ಸವಿಯ ಪಯಣ
ಕವನ
ತಪ್ಪು ತಪ್ಪು
ನಡೆಯ ಜೊತೆಗೆ
ಸಾಗ ಬೇಡ ಎಂದಿಗು
ಒಪ್ಪನೊಪ್ಪು
ಬದುಕಿನೊಳಗೆ
ಸವಿಯ ಗಳಿಸು ಮುಂದೆಗು
ಉದಯ ರವಿಯ
ನೋಡುವಾಗ
ಅವನ ಹಾಗೆ ಆಗುವೆ
ಮನದಿ ಎಣಿಸು
ದಿನದ ಸಮಯ
ಬಾಳ ರಥದೆ ಸಾಗುವೆ
ಹರುಷ ಇಹುದು
ಸುಖದ ಕಡಲು
ಹರಸಿ ಇರಲು ಹಿತವದು
ಪ್ರೀತಿ ಪ್ರೇಮ
ಬಂಡಿ ಚಕ್ರ
ಮುಂದೆ ಪಯಣ ಒಲವದು
ಮರೆತು ಬಿಡಲು
ಹಿಂದಿನದನು
ಬರುವ ಕಾಲ ಚಂದವು
ಹೀಗೆ ಮೋಹ
ಎಳೆದು ತರಲು
ಜೀವ ಕಾವ ಬಂಧವು
***
ಗಝಲ್
ಗೆಲುವಾಗಲಿಲ್ಲ ಪೇಟ ಧರಿಸಿದರು ಸಖ
ಬದಲಾಗಲಿಲ್ಲ ನನ್ನ ವರಿಸಿದರು ಸಖ
ಕೆಟ್ಟ ಜನರ ಸಹವಾಸ ಮಾಡಿದೆಯೇಕೆ
ಒಳ್ಳೆಯವರು ದಾರಿ ತೋರಿಸಿದರು ಸಖ
ಚಿಂತೆಗಳ ನಡುವೆಯೆ ಬದುಕು ಸಾಗಬೇಕೆ
ಚಿಂತನೆಗಳ ಉಡುಪು ತೊಡಿಸಿದರು ಸಖ
ಎತ್ತರಕ್ಕೆ ಏರುವೆನೆಂಬ ಭ್ರಮೆಯೇಕೆ ನಿನಗೆ
ಮೆಟ್ಟಿಲುಗಳ ತಂದೀಗ ಇರಿಸಿದರು ಸಖ
ಹಳತು ಕೊಳಕುಗಳು ಬೇಕೇನು ಈಶಾ
ಹೊಸತು ವಸ್ತುಗಳ ತರಿಸಿದರು ಸಖ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್