ಸಿರಿಗನ್ನಡಂ ಗೆಲ್ಗೆ...ಸಿರಿಗನ್ನಡಂ ಬಾಳ್ಗೆ...
ಕನ್ನಡದ ಬಗ್ಗೆ ಕೆಲವು ವಿಶೇಷತೆಗಳು...ಮಿಂಚಂಚೆಯಲ್ಲಿ ಬಂದದ್ದು...ಮುಂಚೆಯೇ ಓದಿರಬಹುದು ಓದಿಲ್ಲದಿದ್ದರೆ ಒಮ್ಮೆ ಓದಿ..
೧. ಭಾರತದಲ್ಲೇ ಹಳೆಯ ಮೂರನೆ ಭಾಷೆ ಕನ್ನಡ ( ಸಂಸ್ಕ್ರುತ ಹಾಗು ತಮಿಳಿನ ನಂತರ)
೨. ಕನ್ನಡ ೨೦೦೦ ವರ್ಷಗಳಷ್ಟು ಹಳೆಯದು.
೩. ಕನ್ನಡ ಭಾಷೆ ೯೯.೯೯ ಪ್ರತಿಶತ ಸರಿಯಾದ ಭಾಷೆ
೪. ಕನ್ನಡಕ್ಕೆ ಮಾತ್ರ ೭ ಜ್ನಾನಪೀಠ ಪ್ರಶಸ್ತಿ ಬಂದಿದೆ. (ಹಿಂದಿ - ೬, ತೆಲುಗು - ೨, ಮಲಯಾಳ - ೩, ತಮಿಳು - ೨)
೫. ಶ್ರೀ ವಿನೋಬಾ ಭಾವೆಯವರು ಕನ್ನಡವನ್ನು ಲಿಪಿಗಳ ರಾಣಿ ಎಂದು ಕರೆದಿದ್ದಾರೆ.
೬. ಅಂತರ್ರಾಷ್ಟ್ರೀಯ ಭಾಷೆಯಾದ ಆಂಗ್ಲ ಭಾಷೆಗು ಕೂಡ ಸ್ವಂತ ಲಿಪಿಯಿಲ್ಲ..ರೋಮನ್ ಆಧಾರಿತವಾಗಿದೆ.
೭. ನಮ್ಮ ರಾಷ್ಟ್ರೀಯ ಭಾಷೆಯಾದ ಹಿಂದಿ ಕೂಡ
ದೇವನಾಗರಿ ಲಿಪಿಯ ಆಧಾರಿತವಾದದು.
೮. ತಮಿಳು ಭಾಷೆಗೆ ಲಿಪಿಯಿದ್ದರು ಅದು ಸ್ವಾಭಾವಿಕವಾಗಿ ಸರಿಯಿಲ್ಲ..ಏಕೆಂದರೆ ಒಂದೇ ತೆರನಾದ ಅಕ್ಷರಗಳು ಬಹಳಷ್ಟು ಉಚ್ಚಾರಣೆಗೆ ಬಳಸುತ್ತಾರೆ.
೯. ಅಮೋಘವರ್ಷ ನ್ರುಪತುಂಗ "ಕವಿರಾಜಮಾರ್ಗ..ಕಾವೇರಿಯಿಂದ ಗೋದಾವರಿವರೆಗಿರ್ಪ" ಬರೆದಾಗ ಆಂಗ್ಲ ಹಾಗೂ ಹಿಂದಿಯ ಉಗಮವೇ ಆಗಿರಲಿಲ್ಲ..
ಇಷ್ಟೆಲ್ಲಾ ವಿಶೇಷತೆಯುಳ್ಳ ಕನ್ನಡವನ್ನು ಉಪಯೋಗಿಸುವ ನಾವೇ ಧನ್ಯರು...
ಮುಂಗಡವಾಗಿ ಕನ್ನಡರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು..