ಸಿನಿಮಾದಕಿ ಸಿಗ್ತಾಳಾ? (ಸಂಚಿಕೆ ೨ )
ಸಮಯ ರಾತ್ರಿ 9.೩೦ ಆಗಿತ್ತು.ತುಮಕೂರಿನ ಹತ್ತಿರ ಧಾಬಾ ಒಂದರಲ್ಲಿ ಸ್ವಲ್ಪ ಊಟ ಮಾಡಿ ಮತ್ತೆ ಎಲ್ಲಾರು ಗಾಡಿ ಹತ್ತಿದರು.ಋತು ಮಂಜಿ ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಗುಸುಗುಸು ಮಾತುಗಳಾಡುತ್ತಿದ್ದರು.ಮ್ಯಾನೇಜರ್ ಹೇಳಿದ ಮಲಗಿ ಬೆಳಿಗ್ಗೆ ಬೇಗ ಶಾಟ್ ಗೆ ರೆಡಿ ಆಗಬೇಕು.ಇವನಜ್ಜಿ ಬದ್ಕೊಂತಾನೆ ಇರ್ತಾನೆ ಅನ್ನುತ್ತ ಮಂಜಿ ಋತುಗೆ ಮಲಗೋಣ ಕಣೆ ಗುಡ್ ನೈಟ್ ಅಂದು ಇಬ್ಬರು ಒಂದೇ ಹೊದಿಗೆಯನ್ನು ಹೊದ್ದುಕೊಂಡು ಗುಬ್ಬಿಮರಿಗಳ ತರಹ ಮಲಗಿದರು.ಬೆಂಗಳೂರಿನಿಂದ ಗುಲಬರ್ಗಾಗೆ ೧೨ ಗಂಟೆಯ ದೂರ.ಈ ದೂರವನ್ನು ಆದಾಗಲೇ ರಾತ್ರಿ ಆಲಂಗಿಸಿ ಬಿಳ್ಕೊಡುಗೆ ಕೊಟ್ಟಾಗಿತ್ತು.ಸಿಂಧನೂರು ಸುರಪುರ ದಾಟಿ ಗಾಡಿ ಗುಲ್ಬರ್ಗಾ ಕಡೆ ವಾಲಿತ್ತು.ನಸುಕಿನ ೫ ಗಂಟೆಯಾಗಿತ್ತು.ಜೋಮು ಹಿಡಿದ ಕಾಲುಗಳು ಋತುವನ್ನು ಎಬ್ಬಿಸಿತೋ ಅಥವಾ ತನ್ನ ಹೆಗಲ ಮೇಲೆ ಹಾಗೆ ಮಲಗಿದ್ದ ಮಂಜಿಯ ತಲೆ ಭಾರವಾಗಿತ್ತೋ ಗೊತ್ತಿಲ್ಲಾ ಕಣ್ಣಿಗೆ ಅಂಟಿಕೊಂಡಿದ್ದ ರೆಪ್ಪೆಗಳು ಆಗ ತಾನೇ ಉದಯಿಸುತ್ತಿರುವ ಸೂರ್ಯನ ಬೆಳಕಿಗೆ ಡಿಸ್ಟರ್ಬ್ ಆಗಿ ಒಂಚೂರು ಅಲ್ಲಾಡಿದವು.ಅಯ್ಯೋ ಬೆಳಗಾಯ್ತಾ ? ಅಂತ ಮನಸಲ್ಲೇ ಗೊಣಗುತ್ತ ತನ್ನ ಕೈ ಗಡಿಯಾರ ನೋಡ್ತಾಳೆ ಇನ್ನು ೫ ಗಂಟೆ ಆವಾಗಲೇ ಬೆಳಕು ಹರಿತಾ ಇದೆ.ಮಂಜಿ ಏಯ್ ಮಂಜಿ ನಿನ್ನ ತಲೆ ತೆಗಿಯೀ ತುಂಬಾ ಭಾರ ಕಣೆ,ನೋಡಿಲ್ಲಿ ಬೆಳಗಾಗ್ತಾ ಇದೆ.ಏನು ಆವಾಗಲೇ ಬೆಳಗಾಯ್ತ ಹೊಗೆಲ್ಲೇ ನಾನಿನ್ನು ಮಲಗಬೇಕು ಅಂತ ಮತ್ತೆ ಮಲಗಿದಳು ಮಂಜಿ. ಸ್ಪಾಟ್ ಬಾಯ್ ಹೇಳಿದ ಅಕ್ಕಯ್ಯ ಇದು ಉತ್ತರ ಕರ್ನಾಟಕ ಅಲ್ಲವೇ,ಇಲ್ಲೆಲ್ಲಾ ಹಿಂಗೆಯಾ ಬಲ್ ಬೇಗನೆ ಬೆಳಕು ಹರಿಯುತ್ತೆ ..... ಗಾಡಿ ಶೂಟಿಂಗ್ ಲೋಕೆಶನ್ ಅಂದರೆ ಗುಲ್ಬರ್ಗ ನಗರದ ನೂತನ ವಿಧ್ಯಾಲಯದ ಮೈದಾನದ ಕಡೆ ಮುಖ ಮಾಡಿತು.ಚಾ ರೀ ಚಾ ,ಚಾ ಬೇಕೇನ್ರಿ,ಏಳ್ರಿ ಮೇಡಂ ಅವ್ರೆ ಚಾ ತಗೋರಿ . ಮುಂಜಾನಿ ಆಗ್ಯದ್ರಿ. ಟೀ ಮಾರೋ ಹುಡುಗ ಗಾಡಿ ಏರಿ ಎಲ್ಲರಿಗೂ ಟೀ ಕೊಡೋಕೆ ಎಬ್ಬಿಸ್ತಾ ಇದ್ದ.ಋತು ಹಾಗು ಮಂಜಿ ಈ ಚಾ ಅಂದ್ರ ಏನು ಅಂತ ಒಬ್ಬರ ಮುಖ ಒಬ್ಬರು ನೋಡ್ಕೊಂತಾನೆ ಎದ್ದರು.ಆಮೇಲೆ ಗೊತ್ತಾಗಿದ್ದು ಚಾ ಅಂದ್ರೆ ಟೀ ಅಂತ.ಬೆಳಿಗ್ಗೆ ಏಳು ಗಂಟೆಯ ಸಮಯ ,ಗಾಡಿ ಗುಲ್ಬರ್ಗ ನಗರದೊಳಗೆ ಪ್ರವೇಶ ಮಾಡುತಿತ್ತು.ಮೊದಲ ಬಾರಿಗೆ ಗುಲ್ಬರ್ಗ ನೋಡುತಿದ್ದ ಋತು ಕೈಯಲ್ಲಿ ಟೀ ಹಿಡಿದಿದನ್ನ ಮರೆತು ಗುಲ್ಬರ್ಗ ಹೆಂಗಿದೆ ಅಂತ ಕೂತುಹಲದಿಂದ ನೋಡ್ತಾ ಇದಾಳೆ.ಆದರೆ ಇದೇನು ಗೊತ್ತಿರದ ಬಿಸಿಬಿಸಿಯಾದ ಟೀ ಅವಳು ಸಿಪ್ ಮಾಡಿದ್ದೆ ತಡ ಅವಳ ತುಟಿಯನ್ನ ಮೆಲ್ಲಗೆ ಸುಟ್ಟುಬಿಟ್ಟಿತು.ಆಹ್ ಎಂದಿದ್ದೆ ತಡ ಪಕ್ಕದಲ್ಲಿದ್ದ ಮಂಜಿಯ ಮೇಲೆ ಬಿಸಿಯಾದ ಟೀ ಸರ್ರನೆ ಸುರಿಯಿತು.ಸತ್ತೆ....ಅನ್ನುತಾಳೆ ಎದ್ದ ಮಂಜಿಯ ಆಕ್ರಂದನ ಕೇಳಿ ಗಾಡಿ ಡ್ರೈವರ್ ಸಡ್ದನ್ ಆಗಿ ಬ್ರೇಕ್ ಹಾಕಿದ.ಹಿಂದೆ ಬರ್ತಿದ್ದ ಪಲ್ಸರ್ ಗಾಡಿಯಲ್ಲಿದ್ದ ಹುಡುಗ ಶೂಟಿಂಗ ಅವರ ಗಾಡಿಗೆ ಧಡಾರನೆ ಗುದ್ದಿದ. ಒಹೊಹೊಹ್ ಕ್ಷಣ ಮಾತ್ರದಲ್ಲಿ ಎಲ್ಲ ಅಲ್ಲೋಲ ಕಲ್ಲೋಲ ಆಗೋಯ್ತು.ಪಲ್ಸರ್ ಹುಡುಗ ಗಾಡಿ ಡ್ರೈವರ್ ಜೊತೆ ಗಲಾಟೆ ಶುರು ಇಟ್ಕೊಂಡ.ಲೇ ಯಾರಲೇ ನಿನಗ ಗಾಡಿ ನಡಸ್ಲಿಕ್ಕಿ ಹೇಳಿಕೊಟ್ಟವ ಹಿಂಗಾ ಬ್ರೇಕ್ ಹಾಕೋದು ? ನಿ...ನ ಅಂತ.ಎಲ್ರು ಸೇರಿ ಆಮೇಲೆ ಶೂಟಿಂಗ್ ನವರು ಅಂತ ಹೇಳಿ ಸಮಾಧಾನ ಮಾಡಿದರು.ಋತು ಮಾತ್ರ ಆ ಹುಡುಗನನ್ನೇ ದುರುಗುಟ್ತುತ ನೋಡ್ತಾ ಇದ್ದಳು.ಈ ಹುಡುಗರು ಬೈಕ್ ನ ತಮ್ಮ ಪ್ರಾಣಕ್ಕಿಂತ ಹೆಚ್ಚು ಹಚ್ಕೊತಾರೆ,ಅಲ್ಲ ಆ ಹುಡುಗಾ ತನ್ನ ಮೈಗೆ ಆಗಿರೋ ಗಾಯ ನೋಡ್ಕೊಳ್ಳದೆ ಗಾಡಿ ಡ್ಯಾಮೇಜು ಅಂತ ದುಡ್ಡು ತಗೊಂಡ ಕಣೆ ಅಂತ ಈ ಕಡೆ ತಿರುಗಿದಳು ಇಡಿ ಫಿಲಂ ತಂಡ ಅವಳ ಮುಂದೆ ಇದೆ.ಎಲ್ಲರು ತಲಾ ಒಂದರಂತೆ ಬೈದು ಹೋದರು.ಮಂಜಿ ಕೊನೆಗೆ ತನ್ನ ಕರ್ಚಿಫ್ ಕೊಟ್ಟಳು.ಇದ್ಯಾಕೆ ಮಂಜಿ ಅಂದರೆ ಥೂ ಒರೆಸುಕೊಳ್ಳೆ ಅಂದಳು ಮಂಜಿ ಮುಸಿ ಮುಸಿ ನಗುತ್ತಾ..
ಹೀಗೆ ಗುಲ್ಬರ್ಗಾ ಬಂದ ದಿನಾನೆ ಋತು ರಗಳೆ ಶುರು ಇಟ್ಕೊಂದಿದ್ಲು.ಶೂಟಿಂಗ್ ತಂಡದಲ್ಲಿ ಸುಮಾರು ಮೂವತ್ತು ಜನ ಇದ್ದರು.ಗುಲ್ಬರ್ಗದಲ್ಲಿ ೨-೩ ಲೋಕೇಶನ್ ಅಲ್ಲಿ ಸಾಂಗ್ ಶೂಟಿಂಗ್ ಮಾಡೋ ಪ್ಲಾನ್ ಇತ್ತು.ಮೊದಲು ಎಲ್ಲರು ಗುಲ್ಬರ್ಗಾದ ಪ್ರಸಿದ್ಧವಾದ ಎನ್.ವಿ. ಮೈದಾನದಲ್ಲಿ ಬಿಡಾರ ಹೂಡಬೇಕಿತ್ತು.ಏಕೆಂದರೆ ಅದು ವಿಶಾಲವಾಗಿತ್ತು ಹಾಗು ಈ ಫಿಲಂ ಗೆ ಪ್ರಚಾರ ಕೂಡ ಬೇಕಿತ್ತು.ಹೀಗಾಗಿ ನಗರದ ಮದ್ಯೆ ಇರುವ ಜಾಗನೆ ಹುಡುಕಿದರು ತಂಡದವರು.ಕಾರಣ ಕಾಲೇಜ್ ವಿದ್ಯಾರ್ಥಿಗಳು ಶೂಟಿಂಗ್ ನೋಡಲು ಬಂದೆ ಬರುತ್ತಾರೆ ಹಾಗು ಉಚಿತವಾದ ಪ್ರಚಾರ ಸಿಗುತ್ತದೆ ಎಂದು.ಹಿರೋ ಮತ್ತು ಹಿರೋಯಿನ್ ಹತ್ತು ಗಂತೆವೆರಾಗ ಬರ್ತಾರೆ ನೀವೆಲ್ಲ ನಿಮ್ಮ ಕಾಸ್ಟ್ಯುಂ ರೆಡಿ ಮಾಡ್ಕೊಳ್ಳಿ ಅಂದ ಮ್ಯಾನೇಜರ.
ಗುಲ್ಬರ್ಗ ಎನ್.ವಿ ಗ್ರೌಂಡ್ ಅಲ್ಲಿ ಶೂಟಿಂಗ್ ಅಂತ ಪತ್ರಿಕೆಯವರು ಅದಾಗಲೇ ಪ್ರಕಟಿಸಿದ್ದರು.ಹೀಗಾಗಿ ಬೆಳಿಗ್ಗೆ ಒಂಬತ್ತು ಗಂಟೆಗೆಲ್ಲ ಜನ ಜಂಗುಳಿ ಸೇರಿತ್ತು.ಋತು ಹಾಗು ಮಂಜಿ ತಮ್ಮಕಾಸ್ಟ್ಯುಂ ಹಾಕಿಕೊಂಡು ಡಾನ್ಸ್ ಮಾಸ್ಟರ್ ಹತ್ರ ಹೋದರು,ಮಾಸ್ಟರ್ ಅವರಿಗೆಲ್ಲ ಸ್ಟೆಪ್ಸ್ ಹೇಳಿಕೊಡ್ತ
ಮುಂದುವರೆಯುವುದು....
Comments
ಉ: ಸಿನಿಮಾದಕಿ ಸಿಗ್ತಾಳಾ? (ಸಂಚಿಕೆ ೨ )
In reply to ಉ: ಸಿನಿಮಾದಕಿ ಸಿಗ್ತಾಳಾ? (ಸಂಚಿಕೆ ೨ ) by makara
ಉ: ಸಿನಿಮಾದಕಿ ಸಿಗ್ತಾಳಾ? (ಸಂಚಿಕೆ ೨ )