ವರ ಪರೀಕ್ಷೆ
ಅವಳ ಕಾತುರತೆ ಹೆಚ್ಚಾಗುತ್ತಿತ್ತು. ಹೃದಯದ ಬಡಿತ ಅವಳಿಗೆ ಕೇಳುತ್ತಿತ್ತು. ಅವನು ಬರುವನಿದ್ದ ಇಂದು . ಅಪ್ಪನ ಜೊತೆ ಮೊದಲ ಬೇಟಿ ಅವನದು.
ನೆನ್ನೆಯೇ ಉಸುರಿದ್ದಳು " ಅಪ್ಪ ನಾನು ಒಬ್ಬರನ್ನು ಪ್ರೀತಿಸ್ತಾ ಇದೀನಿ ಅವರು ನಮ್ಮ ಥರ ಶ್ರೀಮಂತರಲ್ಲ . ಬಡವರು . ಆದರೂ ತುಂಬಾ ಹಾರ್ಡ್ ವರ್ಕರ್ ಜೊತೆಗೆ ಬುದ್ದಿವಂತರೂ ಸಹಾ . ತುಂಬಾ ಮೆಡಲ್ಸ್ ತಗೊಂಡಿದ್ದಾರೆ"
ತಂದೆ ಒಂದೇ ಮಾತು ಹೇಳಿದ್ದರು "ಅವರನ್ನು ಕರೆಸು ನಾಳೆನೆ ಮಾತಾಡೋಣಾ"
"ಅಪ್ಪಾ ಅದೂ ಅವರನ್ನ ಅವಮಾನ ಅದೂ ಇದೂ ಅಂತ ........"
"ನೋಡು ರಮ್ಯ ಇದು ಬದುಕು ಫಿಲ್ಮ್ ಅಲ್ಲ .ನಾನೇನು ಮಾತಾಡಿದರೂ ನಿನ್ನ ಮುಂದೇನೆ ಮಾತಾಡ್ತೀನಿ ಸರೀನಾ"
ಕೂಡಲೆ ಅವನಿಗೆ ತಿಳಿಸಿದ್ದಳು
ಅವನೊ ಒಪ್ಪಿಕೊಂಡ
ಅವನು ಬಂದ
ಅರಂಭಿಕ ಮಾತೆಲ್ಲ ಆದ ನಂತರ ಅಪ್ಪ ಹೇಳಿದರು." ನೋಡಪ್ಪ ನಂಗೆ ರಮ್ಯ ಎಲ್ಲಾ ವಿಷ್ಯ ಹೇಳಿದಾಳೆ . ನಂಗೂ ನಿಮ್ಮಲ್ಲಿ ಯಾವದೇ ರೀತಿ ಕುಂದು ಕಾಣಿಸ್ತಿಲ್ಲ. ನೀವು ಬುದ್ದಿವಂತರು ಹಾರ್ಡ್ ವರ್ಕರ್ ಅಂತ ಗೊತ್ತಾಯಿತು."
ಆತ ಮೆಚ್ಚುಗೆಯಿಂದ ರಮ್ಯಳತ್ತ ನೋಡಿದ. ರಮ್ಯ ನಾಚಿಕೆಯಿಂದ ತಲೆ ತಗ್ಗಿಸಿದಳು
" ನಂಗೂ ನಿಮ್ಮ ಥರದವರೇ ಬೇಕಿತ್ತು . ನಂದು ತುಂಬಾ ದೊಡ್ಡ ವ್ಯವಹಾರ . ಈ ಬಂಗಲೆ .ಫ್ಯಾಕ್ಟರಿ ಎಲ್ಲಾ ಬಹಳ ಶ್ರಮ ಪಟ್ಟು ಕಟ್ಟಿದೀನಿ. ಆದರೆ ರಮ್ಯ ಅಮ್ಮ ಹೋದ ಮೇಲೆ ಯಾಕೋ ಈ ಪ್ರಪಂಚಾನೆ ಬೇಡಾಂತ ಅನ್ನಿಸ್ತು ಹಾಗಾಗಿ ಈ ಫ್ಯಾಕ್ಟರೀ ವ್ಯವಹಾರನಾ ನೋಡ್ಕೊಳೋದು ಕಡಿಮೆ ಮಾಡಿದೆ" ಚಿಂತಾಕ್ರಾಂತರಾದರು
"ಸಾರ್ ಯೋಚಿಸ್ಬೇಡಿ . ಇನ್ನು ಮುಂದೆ ನಾನೇನಾದ್ರೂ ನಿಮ್ಮ ಅಳಿಯನಾಗಿ ಬಂದ್ರೆ ನಾನು ನೋಡ್ಕೊಳ್ತೀನಿ" ಆತ ತಟ್ಟನೆ ನುಡಿದ
" ಆದ್ರೆ ಏನು ನೀವೆ ನನ್ನ ಅಳಿಯ . ಮದುವೆಗೆ ಮುಂಚೆ ನಿಜ ವಿಶ್ಯ ತಿಳಿಸಿಬಿಡೋಣ ಅಂತ ಅನ್ನಿಸ್ತಿದೆ . ನನ್ನ ಫ್ಯಾಕ್ಟರಿ ಲಾಸಲ್ಲಿದೆ. ಪ್ರತಿ ತಿಂಗಳ ಖರ್ಚಿಗೂ ಅದು ಸರಿಯಾಗ್ತಿಲ್ಲ. ಮೊನ್ನೆ ತಾನೆ ಈ ಬಂಗಲೇನಾ ಅಡ ಇಟ್ಟು ಸುಮಾರು ಸಾಲ ತಗಂಡಿದೀನಿ. ನೋಡೋರ ಮುಂದೆ ಪ್ರೆಸ್ಟೀಜ್ ಉಳಿಸಿಕೊಳ್ಳಬೇಕಲ್ಲಾ ಹಾಗಾಗಿ ಮತ್ತಷ್ಟು ಸಾಲ ಮಾಡಿದೀನಿ. ಈ ಮನೇಲಿ ಇನ್ನೊಂದು ವರ್ಶ ಉಳಿದರೆ ಅದೇ ಹೆಚ್ಚು ."
