ಲೇಖನಗಳಿಗೆ ಆಹ್ವಾನ!
ಡಾ.ಸಿ.ಆರ್.ಚಂದ್ರಶೇಖರ್ ಅವರು ಪ್ರಮುಖ ವೈದ್ಯಕೀಯ ಲೇಖಕರು. ಮನೋಶಾಸ್ತ್ರಜ್ಞರು. ಕನ್ನಡದಲ್ಲಿ ೧೫೦ ವೈದ್ಯಕೀಯ ಪುಸ್ತಕಗಳನ್ನು ಬರೆದವರು. ಇದು ಭಾರತೀಯ ಭಾಷೆಗಳ ಮಟ್ಟಿಗೆ ಒಂದು ದಾಖಲೆಯೇ ಸರಿ.
ಈಗ ಡಾ.ಸಿ.ಆರ್.ಸಿ ಅವರಿಗೆ ೬೦ ವರ್ಷಗಳು ತುಂಬಲಿವೆ. ಈ ಒಂದು ಸಂದರ್ಭದಲ್ಲಿ ಅವರ ಅಭಿಮಾನಿಗಳು, ಸಿ.ಆರ್.ಸಿ ಅವರಿಗೆ ಸನ್ಮಾನ ಮಾಡಲಿರುವರು ಹಾಗೂ ಒಂದು ಸ್ಮರಣ ಸಂಚಿಕೆಯನ್ನು ತರಲಿರುವರು. ಇದರಲ್ಲಿ ವೈದ್ಯರು ಹಾಗೂ ವೈದ್ಯೇತರರು ಲೇಖನಗಳನ್ನು ಬರೆಯಲು ಅವಕಾಶವಿದೆ. ಸಮಾರಂಭದ ವಿವರಗಳು ಹೀಗಿವೆ.
ದಿನಾಂಕ: ೧೪ ಡಿಸೆಂಬರ್ ೨೦೦೮. ಭಾನುವಾರ
ಸಮಯ: ಬೆಳಿಗ್ಗೆ ೧೦.೦೦ - ಸಂಜೆ ೬.೦೦ ಗಂಟೆ.
ಸ್ಠಳ: ಆರ್.ವಿ.ದಂತ ವಿದ್ಯಾಲಯ ಸಭಾಂಗಣ, ಜೆಪಿ ನಗರ, ಬೆಂಗಳೂರು.
ಜನಸಾಮಾನ್ಯರಿಗೆ:
- ಸಿ.ಆರ್.ಸಿ ಅವರು ಬರೆದಿರುವ ೧೫೦ ಪುಸ್ತಕಗಳಲ್ಲಿ ಯಾವುದಾದರೊಂದು ಪುಸ್ತಕವನ್ನು ಕುರಿತು ಒಂದು ಪುಟದ ಒಳಗೆ ಒಂದು ವಿಮರ್ಶಾ ಲೇಖನವನ್ನು ಬರೆದು ಕಳುಹಿಸಿ.
- ಉತ್ತಮ ೫೦ ಲೇಖನಗಳಿಗೆ ತಲಾ ರೂ.೧೦೦/- ಬಹುಮಾನ ಹಾಗೂ ಲೇಖನವನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.
- ಬಹುಮಾನಗಳನ್ನು ಸಮಾರಂಭದಂದು ನೀಡಲಾಗುವುದು.
ವೈದ್ಯ ಸಾಹಿತಿಗಳಿಗೆ:
- `ವೈದ್ಯಸಾಹಿತಿಯಾಗಿ ನನ್ನ ಅನುಭವ`- ಒಂದು ಪುಟದ ಲೇಖನ.
- ವೈದ್ಯಲೇಖಕರ ಹೊಸ/ಹಳೆಯ ಒಂದು ಲೇಖನ: ಪದಮಿತಿ ೫೦೦ ಶಬ್ಧಗಳು ಮಾತ್ರ.
ಜನಸಾಮಾನ್ಯರು ಹಾಗೂ ವೈದ್ಯರು ತಮ್ಮ ಲೇಖನಗಳನ್ನು ಆಗಸ್ಟ್ ೧೫, ೨೦೦೮ ರ ಒಳಗೆ ನನಗೆ ಕಳುಹಿಸಿಕೊಡಬೇಕಾಗಿ ಪ್ರಾರ್ಥನೆ.
ವಿಳಾಸ:
Dr.N.Someswara, `Janani` AD-5-186, KHB, SFS-407, II Main, III Cross,
Yelahanka New Town.
Bangalore-560 064.
Mobile: 98804 65661.