ಸಿಡುಬಿನ ಲಸಿಕೆ ಹಾಕಿಸದಿರಲು ೨೦ ಕಾರಣಗಳು.

ಸಿಡುಬಿನ ಲಸಿಕೆ ಹಾಕಿಸದಿರಲು ೨೦ ಕಾರಣಗಳು.

ಬರಹ

ಒರ್ಗೊನ್ ಬಯೊಫಿಸಿಕಲ್ ರಿಸರ್ಚ್ ಲ್ಯಾಬ್, ಗ್ರೀನ್‍ಸ್ಪ್ರಿಂಗ್ಸ್ ರಿಸರ್ಚ್ ಅಂಡ್ ಎಜುಕೇಶನ್ ಸೆಂಟರ್‌ಗಳು ನಡೆಸಿದ ಸಂಶೋಧನೆಗಳ ಆಧಾರದ ಮೇಲೆ ಅಮೇರಿಕದ ಸಿಯಾಟಲ್ ಟೈಮ್ಸ್ ಪತ್ರಿಕೆಯು " 20 Reasons not to take Small pox vaccine" ಎಂಬ ಲೇಖನವನ್ನು ಪ್ರಕಟಿಸಿತ್ತು. ಅದರ ಭಾವಾನುವಾದ ಮತ್ತು ಆಕರಗ್ರಂಥಗಳನ್ನು ಯಥಾವತ್ ಇಲ್ಲಿಡಲು ಪ್ರಯತ್ನಿಸುತ್ತೇನೆ.

 ೧. "ಸಾಮೂಹಿಕವಾಗಿ ಲಸಿಕೆಯನ್ನು ಹಾಕಿದರೆ ಕೆಲವರು ತಮ್ಮ ಜೀವವನ್ನು ಕಳೆದುಕೊಳ್ಳಬಹುದು ಎಂಬುದೇ ನನ್ನ ಚಿಂತೆ." ಎಂದು ಜಾರ್ಜ್ ಬುಶ್ ಸಿಡುಬಿನ ಸಾಮೂಹಿಕ ಲಸಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. [ದ ಟೈಮ್ಸ್ (ಲಂಡನ್) ನ.೦೯, ೨೦೦೧]

೨. ಅಮೇರಿಕನ್ ಮೆಡಿಕಲ್ ಅಸೋಸಿಯೆಷನ್ ಪ್ರಕಾರ ಲಸಿಕೆ ಹಾಕಿಸಿಕೊಂಡ ಪ್ರತೀ ಮಿಲಿಯನ್ ಜನರಲ್ಲಿ ೨೫೦ ಜನರು ಸಾವನ್ನಪ್ಪಬಹುದು. ಅಂದರೆ ನೂರ ಹದಿನೈದು ಕೋಟಿ ಇರುವ ಭಾರತದ ಜನಸಂಖ್ಯೆಗೆ ಲಸಿಕೆಯ ಕಾರಣಾದಿಂದಾಗಿ ಎರಡು ಲಕ್ಷ ಎಂಭತ್ತೇಳೂವರೆ ಸಾವಿರ ಜನರ ಸಾವಿನ ಭೀತಿ! [ ಜರ್ನಲ್ ಆಫ಼್ ಅಮೆರಿಕನ್ ಮೆಡಿಕಲ್ ಅಸೊಸಿಯೆಷನ್, ಜುನ್ ೯, ೧೯೯೯, ಆವೃತ್ತಿ ೨೮೧, ನಮ್ ೨೨]

೩. ಜೈವಿಕ ಭಯೋತ್ಪಾದನೆಯ ಭೀತಿಯಿಂದಾಗಿ ಸಿಡುಬಿನ ಸಾಮೂಹಿಕ ಲಸಿಕೆಯನ್ನು ತಾನು ಅನುಮೋದಿಸುವುದಿಲ್ಲ ಎಂದು ಅಮೇರಿಕನ್ ಮೆಡಿಕಲ್ ಅಸೊಸಿಯೆಷನ್ ಹೇಳಿದೆ. ಜೈವಿಕ ಭಯೋತ್ಪಾದನೆಯ ಕಾರಣದಿಂದ ಲಸಿಕೆಯ ಮೂಲಕ ಆರೋಗ್ಯವನ್ನು ಪ್ರತಿಪಾದಿಸುವುದು ಸುರಕ್ಷಿತವಲ್ಲ ಎಂಬುದು ಅಸೋಸಿಯೇಷನ್‍ನ ಹೇಳಿಕೆ.[ರೆವ್ಟರ್ಸ್, ಡಿಸೆಂಬರ್ ೧೨, ೨೦೦೧]

೪. ರೋಗನಿರೋಧಕ ಶಕ್ತಿ ಎಲ್ಲೆಡೆಯೂ ಸಮಾನವಾಗಿರದ ಕಾರಣ ಸಾಮೂಹಿಕ ಲಸಿಕೆ ಸಾಕಷ್ಟು ಅಡ್ಡ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಗಳಿವೆ. [ಡಬ್ಲು.ಇ.ಟಿ.ಎ ದ ಸೆಮಿನಾರ್ ಒಂದರಲ್ಲಿ ಸಿ.ಡಿ.ಸಿ ನಿರ್ದೇಶಕ ಜೆಫ಼್ಫ಼್ರಿ ಕೊಪ್ಲಾನ್‍ರ ಭಾಷಣ. ನವೆಂಬರ್ ೧೪, ೨೦೦೧]

೫. ಈಗೀಗ ಲಸಿಕೆ ಹಾಕಿಸುವುದು ಲಾಭಕ್ಕಿಂತ ನಷ್ಟವೇ ಹೆಚ್ಚು. ಪ್ರತ್ಯಕ್ಷ ಹಾಗೂ ಪರೋಕ್ಷ ಅಡ್ಡಪರಿಣಾಮಗಳು ಲಸಿಕೆಯನ್ನು ಅಪಾಯಕಾರಿಯನ್ನಾಗಿ ಮಾಡಿವೆ. [ ಮೆರೀ ರಾವ್, ಸ್ಪೊಕ್ಸ್‍ಮನ್‍ನ ಸಂದರ್ಶನವೊಂದರಲ್ಲಿ, ನವೆಂಬರ್ ೧೪, ೨೦೦೧]

೬. ಇಡೀ ದೇಶವೇ ಲಸಿಕೆಯ ಕಾರ್ಯಕ್ರಮಕ್ಕೆ ಒಳಪಟ್ಟರೆ ಕೆಲ ಸಾವಿರ ಜನರು ಮೆದುಳಿನ ಸೋಂಕಿಗೆ ಬಲಿಯಾಗುವ ಸಾಧ್ಯತೆಗಳಿವೆ. [ವಾಷಿಂಗ್‍ಟನ್ ಪೊಸ್ಟ್, ಡಿಸೆಂಬರ್ ೨೬, ೨೦೦೧]

೭. ಥಾಮಸ್ ಜೆಫ಼ರ್ಸನ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ರೊಜರ್ ಪೊಮೆರನ್ಟ್ಸ್ ಪ್ರಕಾರ ಬಹುತೇಕ ವೈದರುಗಳಿಗೆ ಸಿಡುಬಿನ ಲಸಿಕೆ ೨ಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳ ಮೇಲೆ ಹಾಗೂ ೬೫ ಕ್ಕಿಂತ ಹೆಚ್ಚು ವಯಸ್ಸಾದವರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ಗೊತ್ತಿಲ್ಲ. ದುರ್ಬಲ ರೋಗನಿರೋಧಕ ಶಕ್ತಿ ಇರುವವರ ಮೇಲೆ, ಹೆಚ್ ಐ ವಿ ಬಾಧಿತರ ಮೇಲೆ, ರಾಸಾಯನಿಕ ಚಿಕಿತ್ಸೆಗೆ (ಕೀಮೊಥೆರಪಿ) ಒಳಪಡುತ್ತಿರುವವರ ಮೇಲೆ ಹಾಗೂ ಅಂಗ ಕಸಿಗೆ ಒಳಗಾಗದವರ ಮೇಲೆ ಲಸಿಕೆಯ ದುಷ್ಪರಿಣಾಮಗಳು ಇನ್ನೂ ಘೋರ. [ವಾಷಿಂಗ್ಟನ್ ಪೊಸ್ಟ್, ಡಿಸೆಂಬರ್ ೨೬, ೨೦೦೧]

೮. ಹೊಸ ಮಾದರಿಯ ಲಸಿಕೆಗಳು ಕಡಿಮೆ ರೋಗ ನಿರೋಧಕ ಶಕ್ತಿ ಇರುವವರಲ್ಲಿ ರೋಗವನ್ನೂ ಕೆಲವೊಮ್ಮೆ ಸಂದರ್ಭಗಳಲ್ಲಿ ಸಾವನ್ನೂ ತಂದಿಡಬಹುದಾದ್ದರಿಂದ ಸಂಶೋಧಕರು ಈ ಲಸಿಕೆಗಳನ್ನು ಅನುಮೋದಿಸಲು ಹಿಂದೇಟು ಹಾಕುತ್ತಿದ್ದಾರೆ. [ಸೈನ್ಸ್, ಆವೃತ್ತಿ ೨೭೭, ಜುಲೈ ೧ ೧೯೯೭, ಪುಟ ೩೧೨-೧೩]

 ೯. ೧೯೭೨ ರ ನಂತರ ಅಮೇರಿಕ ಸಂಸ್ಥಾನದಲ್ಲಿ ನಿತ್ಯಕ್ರಮವಾಗಿ ಸಿಡುಬಿನ ಲಸಿಕೆಯನ್ನು ನಿಲ್ಲಿಸಲಾಯಿತು. ಸಿಡುಬಿನ ಲಸಿಕೆಯು ಹೆಚ್ಚು ಪ್ರತಿಕ್ರಿಯಾತ್ಮಕವಾಗಿದ್ದು ಸಾವು ಸೇರಿದಂತೆ ಗಂಭೀರ ಅಡ್ಡಪರಿಣಾಮಗಳು ಉಂಟಾಗಿರುವುದರಿಂದ ಆರೋಗ್ಯಾಧಿಕಾರಿಗಳು ಲಸಿಕೆ ನೀಡಲು ಹಿಂಜರಿಯುತ್ತಿದ್ದಾರೆ.[ರೆವ್ಟರ್ಸ್, ನವೆಂಬರ್ ೨೯, ೨೦೦೧]

೧೦.  ಲಸಿಕೆಯ್ ಅಡ್ಡಪರಿಣಾಮಗನ್ನುಳ್ಳ ಅಧ್ಯಯನದ ವಿಸ್ತ್ರುತ ವರದಿ ಇಲ್ಲಿದೆ.

೧೧. ಅಮೇರಿಕಾ ಸಂಯುಕ್ತ ಸಂಸ್ಥಾನದ ಸರ್ವೋಚ್ಛ ನ್ಯಾಯಾಲಯವು ಯಾವುದೇ ವ್ಯಕ್ತಿಗೆ ಬಲವಂತವಾಗಿ ಲಸಿಕೆ ಹಾಕುವುದು "ಅಮಾನುಷ ಹಾಗೂ ಕ್ರೌರ್ಯ" ಎಂದು ತೀರ್ಪು ನೀಡಿದ್ದು ಸರ್ಕಾರವು ಸಾಮಾಜಿಕ ಆರೋಗ್ಯದ ನೆಪದಲ್ಲಿ ಲಸಿಕೆಯ ಮೂಲಕ ಯಾವುದೇ ಒಬ್ಬ ಮನುಷ್ಯನ ಜೀವನವನ್ನು ಪಣಕ್ಕಿಡಬಾರದು ಎಂದು ಹೇಳಿದೆ. [ಜಕಬ್ಸೆನ್ ವಿ ಮೆಸಚುಸೆಟ್ಸ್, ೧೯೭ ಯು ಎಸ್ (೧೯೦೫)]

೧೨. ಅನೇಕ ಬ್ರಿಟಿಷ್ ಸಂಶೋಧಕರ ಪ್ರಕಾರ ೧೯೨೦ ರ ಹೊತ್ತಿಗೆ ಸಿಡುಬು ಲಸಿಕೆ ತೆಗೆದುಕೊಂಡವರ ನಡುವೆ ಸಾಮಾನ್ಯವಾಗಿತ್ತಲ್ಲದೇ ಸಾವಿನ ಸಂಖ್ಯೆ ಲಸಿಕೆ ತೆಗೆದುಕೊಂಡವರಲ್ಲೇ ಹೆಚ್ಚು ಇತ್ತು. [ಡಾ. ವಿಯೆರಾ ಸ್ಕೀಬ್ನರ್, ಆಸ್ಟ್ರೇಲಿಯಾ ೧೯೯೩, ಪು. ೨೦೫-೨೨೦]

೧೩. ಲಸಿಕೆಯಿಂದ ರೋಗನಿರೋಧಕತೆ ಹೆಚ್ಚಾಗುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ[ಸಿ.ಡಿ.ಸಿ, ಜನವರಿ ೨೮, ೧೯೯೪][ಲಿನ್ಕ್].

೧೪. ವಿಶ್ವ ಆರೋಗ್ಯ ಸಂಸ್ಥೆಯ ಹದಿಮೂರು ವರ್ಷಗಳ ಲಸಿಕೆ ಹಾಕುವ ಯೋಜನೆಯಿಂದಾಗಿ ೧೯೮೭ ರ ಹೊತ್ತಿಗೆ ಅನೇಕ ಲಸಿಕೆಯ ಡೊಸ್‍ಗಳಲ್ಲಿ ಹೆಚ್ ಐ ವಿ ಸೋಂಕು ಉಂಟಾಗಿತ್ತು ಎಂದು ಹೇಳುವ ವೈಜ್ಞಾನಿಕ ಆಧಾರಗಳು ಲಭ್ಯವಾಗಿದವು. [ಲಂಡನ್ ಟೈಮ್ಸ್, ಮೇ ೧೧, ೧೯೮೭]

೧೫. ಪ್ರಾಣಿಜನ್ಯವಾದ (ಉದಾ. ಪೊಲಿಯೊ) ಲಸಿಕೆಗಳಲ್ಲಿ ಪ್ರಾಣಿಗಳಲ್ಲಿರಬಹುದಾದ ಇತರೆ ವೈರಸ್‍ಗಳು ಸೇರಿಕೊಂಡಿರುತ್ತವೆ. ಇವನ್ನು ಸೋಸುವುದು (ಫ಼ಿಲ್ಟರ್) ಸಾಧ್ಯವಿಲ್ಲ. ಸಿಡುಬು ಸೇರಿದಂತೆ ಅನೇಕ ಲಸಿಕೆಗಳಲ್ಲಿರುವ ಪ್ರಾಣಿಜನ್ಯ ವೈರಸ್‍ಗಳು ಕ್ಯಾನ್ಸರ್ ತರಬಲ್ಲವು. ಈ ವೈರಸ್‍ಗಳು ಗೆಡ್ಡೆಯ ಬೆಳವಣಿಗೆಗೆ ಪ್ರಚೊದಕಗಳಾಗಿ (ಕೆಟಲಿಸ್ಟ್) ಕೆಲಸ ಮಾಡುತ್ತವೆ. ಇದು ಇಲಿಗಳ ಮೇಲೆ ನಡೆಸಿದ ಪ್ರಯೊಗದಿಂದ ಸಿದ್ಧವಾಗಿದೆ. [ಸೈನ್ಸ್, ಡಿಸೆಂಬರ್ ೧೫, ೧೯೬೧]

 ೧೬. ಸಿಡುಬಿನ ಲಸಿಕೆಯು ಹುಚ್ಚು ಹಸು (ಮ್ಯಾಡ್ ಕೌ) ರೋಗಾಣುವಿನಿಂದ ಕಲುಷಿತವಾಗಿರುವ ಸಾಧ್ಯತೆಗಳಿವೆ. ಆದರಿಂದ ಹೊಸ ಲಸಿಕೆಯನ್ನು ಸತ್ತ ಮನುಷ್ಯ ಭ್ರೂಣಗಳನ್ನು ಉಪಯೊಗಿಸಿ ತಯಾರಿಸಲು ಉದ್ದೇಶಿಸಲಾಗಿದೆ [ವರ್ಲ್ಡ್ ನೆಟ್ ಡೈಲಿ, ಡಿಸೆಂಬರ್ ೪, ೨೦೦೧]

 ೧೭. ಹೊಸ ಸಿಡುಬಿನ ಲಸಿಕೆಯನ್ನು ಜೈವಿಕ ತಂತ್ರಜ್ಞಾನದಿಂದ ತಯರಿಸಲಾಗುತ್ತಿದೆ. ಜೈವಿಕ ತಂತ್ರಜ್ಞಾನದಿಂದ ತಯಾರಾದ ಲಸಿಕೆಗಳು ಔಷಧಿಯೇ ಇಲ್ಲದ ರೋಗಗಳಿಗೆ ಹಾಗೂ ನರ ಸಂಬಂಧಿತ ರೋಗಗಳಿಗೆ ಕಾರಣವಾಗಬಹುದು. ಉದಾ. ಹೆಪಟೈಟಿಸ್-ಬಿ ಲಸಿಕೆ. ಹೆಪಟೈಟಿಸ್ ಬಿ ಲಸಿಕೆಯ ಅಡ್ಡಪರಿಣಾಮಗಳಿಂದ ಕೀಲುನೋವು, ನರಸಂಬಂಧಿ ದೌರ್ಬಲ್ಯಗಳು ಇತ್ಯಾದಿಗಳಿಂದ ಸಹಸ್ರಾರು ಜನರು ನರಳುತ್ತಿರುವುದು ವರದಿಯಾಗಿದೆ. ಸರಿಸುಮಾರು ಹದಿನೈದು ಸಾವಿರ ಫ಼್ರೆಂಚ್ ಪ್ರಜೆಗಳು ಕಡ್ದಾಯ ಹೆಪಟೈಟಿಸ್ ಬಿ ಲಸಿಕೆಯನ್ನು ನಿಲ್ಲಿಸಲು ಸರ್ಕಾರದ ಮೇಲೆ ಮೊಕದ್ದಮೆ ಹೂಡಿದ್ದರು.

೧೮. ಬ್ರಿಟನ್‍ನ ಲಸಿಕೆಗಳ ತಯಾರಕ ’ಮೆಡೆವಾ’ದಲ್ಲಿ ಕಲುಷಿತ ಲಸಿಕೆಗಳನ್ನು ತಯಾರಿಸಿದ ಸಾಕಷ್ಟು ದಾಖಲೆಗಳಿವೆ. ಹುಚ್ಚು ಹಸು ರೋಗಾಣುವಿನಿಂದ ಕಲುಷಿತವಾದ ಸುಮಾರು ೮೩೦೦೦ ಪೋಲಿಯೋ ಲಸಿಕೆಯ ಡೊಸ್‍ಗಳನ್ನು ಐರಿಷ್ ಮಕ್ಕಳ ಮೇಲೆ ಪ್ರಯೋಗಿಸಲಾಗಿತ್ತು. [ಲಂಡನ್ ಆಬ್ಸರ್ವರ್ ಅಕ್ಟೊಬರ್ ೨೦ -೨೬, ೨೦೦೦]

೧೯. ಬ್ರಿಟನ್ ನಲ್ಲಿ ತಯಾರಗುವ ಲಸಿಕೆಗಳಿಂದ ಸಾಕಷ್ಟು ಅಂದರೆ ಹತ್ತಿರ ಹತ್ತಿರ ೫೦೦೦ ಜನ ಸಾವಿಗೆ ಒಳಗಾಗುವುದು ಹಾಗೂ ೧೦೦೦೦ ಜನ ರೋಗಿಗಳಾಗುವುದು ಕಂಡು ಬಂದಿದೆ. ಲಸಿಕೆಯನ್ನು ತಯಾರಿಸುವ ಜಾಗದಲ್ಲಿ ಸಾಕಷ್ಟು ಸ್ವಚ್ಛತೆಯನ್ನು ಪಾಲಿಸುವುದಿಲ್ಲ ಹಾಗೂ ಸಿಬ್ಬಂದಿಗಳಲ್ಲಿ ನಿರ್ಲಕ್ಷ್ಯ ಧೋರಣೆ ಇರುತ್ತದೆ. [ ಟೈಮ್ಸ್ ಆಫ಼್ ಲಂಡನ್, ನವೆಂಬರ್ ೧೨, ೨೦೦೧]

೨೦. ಅರ್ಧಕ್ಕರ್ಧ ಪ್ರಮಾಣದ ಲಸಿಕೆಗಳು ಬ್ರಿಟನ್‍ನಿಂದ ಎಲ್ಲೆಡೆಗೆ ರಫ಼್ತಾಗುವುದರಿಂದ ಕಲುಷಿತ ಲಸಿಕೆಗಳ ಅಡ್ಡಪರಿಣಾಮಗಳ ಅಪಾಯವನ್ನು ಕಡಿಮೆ ಮಾಡಲು ಲಸಿಕೆಯನ್ನು ಹಾಕಿಸದಿರುವುದು ಒಳ್ಳೆಯದು.

 ಕೊನೆಗೆ ಒಂದು ಶರಾ:

ಲಸಿಕೆಗಳು ಕಾಡತೂಸುಗಳಿಗಿಂತ ಹೆಚ್ಚು ಜನರನ್ನು ಕೊಲ್ಲುತ್ತವೆ (Vaccination would kill a lot more people than firearms)[ನ್ಯಾಷನಲ್ ಸೇಫ಼್ಟಿ ಕೌನ್ಸಿಲ್, ೧೯೯೬]

ಸಿ.ಡಿ.ಸಿ. --> ಸೆಂಟರ್ ಫ಼ಾರ್ ಡಿಸೀಸ್ ಕಂಟ್ರೋಲ್. ಇದು ಅಮೇರಿಕಾ ಸರ್ಕಾರದ ಅಂಗ.

ಎಫ಼್.ಡಿ.ಎ --> ಫ಼ುಡ್ ಅಂಡ್ ಡಿಸೀಸ್ ಅಡ್ಮಿನಿಸ್ಟ್ರೇಷನ್. ಇದೂ ಸಹ ಅಮೇರಿಕಾ ಸರ್ಕಾರದ ಅಂಗ.