" ನೀವು ಬಂದು ಈ ಮನೇನಾ ಉಳಿಸಬೇಕು. ರಮ್ಯನ ಕೈ ಹಿಡಿದು ಕಾಪಾಡಬೇಕು" ಅಪ್ಪನ ಕಣ್ಣಲ್ಲಿ ನೀರು ಬರುತ್ತಿತು.
ರಮ್ಯಾಗೂ ಅಳು ತಡೆಯಲಾಗಲಿಲ್ಲ. ಇಷ್ಟೊಂದು ವಿಶ್ಯ ತನಗೆ ಗೊತ್ತೇ ಇರಲಿಲ್ಲ.
ಆತನೂ ಬೇಸರಿಸಿಕೊಂಡಿದ್ದ . "ಸಾರ್ ನೀವೇನೂ ಯೋಚಿಸಬೇಡಿ ನಾನು ಖಂಡಿತಾ ನಿಮ್ಮ ಮಗಳನ್ನು ಮದುವೆಯಾಗ್ತೀನಿ " ಎಂದು ಹೇಳಿ ಹೋದ
-------------------------------------------------------------
ಎರೆಡು ದಿನ ಕಳೆಯಿತು . ಆತನ ಸುಳಿವೇ ಇಲ್ಲಾ . ಫೋನ್ ಮಾಡಿದರೆ ಆತ ಇಲ್ಲಾ ಎಂಬ ಉತ್ತರ ಸಿಗುತಿತ್ತು.
ಕೊನೆಗೊಮ್ಮೆ ಆತನನ್ನು ಅವನ ಮನೆಯ ಹತ್ತಿರ ಹಿಡಿದಳು
"ಸಾರಿ ರಮ್ಯ ನಂಗೆ ನನ್ನದೇ ತೊಂದರೆ ಬಹಳ ಇದೆ ಇನ್ನೂ ನಿಮ್ಮ ಪ್ರಾಬ್ಲಮ್ ಹೊತ್ತುಕೊಳ್ಳಕಾಗಲ್ಲ. ಏನೊ ಶ್ರೀಮಂತರ ಮನೆಯ ಹುಡುಗಿ ಮದುವೆಯಾದರೆ ಆರಾಮಾಗಿರಬಹುದು ಅಂದ್ರೆ ನಿಮಗೆ ಎಷ್ಟೊಂದು ತೊಂದರೆಗಳು. ದಯವಿಟ್ಟು ನಂಗೆ ತೊಂದರೆ ಕೊಡಬೇಡ " ಮುಖದ ಮೇಲೆ ಹೊಡೆದವನಂತೆ ಹೇಳಿ ಹೋಗಿದ್ದ
----------------------------------------------------------------------------------------
ಮನೆಗೆ ಬಂದವಳೆ ಅಪ್ಪಾ ಎಂದು ಅಳತೊಡಗಿದಳು
ತಂದೆಗೆ ವಿಶ್ಯ ಅರಿವಾಯಿತು.
"ರಮ್ಯ ಆಗಿದ್ದೆಲ್ಲಾ ಒಳ್ಳೆಯದಾಯಿತು ಬಿಡು ."
ರಮ್ಯ ಆಶ್ಚರ್ಯದಿಂದ ನೋಡಿದಳು
" ಹೌದು ರಮ್ಯ ಅವತ್ತು ಅವನಿಗೆ ನಾನು ಒಂದು ಸಣ್ಣ ಪರೀಕ್ಷೆ ಕೊಟ್ಟೆ. ನಂಗೆ ನಿಮ್ಮ ತಾತ ಅಂದ್ರೆ ನಿಮ್ಮ ಅಮ್ಮನ ಅಪ್ಪ ಇದೇ ಪರೀಕ್ಷೆ ಕೊಟ್ಟ್ಟಾಗ ನಾನು ಪಾಸ್ ಆದೆ. ಆದರೆ ಅವನು ಪಾಸ್ ಆಗಲಿಲ್ಲ. ಬಟ್ ಯು ಆರ್ ಸೇವ್ಡ್ "
--------------------------------------