ವಾರಗಳ ಹೆಸರಿನ ಮಹತ್ವವೇನು?

ವಾರಗಳ ಹೆಸರಿನ ಮಹತ್ವವೇನು?

Comments

ಬರಹ

ಇತ್ತೀಚೆಗೆ ಮಾಸಗಳ ಹೆಸರು ಹೇಗೆ ಚೈತ್ರ, ವೈಶಾಖ ಎಂದು ನಾಮಕರಣ ಮಾಡಿರುವ ಕಾರಣವನ್ನು ಚರ್ಚಿಸುತ್ತಿದ್ದರು.

ಭಾರತ ನಾಗರೀಕತೆಯಲ್ಲಿ ನಮಗೆ ತಿಳಿದಿರುವಷ್ಟು ಹಿಂದಿನಿಂದಲೂ ವಾರಕ್ಕೆ ೭ ದಿನಗಳೆಂದೂ ಅವುಗಳನ್ನು ಒಂದೊಂದು ಗ್ರಹಗಳ ಅನ್ವಯ ಭಾನುವಾರ, ಸೋಮವಾರ, ಮಂಗಳವಾರ ಇತ್ಯಾದಿಯಾಗಿ ಕರೆದಿದ್ದಾರೆ. ಈ ದಿನಗಳಿಗೂ ಆಯಾ ಗ್ರಹಗಳಿಗೂ ಏನಾದರೂ ನಂಟಿದೆಯೇ? ಅಥವಾ ಗ್ರಹಗಳನ್ನು ಆದರಿಸಲು ಒಂದೊಂದು ದಿನ ಎಂದು ಸುಮ್ಮನೆ ನಿಗಧಿಗೊಳಿಸಲಾಗಿದೆಯೇ?

ಈ ವಾರಗಳಿಗೆ ಕನ್ನಡದಲ್ಲಿ ಬೇರೆ ಹೆಸರುಗಳಿದ್ದವೇ? ಉದಾ: ಗುರುವಾರ -> ಬೇಸ್ತಾರ.

ಹಿಂದೂ ಪಂಚಾಂಗವನ್ನು ನೋಡಿದರೆ ಗ್ರಹಗತಿಗಳನ್ನನುಸರಿಸಿ ನಿರ್ಧರಿಸುವ ತಿಥಿ, ನಕ್ಷತ್ರಗಳಿಗನುಗುಣವಾದ ದಿನಗಳು, ೧೫ ದಿನಕ್ಕೊಂದಾವರ್ತಿ ಹುಣ್ಣಿಮೆ, ಅಮಾವಾಸ್ಯೆಗಳು ಉಳಿದದಿನಗಳು ಪ್ರಥಮಾ, ದ್ವಿತೀಯಾ, ತೃತೀಯಾ, ಚತುರ್ಥಿ..ಇತ್ಯಾದಿಗಳು ಅರ್ಥಪೂರ್ಣವಾಗಿವೆ. ಆದರೆ ವಾರದದಿನಗಳಿಗೂ ಈ ನಕ್ಷತ್ರಗಳಿಗೂ ಸಂಭಂಧವಿದ್ದಂತಿಲ್ಲ. ತಿಳಿದವರು ಇದರಬಗ್ಗೆ ಹೆಚ್ಚಿನದನ್ನು ಹೇಳಬೇಕಾಗಿ ಕೋರಿಕೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet