ಸಚಿನ್,ಮೂರ್ತಿ ಮತ್ತು ವಿವಾದಗಳು

ಸಚಿನ್,ಮೂರ್ತಿ ಮತ್ತು ವಿವಾದಗಳು

ಬರಹ

ಸಚಿನ್ ಯಾವುದೋ ಪಾರ್ಟಯಲ್ಲಿ ಕೇಕ್ ತುಂಡು ಮಾಡಲಿತ್ತಂತೆ. ಆ ಕೇಕ್ ನಮ್ಮರಾಷ್ಟ್ರಧ್ವಜದ ಬಣ್ಣ ಹೊಂದಿತ್ತು. ಆದರೂ ಸಚಿನ್ ಮಹಾಶಯ ನಿರ್ಯೋಚನೆಯಿಂದ ಕೇಕ್ ತುಂಡು ಮಾಡಿ,ವಿವಾದ ಸೃಷ್ಟಿಗೆ ಕಾರಣರಾದರು.
ಇನ್ಫೋಸಿಸ್‍ಗೆ ರಾಷ್ಟ್ರಪತಿ ಭೇಟಿ ವೇಳೆ,ರಾಷ್ಟ್ರಗೀತೆ ಹಾಡದೆ,ವಾದ್ಯಸಂಗೀತದಲ್ಲಿ ನುಡಿಸಿದ್ದಕ್ಕೆ ಕಾರಣ ಕೇಳಿದಾಗ, ನಾರಾಯಣಮೂರ್ತಿಗಳು ಕಂಪೆನಿಯ ವಿದೇಶೀ ಅತಿಥಿಗಳಿಗೆ ಕಿರಿಕಿರಿಯಾಗಬಹುದೆಂಬ ಕಾರಣ ನೀಡಿದರಂತೆ
ನಮ್ಮ ಗಣ್ಯರು ಇದೇಕೆ ಹೀಗೆ ವರ್ತಿಸುತ್ತಾರೋ? ತಮ್ಮನ್ನು ಮಾಧ್ಯಮಗಳು ಮತ್ತು ಜನಸಮೂಹ ಸದಾ ತೆರೆದ ಕಣ್ಣಿನಿಂದ ನೋಡುತ್ತಿವೆ ಎನ್ನುವುದು ಈ ಮಹನೀಯರಿಗೆ ಗೊತ್ತು.ಆದರೂ ತುಸುವೂ ಎಚ್ಚರಿಕೆಯಿಂದ ವರ್ತಿಸುವುದರ ಕಡೆ ಇವರುಗಳು ಗಮನ ಕೊಡುವುದಿಲ್ಲ. ವಿವಾದ ಸೃಷ್ಟಿಯಾದ ಮೇಲೆ ವಿಷಾದ, ವಿವರಣೆ ನೀಡಿ ವಿವಾದ ತಣ್ಣಗಾಗಿಸುವ ಪ್ರಯತ್ನವಷ್ಟೇ ನಡೆಯುತ್ತದೆ. ಆದರೆ ಆ ವೇಳೆಗೆ ಅವರ ಅಭಿಮಾನಿಗಳಿಗೆ ಅವರ ಬಗ್ಗೆ ಭ್ರಮನಿರಸನವಾಗಿರುತ್ತದೆ. ನಮ್ಮ ಜನರ ನಡವಳಿಕೆಯನ್ನು ಅರ್ಥ ಮಾಡಿಕೊಂಡು, ತಮ್ಮ ಜವಾಬ್ದಾರಿ ಅರಿತು ನಡೆವ ಗಣ್ಯರು ನಮ್ಮಲ್ಲಿ ಯಾಕಿಲ್ಲ?