ಸಾವಿನ ಬಾಗಿಲು

ಸಾವಿನ ಬಾಗಿಲು

ಬರಹ

ಈ ಘಟನೆ ನಡೆದಾಗ ನನಗೆ ಸುಮಾರು ಇಪ್ಪತ್ತು ವರುಷ. ಆಗೊಮ್ಮೆ ನನಗೆ ಅನಾರೋಗ್ಯ ಉಂಟಾಯಿತು. ತಿಂದ ಯಾವ ಅಹಾರವೂ ಜೀರ್ಣವಾಗದೇ, ವಾಂತಿಯಾಗಿ, ದೇಹವು ದುರ್ಬಲವಾಗಿ ಐವತ್ತು ಕೇಜಿಯ ದೇಹ ಮೂವತ್ತಾಯಿತು.ತಂದೆಯವರು ಊರಿನ ಡಾಕ್ಟರರ ಸಲಹೆಯಂತೆ ಕುಂದಾಪುರದ ಸರ್ಕಾರೀ ಆಸ್ಪತ್ರೆಗೆ ಸೇರಿಸಲಾಯ್ತು. ಕಲುಷಿತ ನೀರಿನ ಸೇವನೆಯಿಂದಾಗಿ ಟೈೞಾಯಿಡ್, ಲಿವರ್ ಎಲ್ಲಾ ಖಾಯಿಲೆಗಳೂ ಒಟ್ಟಿಗೇ ಬಂದುವಂತ ಅಲ್ಲಿನ ಡಾಕ್ಟರುಗಳು ಹೇಳಿದರಂತೆ. ಏಳಲೂ ಆಗದಷ್ಟು ನಿತ್ರಾಣವಾಗಿತ್ತು.ಹದಿನೈದು ದಿನ ಆಸ್ಪತ್ರೆಯ ಬೆಡ್ ನಲ್ಲಿಯೇ ಎಲ್ಲ.ಮನೆಯಿಂದ ಸುಮಾರು 28 ಕಿಲೋ ಮೀಟರ್ ದೂರದಲ್ಲಿದ್ದುದರಿಂದ ದಿನಾ ಸರದಿಯಂತೆ ಅಮ್ಮ ಅಣ್ಣ ಅಪ್ಪ ಎಲ್ಲರೂ ಬಂದು ರಾತ್ರೆ ನನ್ನೊಡನಿದ್ದು ದಿನದಲ್ಲಿ ಬದಲಾಗುತ್ತಿದ್ದರು. ಆ ದಿನ ನನಗೆ ಈಗಲೂ ನೆನಪಿದೆ. ಅಪ್ಪ ಹಿಂದಿನ ರಾತ್ರೆಯಿದ್ದುದರಿಂದ ಅಮ್ಮ ಬಂದ ಕೂಡಲೇ ಹೊರಟು ನಿಂತರು. ಆಗಲೇ ನನ್ನ ಚಿಕ್ಕಪ್ಪ ಕೂಡಾ ಬಂದುದರಿಂದ ಅಲ್ಲಿಯೇ ಮಾತನಾಡುತ್ತಾ ನಿಂತರು.ಆಸ್ಪತ್ರೆಯ ಉಪಚಾರದಿಂದಾಗಿ ನಾನು ಚೇತರಿಸಿಕೊಳ್ಳುತ್ತಿದ್ದೆನಷ್ಟೆ.ನಾನು ಶೊಉಚಾಲಯಕ್ಕೆ ಹೋಗಲು ಕೇಳಿಕೊಂಡೆ. ಮನಸ್ಸಿಲ್ಲದ ಮನಸ್ಸಿನಿಂದ ಅಪ್ಪ ಒಪ್ಪಿಕೊಂಡರು. ಅಪ್ಪ ಚಿಕ್ಕಪ್ಪ ಇಬ್ಬರೂ ಕೈಹಿಡಿದು ನನ್ನನ್ನು ನಡೆಸಿಕೊಂಡೇ ಶೊಉಚಾಲಯಕ್ಕೆ ಕರೆತಂದರು. ನನ್ನ ಒತ್ತಾಯಕ್ಕೆ ಕಟ್ಟು ಬಿದ್ದ ಅವರನ್ನು ಬಿಟ್ಟು ನಾನು ಎರಡೆ ಹೆಜ್ಜೆ ನಡೆದೆ ಅಷ್ಟೆ... ಮುಂದೆ ನಾನು ನಾನಾಗಿ ಅಲ್ಲಿರಲೇ ಇಲ್ಲ. ನೀಲ ಆಕಾಶದಲ್ಲಿ ಹತ್ತಿಗಿಂತಲೂ ಹಗುರವಾಗಿ ಹಾರುತ್ತಲ್ಲಿದ್ದೆ.ನೋವು ನಲಿವಿನ, ಸುಖ ದುಖದ ಪರಿವಿರದ, ಸಂಬಂಧದ ಗೋಜಿಲ್ಲದ, ನಿSಚಿತ ಗುರಿಯ ಅತ್ಯುನ್ನತ ಸುಖಕರ ಪ್ರಯಾಣ ಅದಾಗಿತ್ತು. ಅದು ಎಣಿಸಿದರೆ ಈಗಲೂ ಮನಸ್ಸು ಹಗುರವಾಗುತ್ತದೆ.ಎಷ್ಟು ಸಮಯ ಪ್ರಯಾಣಿಸಿದೆ ಗೊತ್ತಿಲ್ಲ ಅಷ್ಟರಲ್ಲಿ ಯಾರೋ ನನ್ನ ಹೆಸರು ಹಿದಿದು ಕರೆದರು. ನಾನು ಬೆಡ್ ಮೇಲೆ ಮಲಗಿದ್ದುದು ಅರಿವಾಯಿತು ಅಪ್ಪ ಅಮ್ಮ ಚಿಕ್ಕಪ್ಪ ಎಲ್ಲರ ಕಣ್ಣುಗಳಲ್ಲಿಯೂ ಗಂಗಾ ಭಾಗೀರಥಿ. ನಾನು ಇನ್ನಿಲ್ಲವೆಂದೇ ಎಣಿಸಿದ್ದ ಎಲ್ಲರೂ ಭಾವಾತಿರೇಕದಿಂದ ಸಂಭ್ರಮಪಟ್ಟರು.ಅಲ್ಲಿನ ಅದೇ ದಿನದ ಇನ್ನೊಂದು ಘಟನೆಯನ್ನೂ ನಿಮಗೆ ಹೇಳಲೇ ಬೇಕು. ಸರಕಾರೀ ಅಸ್ಪತ್ರೆಯ ದಿನಚರಿಯೋ ದೇವರಿಗೇ ಪ್ರೀತಿ ಆದರೆ ಆಗಿನ ವೈದ್ಯರು ಸಾಕ್ಷಾತ್ ದೇವರೇ ಅಂದುಕೊಳ್ಳುತ್ತಿದ್ದ ಕಾಲವದು.ಮರದಿಂದ ಬಿದ್ದು ಮೂಳೆ ಮುರಿದುಕೊಂದವ ಒಬ್ಬ,ಅವನ ನರಳುವಿಕೆ, ಗೂರಲಿನ ಮುದುಕರೊಬ್ಬರ ಯಾತನೆ,ರಾತ್ರೆಯಾದರಂತೂ ಈಎಲ್ಲ ನರಳುವಿಕೆಯ ಶಬ್ದ ಉಲ್ಭಣಗೊಂದು ಒಂದು ಭಯಾನಕ ಲೋಕವೇ ಸ್ರಷ್ಟಿಯಾಗುತ್ತಿತ್ತು.ನನ್ನ ಪಕ್ಕದ ಬೆಡ್ ನಲ್ಲೊಬ್ಬ ಹುಡುಗನಿದ್ದ. ಅವನನ್ನು ನೋಡಿಕೊಳ್ಳಲು ಅವನ ತಾಯಿ ಬರುತ್ತಿದ್ದಳು ಪ್ರಾಯSಅಃ ಕಷ್ಟ ಜೀವಿಯಾದ ಅಕೆಗೆ ರಾತ್ರೆಯಾಯಿತೆಂದರೆ ಎಲ್ಲಿಲ್ಲದ ನಿದ್ದೆ ಬಂದುಬಿಡುತ್ತಿತ್ತು. ಆ ದಿನ ರಾತ್ರೆ ಆತ ನೀರಿಗಾಗಿ ಅಮ್ಮನ್ನ ಕರೆದ, ಅವಳಿಗೆ ಎಚ್ಚರವಾಗುವ ಮೊದಲೇ ನಾನು ನೋಡನೋಡುತ್ತಿರುವಂತೆಯೇ ಆತ ಈಲೋಕ ತ್ಯಜಿಸಿದ್ದ. ಆತನ ಕಳೆದೇ ಇದ್ದ ಬಾಯಿ ಅಲುಗಾಡದೇ ಇದ್ದ ದೇಹನೋಡಿ ಹೆದರಿ ಗಟ್ಟಿಯಾಗಿ ಚೀರಿದೆ.ಎಲ್ಲರೂ ಬಂದರೂ ಆತನನ್ನು ಉಳಿಸಿಕೊಳ್ಳಲಾಗದ ಅಸಹಾಯಕ ಸ್ಥಿತಿಯ ಡಾಕ್ಟರ್, ಗೋಳಿಡುತ್ತಿದ್ದ ಆತನ ತಾಯಿ..ಎಣಿಸಿದರೆ ಈಗಲೂ ನನ್ನ ಮನಸ್ಸು ಅಂದಿನ ಆ ಸ್ಥಿತಿಗೆ ತಲುಪಿಬಿಡುತ್ತದೆ, ಮತ್ತು ಜೀವನ ಇಷ್ಟೆಯಾ ಅನ್ನಿಸಿಬಿಡುತ್ತದೆ.