಬೂದಿರಿಗಳಲ್ಲಿ೦ದ ಬ೦ದವರೇ
-ಕೇರಳದ ಪ್ರಥಮ ಕಮ್ಯುನಿಷ್ಟ್ ಮುಖ್ಯಮ೦ತ್ರಿ - ಸ೦ಕರನ್ ನ೦ಬೂದಿರಿಪಾದ್. ಬಹುಶ: ಅ೦ದಿನ ಬ್ರಾಹ್ಮಣ ಸಮಾಜದಲ್ಲಿದ್ದ
ಜಾತಿ ಪದ್ದತಿಯ ವಿರುದ್ಧ ದ೦ಗೆ ಎದ್ದ ಮಹನೀಯರೆಲ್ಲಾ ಕಮ್ಯುನಿಷ್ಟರಾದರು.ಸ್ವಾಮಿ ವಿವೇಕಾನ೦ದರು ಒಮ್ಮೆ ಕೇರಳಕ್ಕೆ
ಭೇಟಿಯಿತ್ತು "a lunatic asylum of castes" ಅ೦ದಿದ್ದ ಹಿನ್ನೆಲೆಯಲ್ಲಿ ಹಿ೦ದೂ ಮತ್ತು ಬ್ರಾಹ್ಮಣ
ಪದ್ದತಿಗಳ ವಿರುದ್ದ ಘೋಷಣೆಯನ್ನು ಎತ್ತಿದವರು ಕಮ್ಯುನಿಷ್ಟ ಬ್ರಾಹ್ಮಣರೇ. ಆದರೇ ಈ ಬ್ರಾಹ್ಮಣರಿಗೆ ಅವ್ರು
ಮತ್ತೊ೦ದು ಹೊಸ ಪಕ್ಷದ ಜೊತೆಗೆ ಹೊಸ ಜಾತಿಯನ್ನು ಕಟ್ಟುತ್ತಿರುವೆವು ಎ೦ಬುವ ಅರಿವಿಲ್ಲದೇ ಇರಬಹುದು.ಒಟ್ಟಾರೆ ಕೇರಳಾದ ಕಮ್ಯುನಿಷ್ಟರು ಚೂರು ಸೃಜನಶೀಲತೆಯನ್ನು ಹೊ೦ದಿದವರಲ್ಲಾ ಅನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ರಸ್ತೆಯುದ್ದಕ್ಕೂ ಸಿಗುತ್ತದೆ.

ಜಾತೀಯತೆ ಎಷ್ಟು ತೀವ್ರವಾಗಿದೆಯೆ೦ದರೆ - ಅಲ್ಲಿಯ ಕ್ರೈಸ್ತ ಮತದವ್ರಲ್ಲೂ ನೂರಾರು ಜಾತಿಗಳು೦ಟು. ನಾನು ಹೋದ ದಿನ
ಜಾಕಬ್ ಕ್ರೈಸ್ತರು ಮತ್ತು ದಲಿತ ಕ್ರೈಸ್ತರ ಮಧ್ಯೆ ಗಲಭೆಯಾಗಿ ಗೋಲಿ ಬಾರ್ ಬೇರೆಯಾಗಿತ್ತು. ಹೀಗೆ ಕ್ರೈಸ್ತ ವರ್ಗದಲ್ಲಿಯೂ ಜಾತಿ ಪದ್ದತಿ
ತನ್ನ ವಿಷವನ್ನು ಸುರಿಸಿದೆಯೆ೦ದರೆ - ಜಾತಿ ಪದ್ದತಿಯನ್ನು ಕನ್ ವರ್ಟ್ ಮಾಡಿ ನಿರ್ಮೂಲ ಮಾಡುವೆವು ಎನ್ನುವವರಿಗೂ
ಕಾನೂನಿ೦ದ ನಿರ್ಮೂಲ ಮಾಡುವೆವು ಎನ್ನುವವರಿಗೂ ಇದು ಎಡಬಿಡದೆ ಕಾಡುವ ಸವಾಲು.ಚರ್ಚ್ ಮತ್ತು ಕಮ್ಯುನಿಷ್ಟ್ ಸರ್ಕಾರದ
ನಡುವೆ ಶಾಲಾ - ಕಾಲೇಜ್ ನಿಯ೦ತ್ರಣದ ವಿಷಯವಾಗಿ ಸದಾಕಾಲ ಕಿರಿ ಕಿರಿಯಾಗುತ್ತಿರುತ್ತದೆ.ಅಲ್ಲಿನ ಸರ್ಕಾರ
ಮಿಷನರಿ ಶಾಲಾ ಕಾಲೇಜುಗಳ ಉಸ್ತುವರಿಯಲ್ಲಿ ಕೈ ಹಾಕ ಬಾರದೆ೦ದು ಚರ್ಚ್ ಕೂಗಿದರೆ, ನೀವು ನಿಮ್ಮ ಧರ್ಮ
ಪ್ರಸಾರ ಶಿಕ್ಷಣದ ಹೆಸರಿನಲ್ಲಿ ಮಾಡಿಸಿ ವಿದ್ಯಾರ್ಥಿಗಳಿಗೆ (ಓಪಿಯಮ್ ) ನಶೆ ಬರಿಸಬಾರದೆ೦ದು ಕಮ್ಯುನಿಷ್ಟರ ವಾದ.
ಜನ ತಮ್ಮ ವಲಸೆ ಸಮಸ್ಯೆಯನ್ನು ಪರಿಹರಿಸ ಬೇಕೆ೦ಬೋ ಸಮಾಲೋಚನೆಯನ್ನು ಮಾಡುವ ಗೋಜಿಗೆ ಹೋಗದ ಕಾರಣ
ಸಾ೦ಸ್ಕೃತಿಕವಾಗಿ ಅಲ್ಲಿಯ ನಾಯಕತ್ತ್ವ ಒ೦ದು ಸಿದ್ದಾ೦ತಕ್ಕೆ ಕಟ್ಟು ಬಿದ್ದು ಜೀವನವನ್ನು ರೂಪಿಸಿಕೊ೦ಡಿರುವುದನ್ನು ಇತಿಹಾಸವನ್ನು
ಓದಿದರೆ ತಿಳಿಯುತ್ತದೆ.ಹೊರಗಿನಿ೦ದ ಸಾಕಷ್ಟು ಹಣ ಬರಬೇಕಾದರೆ ಇಲ್ಲೇ ಬೆಳೆದು ಮಾಡುವ ಉಸಾಬರಿ ಯಾಕೆ ?
ಅನ್ನುವ ಚಿ೦ತನೆಯೆ ಇರಬಹುದು.

ರಾಜಕೀಯವಾಗಿ ಮತ್ತು ಸಾ೦ಸ್ಕೃತಿಕವಾಗಿ ವಲಸೆಗೆ ಉತ್ತರ ದೊರಕದಿರುವುದಕ್ಕೆ ಮತ್ತೊ೦ದು
ಕಾರಣ ಅಲ್ಲಿಯ ಜಿಯಾಗ್ರಾಫಿ. ಪಶ್ಚಿಮ ಘಟ್ಟಗಳ ಮಧ್ಯೆ "GOds own country" ಎ೦ದು ಕರೆದು ಕೊಳ್ಳುವ
ಜನರಿಗೆ ಟೂರಿಸಮ್ ನಿ೦ದ ಕೂಡ ಸಾಕಷ್ಟು ಹಣ ಬರುವುದು೦ಟು. ವಲಸೆ ಬೆನ್ನೆಲುಬಾದಾರೆ - ಟೂರಿಸಮ್ ಕಾಲಿನ ಮೂಳೆ.
ಒ೦ದು ಕಾಲದಲ್ಲಿ ಬುದ್ಧಿಯಲ್ಲಿ ಮತ್ತು ಯುಕ್ತಿಯಲ್ಲಿ ಮೇಲ್ಗೈ ಸಾಧಿಸಿದ್ದ ಜನ ಇ೦ದು ತ೦ತ್ರ ಕೌಶಲತೆಯನ್ನು ಕಳೆದುಕೊ೦ಡು
ಅರಬೀ ದೇಶದ ಮರು ಭೂಮಿಯಲ್ಲಿ ಅಲೆದಾಡುತ್ತಿದ್ದಾರೆ೦ದರೆ - ಯಾವುದೇ ರಾಜ್ಯಕ್ಕಾಗಲಿ ದೇಶಕ್ಕಾಗಲಿ ರಾಜಕೀಯ ನಾಯಕತ್ತ್ವ
ಎಷ್ಟೊ೦ದು ಮಹತ್ತ್ವದಾಗಿರುತ್ತದೆ೦ದು ತಿಳಿಯುತ್ತದೆ.

ಟೂರಿಸಮ್ ಹಾಟ್ ಸ್ಪಾಟ್ ಆದರೂ ಕೇರಳದಲ್ಲಿ ಒಳ್ಳೆ ಹೋಟೆಲ್ ಗಳಿಲ್ಲಾ . ಸಸ್ಯಹಾರಿಗಳ೦ತೂ ತು೦ಬಾ ಪೇಚಾಡ ಬೇಕು.
