ಶಂಕರಾನಂದ ಹೆಬ್ಬಾಳರ ಕವನ - ಶಂಕರನ ನೃತ್ಯವಿನೋದ

ಶಂಕರಾನಂದ ಹೆಬ್ಬಾಳರ ಕವನ - ಶಂಕರನ ನೃತ್ಯವಿನೋದ

ಕವನ

ಶಂಕರ ನಾಟ್ಯದಿಂ ಚಣದಿ ನೋಡುತ ನಿಲ್ಲಲು ಪುಣ್ಯವನ್ನಲಿಂ|

ತೆಂಕಣಗಾಳಿಯಂ ಬರುತ ಬೀಸಿದೆ ಜೋರಲಿ

ಸಿಗ್ಗವನ್ನಲಿಂ|

ಕಿಂಕರ ಸೇವೆಗಿಂ ನಿರತನಾಗಿಹ ದೇವನು

ಬಂದನಂ ಶಿವಂ|

ಕಂಕಣ ತೊಟ್ಟನುಂ ಹರನು ಕೋಪದಿ ನಾಟ್ಯವ

ಗೈದವಂಹರಂ||

 

ಫಾಲದೊಳಕ್ಷಿಯಂ ಧರಿಸಿರುದ್ರನು ಕೋಪದ ಕಾಲಭೈರವಂ|

ಹಾಲ್ಗಡಲಲ್ಲಿಯಂ ವಿಷವ ಪೀರ್ದನು ತೋಷದಿ ನೀಲಕಂಠನುಂ|

ಬಾಲಕುಮಾರನಂ ಹರಸಿ ಪೋಪನು ದೇವನು

ತೋಷದಿಂದಲಿಂ|

ಲೀಲೆಯ ತೋರುತೈ ಜಗವ ರಕ್ಷಿಸಿ ನಿಲ್ಲುವ

ವತ್ಸಲಪ್ರಿಯಂ||

 

ಎತ್ತಿನ ಮೇಲೆಯೈ ಕುಳಿತ ಮಾರನ ಕೊಂದಿಹ

ಶೂಲಧಾರಿಯೇ|

ಕತ್ತಲಿ ರುಂಡದ ಸರವು ಜೋಲುತ ಬಿದ್ದಿದೆ

ನೋಳ್ಪಲುಗ್ರವಂ|

ಹುತ್ತದ ಹಾವದು ಹೊಳೆದು ನಿಂತಿದೆ ಹಾರದ ರೀತಿಯಲ್ಲಿಯೇ|

ಗತ್ತಲಿ ಸುಮ್ಮನಿರುತಿಹನೀಶನು ಹಾಸದಿ

ನೃತ್ಯವನ್ನಲೀ||

( ಉತ್ಪಲ ಮಾಲ ವೃತ್ತ ಮೊದಲ ಪ್ರಯತ್ನ)

 

-ಶಂಕರಾನಂದ ಹೆಬ್ಬಾಳ 

 

ಚಿತ್ರ್