ವಿಶ್ವ ಭಾವುಟ ಹಾರಿಸೋಣ ಬನ್ನಿ

ವಿಶ್ವ ಭಾವುಟ ಹಾರಿಸೋಣ ಬನ್ನಿ

ಕವನ

ಜಗದನಾಡಿ ಮನದನಾಡಿ


ನಮ್ಮನಾಡಿ ನಮ್ಮೆಲ್ಲರನಾಡಿ


ವಂದೇ ನಾಡಿ ವಂದೇ ನುಡಿ


ವಂದೇ ವಂದೇ ವಿಶ್ವವಂದೆ


ಹಾರಿಸಿರೈ ವಿಶ್ವ ಭಾವುಟವ ಇಂದೆ


ಪಣತೊಟ್ಟು ಸಿದ್ಧಸಿ ಸುಡುಗಾಡ ಸಿದ್ಧರಂತೆ


ಮನುಜರೆ, ಮನುಜ ಕುಲಕ್ಕೆ ಒಳಿತು


ಕುಲ ಪಂಥ ತೋರೆದು ಬನ್ನಿ


ದೇಶ ದೇಶಗಳ ವೈಷಮ್ಯ ಬಿಟ್ಟು ಬನ್ನಿ


ವಿಶ್ವಶಾಂತಿ ಮನುಜ ಕುಲದ ಶಾಂತಿ


ಶಾಂತಿ ಶಾಂತಿ ವಿಶ್ವಶಾಂತಿಗಾಗಿ


ವಿಶ್ವ ಭಾವುಟವ ಹಾರಿಸೋಣ ಬನ್ನಿ


ವಿಶ್ವ ಕುಟುಂಬದ ವಂದೇ ತಾಯಿಯ


ಮಕ್ಕಳಾಗಿ ವಿಶ್ವದ ಒಳಿತಿಗಾಗಿ ಬನ್ನಿ


ಓ ವಿಶ್ವದ ಮನುಜರೇ ನಿವೆಲ್ಲರೂ ಬನ್ನಿ


ನಿಮ್ಮ ಹೃದಯ ವಿಶಾಲತೆಯೊಂದಿಗೆ ಬನ್ನಿ


ವಿಶ್ವಶಾಂತಿಗಾಗಿ ಬನ್ನಿ


ವಿಶ್ವ ಭಾವುಟವ ಹಾರಿಸೋಣ ಬನ್ನಿ


                                        ಹೆಚ್ ವಿರುಪಾಕ್ಷಪ್ಪ ತಾವರಗೊಂದಿ.