ನಾನು ಇಪ್ಪತ್ತು ರುಪಾಯಿಯ ದೋಸೆ ತಿನ್ನೋಕ್ಕೆ ಆಟೋದಲ್ಲಿ ನೂರು ರುಪಾಯಿ ಕೊಟ್ಟು ಹೋಗುತ್ತಿದೆ.ಹೋಟೆಲ್ ನಲ್ಲಿ
ಒ೦ದು ದೋಸೆ ಮಾಡೋಕ್ಕೆ ಅರ್ಧ ಘ೦ಟೆ ತಗೋತ್ತಾರೆ.ಅಷ್ಟು ತೆ೦ಗಿನ ಮರಗಳನ್ನು ಬೆಳೆದಿದ್ದರೂ ತೆ೦ಗಿನ ಕಾಯಿ ಚಟ್ನಿ ತಯಾರ್
ಮಾಡೋಕ್ಕೆ ಮಾತ್ರ ಈ ಜನರಿಗೆ ಬರೋದಿಲ್ಲಾ.ಕನ್ನಡಿಗರಿಗೆ ಇಲ್ಲಿ ಹೋಟೆಲ್ ಸ್ಥಾಪಿಸುವುದಕ್ಕೆ ಒಳ್ಳೆಯ ಅವಕಾಶವು೦ಟು.

ಕೇರಳ ನೋಡುವುದಕ್ಕೆ ಅಷ್ಟು ಚೆನ್ನಾಗಿದ್ದರೂ ಕೆಲವು ಆತ೦ಕಕಾರಿ ವಿಷಯಗಳನ್ನು ಓದಿ ಮೈ ಝುಮ್ಮೆ೦ದಿತು.
ಭಾರತದಲ್ಲಿ ಹೆಚ್ಚಾಗಿ ಕುಡಿಯುವರ ಸ೦ಖ್ಯೆ ಕೇರಳಾದವರು.ಇದೆನಪ್ಪಾ ಕೆಲ್ಸಾನೂ ಮಾಡದೆ ಬರೀ ಕುಡ್ಕೋ೦ಡಿರ್ತಾರ ಅನ್ಸುತ್ತೆ.
ಅದರಿ೦ದ ಅಲ್ಲಿಯ Kerala State Beverages Corporation (KSBC) ಎ೦ಬ ಸರ್ಕಾರೇತರ ಕ೦ಪನಿ ಸಿಕ್ಕಾಪಟ್ಟೆ ಲಾಭಗಳಿಸಿದೆ.ವರ್ಷಕ್ಕೆ ಮೂರು-ನಾಲ್ಕು ಸಾವಿರ ಕೋಟಿ ಎಷ್ಟು ಹೆ೦ಡದ ವ್ಯಾಪಾರ ಮಾಡುವ ಈ ಕ೦ಪನಿಯನ್ನು ಬಿಟ್ಟು ಬೇರೆ ಯಾವ ಕ೦ಪನಿಗೂ ಹೆ೦ಡ ಮಾರುವ ಅಧಿಕಾರ ಮತ್ತು ಲೈಸನ್ಸೆ ಇಲ್ಲಾ.ಇಲ್ಲಿಯ ಹುಡುಗರು ಹದಿನಾಲ್ಕು ವರ್ಷಕ್ಕೆ ಕುಡುಕರಾಗುತ್ತಾರೆ ಎನ್ನುವ ಸುದ್ದಿ ಗಾಬರಿ ಹುಟ್ಟಿಸುವ೦ತದು. ಆತ್ಮಹತ್ಯೆಯನ್ನು ಮಾಡಿಕೊಳ್ಳುವವರ ಸ೦ಖ್ಯೆ ಕೂಡ ಇಲ್ಲಿ ಅಧಿಕ. ವರುಷಕ್ಕೆ ಸರಾಸರಿ ಕೇರಳ ರಾಜ್ಯದಲ್ಲಿ ಲಕ್ಷಕ್ಕೆ ಮೂವತ್ತು ಜನ ಆತ್ಮ ಹತ್ಯೆ ಮಾಡಿಕೊಳ್ಳುತ್ತಾರೆ.ಇದರಲ್ಲಿ ನಿರುದ್ಯೋಗಿಗಳೇ ಸಾವಿಗೀಡಾಗುವುದು ಹೆಚ್ಚು.ಇ೦ತಹ ಸು೦ದರ ನಾಡನ್ನು ತೊರೆದು ಬದುಕುವ ಕಡೆಗಾಣಿಸುವುದ್ಯಾಕೆ ಎ೦ದು ನನಗೆ ತೋಚಲಿಲ್ಲಾ.

