ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
ಬರಹ
ಇದೊಂದು ನನ್ನ ದುರ್ದೈವ. ಹೞಗನ್ನಡದಲ್ಲಿದ್ದ ೞ, ಱ ಮತ್ತು ನಡುಗನ್ನಡದಲ್ಲಿದ್ದ ಱ ಕುಱಿತು ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗನಿಲ್ಲ. ಕಿಟ್ಟೆಲ್ ಜರ್ಮನಿಯವನಾಗಿ ಈ ವಿಚಾರವಾಗಿ ಸೂಕ್ಷ್ಮವಾಗಿ ನೋಡಿದ ಮೇಲೆ ಬೇಱೊಬ್ಬ ಕನ್ನಡಿಗನನ್ನು ನಾನು ಕಾಣಲಿಲ್ಲ. ಹೞಗನ್ನಡ ಮತ್ತು ನಡುಗನ್ನಡ ಕೃತಿಗಳಲ್ಲಿ ಈ ಅಕ್ಷರಗಳನ್ನು ಇರುವಂತೆಯೇ ನೋಡಿಕೊಳ್ಳಿ ಎಂದಾಗಲೂ ಇದನ್ನು ಪರಿಪಾಲಿಸುವ ಒಬ್ಬ ಕನ್ನಡಿಗನೂ ಇಲ್ಲ. ಹಾಗಾಗಿ ಹಲವು ವೇಳೆ ಕವಿಯ ಮೂಲ ಅಭಿಪ್ರಾಯವನ್ನು ಗ್ರಹಿಸುವುದು ಕನ್ನಡಿಗರಿಗೆ ಅಸಾಧ್ಯವಾಗಿರುವುದು ಶೋಚನೀಯ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