ಶಿಶುಗೀತೆ - ಅಮ್ಮನು ನೀಡುವ ತಿನಿಸು
ಕವನ
ಶಾಲೆಗೆ ಹೋಗುವ ಕಂದನೆ ಅರಿತುಕೊ
ಸಿರಿತನ ಎನುವುದು ಆರೋಗ್ಯ
ತಿನ್ನಲು ಕುಡಿಯಲು ಸಂಯಮವಿದ್ದರೆ
ಬದುಕಲಿ ದೊರೆವುದು ಈ ಭಾಗ್ಯ
ರಸ್ತೆಯ ಬದಿಯಲಿ ಮಾರಲು ಇಡುವರು
ಬಗೆಬಗೆ ಬಣ್ಣದ ತಿನಿಸುಗಳ
ಮನವನು ಸೆಳೆಯುವ ತರದಲಿ ಇರುವುದು
ಹಚ್ಚುತ ವಿಷಕರ ಬಣ್ಣಗಳ
ತಿನ್ನುವ ಬಯಕೆಯ ನುಡಿ ನೀ ನನ್ನಲಿ
ಮಾಡುವೆ ನಾನೇ ಮನೆಯಲ್ಲಿ
ಮನೆಯಲಿ ಮಾಡಿದ ಇಷ್ಟದ ತಿಂಡಿಯ
ತಿನ್ನುವ ನಾವು ಜೊತೆಯಲ್ಲಿ
ಹಸುವಿನ ಹಾಲನು ಕಾಯಿಸಿ ಕೊಡುವೆನು
ಕುಡಿಯಲು ಕೊಡುವೆನು ದಿನನಿತ್ಯ
ಅಮ್ಮನು ನೀಡಿದ ತಿನಿಸದು ಉತ್ತಮ
ಶಕ್ತಿಯ ಪಡೆಯುವೆ ಇದು ಸತ್ಯ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್