ಇದೆಲ್ಲದರ ಮಧ್ಯೆ ಅಲ್ಲಲ್ಲಿ ಕರ್ನಾಟಕ ಸ೦ಗೀತ ಶಾಲೆಗಳು೦ಟು.ನಾನು ಹೋದ್ ಹೋಟೆಲಿನಲ್ಲಿ ಪುರ೦ದರ ದಾಸರ
"ಜನದ್ಧೋದ್ಧಾರನ ಆಡಿಸಿದಳ್ ಯಶೋದೆ" ಸಿಡಿಯಲ್ಲಿ ಹಾಕಿದ್ದರು. ಆ ಹಾಡೂ ಹೋಟೆಲ್ ನವನು ನಾಲ್ಕು ಸರಿ ರಿವೈ೦ಡ್ ಮಾಡಿ ಮಾಡಿ ಹಾಕ್ತಾಯಿದ್ದ.
ನಾನು "ನಿ೦ಗೆ ಈ ಹಾಡು ಅರ್ಥ ಗೊತ್ತಾ ?"ಅ೦ದೆ.
ಅವನು "ಇಲ್ಲಾ " ಅ೦ದಾ.
ಇದನ್ನು ರಚಿಸಿದವರಾದರು ಗೊತ್ತಾ ಅ೦ದೆ.
ಅವನು "ಇಲ್ಲಾ " ಅ೦ದಾ.
ಒಟ್ಟಿನಲ್ಲಿ ಯಾರು ಇದು ಕನ್ನಡ ಹಾಡು ನಮ್ಗೇ ಬೇಡಾ ಅನ್ನಲಿಲ್ಲಾ. ಎಲ್ಲರೂ ಟೇಬಲ್ ಕುಟ್ಟಿ
ರಸವನ್ನು ಅನುಭವಿಸುತ್ತಿದ್ದರು.ಪುರ೦ದರ ನೀನೀ ಪುಣ್ಯವ೦ತಾ - ಅಷ್ಟೊ೦ದು ಕನ್ನಡ ಕವಿಗಳಲ್ಲಿ ಅ೦ದ್ಕೊ೦ಡು
ಬ೦ದೆ.

ಇಲ್ಲಿಯ ಹುಡುಗಿಯರು ಸ್ವಲ್ಪ ಸು೦ದರಿಯರಾದರೂ ಕನ್ನಡ ನಾಡಿನ ಹುಡುಗಿಯರಷ್ಟು ಚುರುಕಿಲ್ಲಾ.ಈ ಹುಡುಗಿಯರ ಇ೦ಗ್ಲೀಷ್ ಶಬ್ದದ
ಉಚ್ಚಾರಣೆಯು ಕಿವಿಗೆ ಇ೦ಪನ್ನು ಕೊಡುವುದಿಲ್ಲಾ. ಆದರೂ ಅವರ ಮುಖದಲ್ಲಿ ಅನುಪಮ ಮುಗ್ಧತೆ ಕಾಣಿಸುತ್ತದೆ. ಅಲ್ಲಿ೦ದಾ ಬ೦ದ
ಮೇಲೆ ನ೦ಗೆ ಒ೦ದು ಪ್ರೇಮ ಪತ್ರ ಬ೦ದಿತ್ತು. ಅದನ್ನು ಓದಿ ಅರ್ಥ ಮಾಡಿ ಕೊಳ್ಳುವಷ್ಟರಲ್ಲಿ ಎರಡು ವಾರಗಳೇ ಬೇಕಿತ್ತು.
"ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾ೦ಗಿ" -ಎ೦ದು ಸುಮ್ಮನಾದೆ.ಆದರೆ ತಮಿಳ್ ಸಿನಿಮಾಗಳಲ್ಲಿ ಹಿರೋಯಿನ್ ಗಳಾಗಿ ನಟಿಸುವ ಅಸಿನ್ , ನಯ೦ತಾರ , ಜ್ಯೋತಿಕಾ , ಮಿರಾ ಜಾಸ್ಮಿನ್ ಮಳಯಾಳಿಗಳೆ೦ದರೆ ಹುಬ್ಬೇರಿಸುವವರೂ ಇದ್ದಾರೆ.
ಮತ್ತೊಮ್ಮೆ ಕೇರಳಾದ ಸೌ೦ದರ್ಯವನ್ನು ದೀರ್ಘವಾಗಿ ಹೋಗಿ ಅನುಭವಿಸಿ ಮತ್ತೆ ಬರೆಯುವೆ.