ಸಾಧನೆ ಮಾಡಿ ಸೇರು ಚರಿತ್ರೆಯೊಳಗೆ
ಕವನ
ಸಾಗಿಸಬೇಕು ಜೀವನ
ಸಾಗಿದಂತೆ ಮಾನವ
ಸಾಗರ ಬದುಕಿನ ಪಯಣ
ಸೌಖ್ಯ ಸಂಧಾನಕ್ಕೆ ಕಾರಣ
ಇರಬೇಕು ಇದ್ದಂತೆ ಜಗದಲಿ
ನೋವು ಉಂಡ ದಾರಿಯಲಿ
ಛಲ ಬಿಡದ ಗುರಿ ಯಿಂದ
ಸಹನೆ ತೋರಿಸು ಮನದಿಂದ
ಮನ ದುಗುಡ ಬಿಡು
ಜನ ಆಸರೆ ಇಲ್ಲದೆ ಕಂಡು
ನಿರಾಸೆ ಬಿಟ್ಟು ಬಿಡು
ಬದುಕ ಸಾಗಿತು ಬಿಡು
ತಿಳಿದು ತಿಳಿಯದಂತೆ ಇರಬೇಕು
ಹುಚ್ಚರಂತೆ ಜೀವಿಸಬೇಕು
ಎಚ್ಚರದಿಂದ ನಡೆಯಬೇಕು
ಸ್ವಾಭಿಮಾನ ಹೊಂದಿರಬೇಕು
ಧೈರ್ಯ ಮಾಡು ನಿನ್ನೊಳಗೆ
ಸ್ಥೈರ್ಯ ಬರಲಿ ಮನದೊಳಗೆ
ಗುರಿ ಬೆನ್ನಟ್ಟಿ ನಡೆ ಜಗದೊಳಗೆ
ಸಾಧನೆ ಮಾಡಿ ಸೇರು ಚರಿತ್ರೆಯೊಳಗೆ.
-ಹುಚ್ಚೀರಪ್ಪ ವೀರಪ್ಪ ಈಟಿ, ಸಾ ನರೇಗಲ್ಲ
ಚಿತ್ರ ಕೃಪೆ: ಇಂಟರ್ನೆಟ್ ತಾಣ್
ಚಿತ್ರ್
