ರಾಜತರಂಗಿಣಿ ಕಥಾವಳಿ

ರಾಜತರಂಗಿಣಿ ಕಥಾವಳಿ

ಪುಸ್ತಕದ ಲೇಖಕ/ಕವಿಯ ಹೆಸರು
ತೆಲುಗು ಮೂಲ: ಕಸ್ತೂರಿ ಮುರಳೀಕೃಷ್ಣ ಕನ್ನಡಕ್ಕೆ: ಎಸ್. ಆರ್. ರಾಮಸ್ವಾಮಿ
ಪ್ರಕಾಶಕರು
ಸಾಹಿತ್ಯ ಸಿಂಧು ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೩೫.೦೦ ಮೊದಲ ಮುದ್ರಣ: ೨೦೨೦

ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅನನ್ಯವಾದ ಕಾವ್ಯ ಕಾಶ್ಮೀರದ ಕಲ್ಹಣನು ೧೨ ನೇ ಶತಮಾನದಲ್ಲಿ ರಚಿಸಿದ ‘ರಾಜತರಂಗಿಣಿ' ಸಂಸ್ಕೃತ ಕವಿಗಳು ಇತಿಹಾಸಕ್ಕೂ ಮಹತ್ವ ನೀಡಿದುದಕ್ಕೆ ಒಂದು ಉಜ್ವಲ ನಿದರ್ಶನ. ಎಂಟು ‘ತರಂಗ'ಗಳಲ್ಲಿ ಹತ್ತಿರ ಹತ್ತಿರ ಎಂಟು ಸಾವಿರ ಪದ್ಯಗಳಲ್ಲಿ ಹರಡಿಕೊಂಡಿರುವ ಈ ಕಾವ್ಯ ಪ್ರಾಚೀನ ಕಾಲದ ಘಟನೆಗಳನ್ನು ಇತಿಹಾಸ ಮರ್ಯಾದೆಯಿಂದ ದಾಖಲೆ ಮಾಡಿಕೊಂಡಿರುವ ಅಪೂರ್ವ ಗ್ರಂಥ ಇದು. 

ಕಲ್ಹಣನ ‘ರಾಜ ತರಂಗಿಣಿ'ಯಲ್ಲಿ ಅಲ್ಲಲ್ಲಿ ಬರುವ ಅತಿ ಸಂಕ್ಷಿಪ್ತ ಪ್ರಸ್ತಾವಗಳನ್ನು ಆಧಾರವಾಗಿರಿಸಿಕೊಂಡು ಅವಕ್ಕೆ ವಿಸ್ತೃತ ಕಥಾರೂಪವನ್ನು ನೀಡಿ ಪ್ರಕೃತ ಮಾಲಿಕೆಯನ್ನು ತೆಲುಗಿನಲ್ಲಿ ಕಸ್ತೂರಿ ಮುರಳೀ ಕೃಷ್ಣ ಇವರು ಸಿದ್ಧ ಪಡಿಸಿದ್ದಾರೆ. ಕೆಲವು ಮೂಲದಲ್ಲಿ ಎರಡೋ ಮೂರೋ ಸಾಲಿನಲ್ಲಿ ಇರುವ ಸಾಮಗ್ರಿಯು ಈ ಮಾಲಿಕೆಯಲ್ಲಿ ಪೂರ್ಣ ಪ್ರಮಾಣದ ಸ್ವತಂತ್ರ ಕಥಾ ಸರಣಿಯಾಗಿ ವಿಸ್ತಾರಗೊಂಡಿದೆ. ಈ ಪುಸ್ತಕದಲ್ಲಿರುವುದು ‘ರಾಜತರಂಗಿಣಿ’ ಆಧಾರಿತ ಸ್ವತಂತ್ರ ಕಥಾನಕಗಳು. ಎಸ್. ಆರ್. ರಾಮಸ್ವಾಮಿಯವರು ಈ ಮಾಲಿಕೆಯನ್ನು ಕನ್ನಡಕ್ಕೆ ತಂದಿರುತ್ತಾರೆ. ಸುಮಾರು ೧೮೦ ಪುಟಗಳನ್ನು ಹೊಂದಿರುವ ಈ ಕೃತಿಯನ್ನು ಸಾಹಿತ್ಯ ಸಿಂಧು ಪ್ರಕಾಶನ, ಬೆಂಗಳೂರು ಇವರು ಹೊರತಂದಿದ್ದಾರೆ.