ಶೋಷಣೆ
ಕವನ
ಹೆಣ್ಣೆ ನೀ ಬೆಳದಿಂಗಳ ಬಾಲೆ
ಅರಳಿದರೇ ಹೂ ಮಾಲೆ
ಉರಿದರೇ ಜ್ವಾಲೆ
ಕಣ್ಣಂಚಲಿ ಕೋಲ್ಮಿಂಚು
ಹತ್ತಿ ಉರಿದರೇ ಕಾಡ್ಗಿಚ್ಚು
ಆದರೂ ನೀ ಪಾಲಕರಿಗೆ ತಲೆ ಶೂಲೆ
ಅಂತರಂಗದಲ್ಲಿ ಅವಿಷ್ಕಾರ
ಬಹಿರಂಗದಲ್ಲಿ ಬಹಿಷ್ಕಾರ
ಎಲ್ಲೆಲ್ಲಿಯೂ ನಡೆದಿದೆ ನಿನ್ನಯ ವ್ಯಾಪಾರ
ನೀನೀ ಜನರ ಪಗಡೆಯ ಜೀವಾಳ
ಉರುಳಿ ಉರುಳಿ ಸೇರಿದಿ ಪಾತಾಳ
ಆಡಿಸುವಾತನ ಕೈಯಲ್ಲಿ ನೀನ್ನ ಜೀವಾಳ
ಭಾವ, ಬಂಧಗಳಿಲ್ಲ ಬರಿ ವ್ಯಾಪಾರ
ಪುಡಿಗಾಸಿಗಿಂತಲೂ ನೀ ಬಲುಭಾರ
ನಿನ್ನ ಭವದ ದಾರಿ ದೂರ ದೂರ
ಶೋಷಣೆಯ ಸೇತುವೆ ನಿನ್ನಯ ಬಾಳು
ದೇಹ ಉರಿಸಿ ಜಗಕೆ ಬೆಳಕ ನೀಡುವವಳು
ನಿನ್ನ ಮುಗ್ದತೆಯೇ ನಿನ್ನ ಜೀವಕೆ ಉರುಳು