ರಸಿಕ ನಾನು

ರಸಿಕ ನಾನು

ಕವನ

ರಸಿಕ ನಾನು, ನನ್ನದೆಲ್ಲವ ಹೇಳುವೆ,
ರತಿಯು ನೀನು, ನಿನ್ನದೆಲ್ಲವ ಕೇಳುವೆ,


 


ರಸಿಕ ನಾನು, ನನಗಾವುದು ಇಷ್ಟವು,
ಅದ ಮುಡಿಯೆ ನೀನು ಎಂದು ನಾ ಬಯಸುವೆ,


 


ರಸಿಕ ನಾ ಬಂದಾಗ ನಿನ್ನ ಬಾಗಿಲಲ್ಲಿ ಬಯಸುವೆ,
ನಾ ಬಂದಾಗ ನೀ ಅಪಸ್ವರ ತೆಗೆದು ನನ್ನ ನೋಯಿಸುವೆ,


 


ರಸಿಕ ನಾನು, ನನ್ನ ಕನಸು ನೀನು,
ಅದ ನನಸು ಮಾಡುವೆ ಎಂದು ಎಣಿಸುವೆ


 


ರಸಿಕ ನಾ ಸೀರೆ ತಂದಾಗ ನೀ ಬೆಳದಿಂಗಾಳಾಗುವೆ ಎಂದೆಣಿಸುವೆ,
ನೀರೆ ನೀ, ನಾ ತಂದ ಸೀರೆಯ ಬಯಸದೆ ಬಿಸುಡುವೆ


 


ರಸಿಕ ನಾನು, ನನ್ನ ಮನಸು ನೀನು
ಬಯಸು ನೀ ನನ್ನದೆಲ್ಲವನು ಸಂಕೋಚಿಸದೆ


 


ರಸಿಕ ನಾ, ನೀನೆ ನನ್ನ ಜೀವನವು, ಸಂತೋಷವು ಎಂದೆನಿಸಿದೆ,
ನಿನಗೆ ನಾ ಆ ಜೀವನದ ಕನಸು, ಮನಸು, ಪ್ರಪಂಚವು ಎಂದೆನಿಸದೆ?


 


ರಸಿಕ ನಾನು ನಳಪಾಕವೇನಲ್ಲ ಎನಗೆ,
ನೀ ಉಣಬಡಿಸುವುದೇ ಮ್ರುಷ್ಠಾನ್ನವೆನಗೆ,


 


ರಸಿಕ ನಾ, ಸರಸದಿ ಹೂದೋಟದಲ್ಲಿ ವಿಹರಿಸುವಾಸೆ,
ಸತಿಯೆ ನೀನು ವಿರಸದಿ ನನ್ನ ನೋಡುವಿಯೇಕೆ?


 


ರಸಿಕ ನಾನು ಬಂದಾಗ ಹೋದೆ ನೀ ದೂರ,
ಮನಸು ಯೋಚಿಸಿತು ಇದೇನ ನಿನ್ನ ಸಂಸಾರ?.


 


ರಸಿಕ ನಾ,  ಮುದುಡಲಿಲ್ಲ ಮನಸು, ಕಾಯುತ್ತಿರುವೆ ನಿನಗೆ
ನೀ ಮಾಡದೆ ಇರಸು, ಮುನಿಸು, ಆಗಲಿ ಎಲ್ಲಾ ಶುಭ ಘಳಿಗೆ.


 


ರಸಿಕ ನಾನು, ನನ್ನದೆಲ್ಲವ ಹೇಳುವೆ,
ರತಿಯು ನೀನು, ನನ್ನದೆಲ್ಲವ ಕೇಳದೆ!?


 


                                                    ಮಧ್ವೇಶ್/೨೪.೧೨.೧೦.


 

Comments