ಶುಕ್ರ ಮತ್ತು ಗುರುವಿನ ಇಂಟರ್ವ್ಯೂ - ನೀವ್ ನೋಡಿದ್ರಾ?

ಶುಕ್ರ ಮತ್ತು ಗುರುವಿನ ಇಂಟರ್ವ್ಯೂ - ನೀವ್ ನೋಡಿದ್ರಾ?

ಬರಹ

ಹರಿ ಚಾಟ್ ನಲ್ಲಿ "ಪಿಂಗ್" ಮಾಡಿ ಕೇಳಿದಾಗಲೇ ಗೊತ್ತಾಗಿದ್ದು ನಾನೊಂದು ಭಾನಂಗಳದಲ್ಲಿ ನೆಡೆಯುತ್ತಿರುವ ವೈಜ್ಞಾನಿಕ ಚಟುವಟಿಕೆಯೊಂದನ್ನ ಮರೆತಿದ್ದೇನೆಂದು. ಇದರ ಬಗ್ಗೆ ಆಗಲೇ ಹಂಸಾನಂದಿ ಮತ್ತಿತರ ಸಂಪದಿಗರು ಬರೆದಿದ್ದಾರೆ. ಮತ್ತೆ ನಾನಿಲ್ಲಿ ಈ ಲೇಖನ ಹಾಕುವಂತೆ ಮಾಡಿದ್ದು, ನಮ್ಮ ತಾರಾಲಯದ ವೆಬ್ ಸೈಟ್ನಲ್ಲಿ ಕನ್ನಡದಲ್ಲಿ ಈ ಬಗ್ಗೆ ಕಂಡ ವಿಶೇಷ ಪುಟ. ಅದರೊಂದಿಗೆ ಸಂಜೆ ಐನ್ ಸ್ಟೀನ್ ನ "ರಿಲೇಟಿವಿಟಿ" ಬಗೆಗಿನ ಲೇಖನ ನೋಡಿ ಕೊಂಡ"ನ್ಯೂ ಸೈಂಟಿಸ್ಟ" ಮ್ಯಾಗಜೀನ್ ನನ್ನ ತಲೆಯಲ್ಲಿ ಬಿತ್ತಿದ ನಮ್ಮ ಶೈಕ್ಷಣಿಕ ವ್ಯವಸ್ಥೆಯ ಕೆಲ ಪ್ರಶ್ನೆಗಳು. ವಿಜ್ಞಾನ, ತಂತ್ರಜ್ಞಾನ ಎಲ್ಲ ಮಾಧ್ಯಮದ ಮಕ್ಕಳಿಗೂ ಸಿಗ್ತಿದ್ಯಾ ಅಂತ ಯೋಚನೆ ಮಾಡಿದಾಗ, ನನಗೆ ಮರೆತು ಹೋಗಿದ್ದ E=mc2 ಕಂಡು ಬೆಚ್ಚಿ ಬಿದ್ದೆ. ಹಿಂದೆ ಶಾಲೆನಲ್ಲಿ ಓದುತ್ತಿರುವಾಗ ನಮ್ಮನ್ನೆಲ್ಲ ಕರ್ಕೊಂಡು ಈ ತಾರಾಲಯಕ್ಕೆ ಬಂದಿದ್ರು ನಮ್ಮ ಗುರುಗಳು. ಆಗ ನನಗೆ ತಿಂಡಿ ತಿನ್ಲಿಕ್ಕೆ ಕೊಟ್ಟ ಕಾಸನ್ನ BASE (ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಶನ್) ಸದಸ್ಯತ್ವಕ್ಕೆ ಕೊಟ್ಟು ಪಡೆದ ಪುಟಾಣಿ ಪೊಟ್ಟಣ, ಅದ್ರಲ್ಲಿದ್ದ ಭೌತವಿಜ್ಞಾನದ ಕೆಲ ಪ್ರಯೋಗಗಳು ಪ್ರಾಯೋಗಿಕವಾಗಿ ನನಗೆ ಅದೆಷ್ಟೋ ವಿಷಯಗಳನ್ನ ತಿಳಿಸಿಕೊಟ್ಟಿದ್ದವು. ಆದ್ರೆ ಈ ರೀತಿಯ ಕಲಿಕೆ ಬಹಳ ದಿನ ಸಾಧ್ಯವಾಗಲಿಲ್ಲ. ಬೇಸ್ ನಿಂದ ಪ್ರಾಯೋಗಿಕ ಪೊಟ್ಟಣಗಳು ಬರೋದು ನಿಂತವು. ಮತ್ತೆ ಎಕ್ಸಪೆರಿಮೆಂಟ್ ಅಂತ ಮಾಡಿದ್ದು ಪಿ.ಯು.ಸಿ ಗೆ ಸೇರಿದಾಗಲೆ. ಅಲ್ಲಿ ಶುರುವಾಯ್ತು ನೋಡಿ ನನ್ನ ಮತ್ತು ಕಂಪ್ಯೂಟರಿನ ಅವಿನಾಭಾವ ಸಂಬಂದ.

ಕೆಳಗಿನ ಚಿತ್ರಗಳು ನಿಮಗೆ ಶುಕ್ರನ ಮತ್ತು ಗುರುವಿನ ಇಂಟರ್ವೂ ಅನ್ನ ಅರಿತು ಕೊಳ್ಲಿಕ್ಕೆ ಸಹಾಯ ಮಾಡ್ತವೆ. ನೀವು ಕಣ್ಣಾರೆ ಇದನ್ನ ನೋಡಿದ್ರೆ ಅದರ ಬಗ್ಗೆ ಬರೆಯೋದನ್ನ ಮರೀಬ್ಯಾಡಿ.