ಸಮಯ...

ಸಮಯ...

ಕವನ

ನೀ ನಿಲ್ಲದ ಹರಿಯುವ ನೀರಿನಂತೆ..

ಬೇಡಿಕೆ ಇಟ್ಟು ನೋಡಿದರು ಇಡೇರದು ನಿನ್ನ ಬಗ್ಗೆ ಚಿಂತೆ..

ಖರೀದಿಸುವ ಎಂದರೆ ಸಿಗಲ್ಲ ನೀ ಯಾವುದೇ ಸಂತೆ..

ಪ್ರತಿ ಕ್ಷಣ ನೋಡುತ್ತಾ ಕುಳಿತರೆ ಸಾಗುವೆ ನೀ ಸಂಬಂಧ ಇಲ್ಲದಂತೆ..

ನೀ ಯಾಕೆ ಹೀಗಂತೆ...

 

ಖುಷಿಯ ಕ್ಷಣಕ್ಕೆ ನೀ ಇರಬೇಕು ಹೆಚ್ಚು ಘಳಿಗೆ ಎನ್ನುವ ಬಯಕೆ..

ದುಃಖದ ಕ್ಷಣಕ್ಕೆ ಬೇಗ ನೀ ಸಾಗಲಿ ಎನ್ನುವ ನಂಬಿಕೆ..

ಸಾಗುವ ಬದುಕಿನ ಹಾದಿಗೆ ತೋರಿಸುವ ಘಳಿಗೆಯ ಯಾಂತ್ರಿಕ..

 

ಹಿಡಿದು ಇಡಲು ಆಗದು ನಿನ್ನನ್ನು..

ಪಡೆದು ಸಾಲದು ನಿನ್ನ ತನವನ್ನು..

ನೋಡುತಾ ಕುಳಿತರೆ ಸಾಗಿಸುವೆ ದಿನವನ್ನು..

ನಮ್ಮೆಲ್ಲರ ಬದುಕಿಗೆ ಕೈ ಗಡಿಯಾರ ನೀನು..

 

ಎಲ್ಲರನ್ನು ಮೆಚ್ಚಿಸುವ ನಿನ್ನನ್ನು...

ಹೆಚ್ಚಿಸುವೆ ವಯಸ್ಸನ್ನು...

ಹುಚ್ಚಾಗಿಸುವೆ ಕೆಲ ಸಮಯವನ್ನು..

ನಗು-ಅಳುವಿನ ಸ್ನೇಹಿತ ನೀನು..

ಮಾಸಿ ಹೋಗದ ಪ್ರತಿಯೊಬ್ಬರ ಬದುಕಿನ ಯಾಂತ್ರಿಕ ನೀನು...

ನಿನೊಬ್ಬನೇ ಶಾಶ್ವತ ನಮ್ಮೊಡನೆ 

ಪ್ರತಿ ಕ್ಷಣವು ನೀನು ಆತ್ಮೀಯ ಸಮಯ...

-ಉಮೇಶ್ ಮಲ್ನಾಡ್ ಶಿರಸಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್