ಸೋತೆ ಎಂದು ಕೈ ಚೆಲ್ಲುವ ಕ್ಷಣದ ಮುಂಚಿನ ಪ್ರಯತ್ನ ಖಂಡಿತಾ ಕೈಗೂಡುತ್ತದೆ

ಸೋತೆ ಎಂದು ಕೈ ಚೆಲ್ಲುವ ಕ್ಷಣದ ಮುಂಚಿನ ಪ್ರಯತ್ನ ಖಂಡಿತಾ ಕೈಗೂಡುತ್ತದೆ

ಬರಹ

ಇದು ನನ್ನ ಅನುಭವ.
ಬಹುಷ: ಮರಳಿ ಯತ್ನವ ಮಾಡು ಎನ್ನುವುದೂ ಇರಬಹುದು
ಇದನ್ನ ಯಾಕೆ ಹೇಳುತಾ ಇದೀನಿ ಅಂದ್ರೆ
ಮೂರು ದಿನದಿಂದ ಹಗಲೆನ್ನದೆ ರಾತ್ರಿ ಎನ್ನದೆ ಎಸ್ ಎ ಪಿ ಇನ್ಸ್ಟಾಲೇಶನ್ ಮಾಡ್ತಾ ಇದ್ದೆ. ನಂಗೆ ಮೊದಲಿನಿಂದಲೂ ಗೊತ್ತಿಲ್ಲದೆ ಇರೋ ಅಂಥ ವಿಷಯವನ್ನು ಕಲಿಯೋದರಲ್ಲಿ ತುಂಬಾ ಅಸಕ್ತಿ. ಎಲ್ಲರೂ sap ಇನ್ಸ್ಟಾಲ್ ಮಾಡೋದು ತುಂಬಾ ಕಷ್ಟ ಅಂತಿದ್ದರು. ಹಾಗಾಗಿ ಒಮ್ಮೆ ಪ್ರಯತ್ನಿಸಿ ನೋಡೋಣಾ ಅಂತ ಶುರು ಮಾಡಿದೆ
ಒಮ್ಮೆ oracle ಇನ್ಸ್ಶ್ತಾಲೇಷನ್ wrong ಅಯ್ತು ಅದನ್ನು ಸರಿ ಮಾಡೋ ಅಷ್ಟರಲ್ಲಿ j2se ಕರಪ್ಟ್ ಆಯ್ತು. ಮತ್ತೆ ಅದನ್ನು ಡೌನ್ ಲೋಡ್ ಮಾಡಿಕೊಂಡು sap ಇನ್ಸ್ಟಾಲೇಷನ್ ಶುರು ಮಾಡ್ತಿದ್ದ ಹಾಗೆ ಮೆಮೊರಿ ಎರರ್. ವರ್ಚುಯಲ್ ಮೆಮೊರ್ ಜಾಸ್ತಿ ಮಾಡಿ ಮತ್ತೆ ಪ್ರಯತ್ನಿಸಿದೆ ಮತ್ತೆ ಹೋಸ್ಟ್ ನೇಮ್ ಎರರ್ ಕಾಣಿಸಿಕೊಂಡಿತು
ಅದನ್ನೆಲ್ಲಾ ಸರಿ ಮಾಡಿ sap ಒಂದು ಲೆವೆಲ್ಲಿಗೆ ಬಂತು ಅಂತಿದ್ದ ಹಾಗೆ ಇನ್ಸ್ಟಾಲೇಶನ್ ಇಂಡಿಕೇಟರ್ ಮುಂದೆ ಹೋಗೋದೆ ಇಲ್ಲ ಅಂತ ನಿಂತು ಬಿಟ್ಟಿತು.
ರೆಸ್ಟಾರ್ಟ್ ಮಾಡಿದರೂ ಇಲ್ಲ . ಏನ್ಮಾಡಿದರೂ ಇಲ್ಲ
ಏನು ಮಾಡೋದು ಕೊನೆಗೆ sap id ಬೇರೆ ಕೊಟ್ಟುನೋಡೋಣ ಅಂತ ಬೇರೆ ಹೆಸರು ಕೊಟ್ಟೆ ಕೊನೆಗೆ ಇಂಡಿಕೇಟರ್ ಮುಂದೆ ಹೋಯ್ತು (ಮುಂಚಿನ ಇನ್ಸ್ಟಾಲೇಷನನಲ್ಲಿ ಕೊಟ್ಟ ಐಡಿಯನ್ನೇ ಕೊಟ್ಟ್ರೆ ಅದು ಸ್ಟಾಪ್ ಆಗ್ತಿತ್ತು. ಯಾಕೆ ಅನ್ನೋ ಕಾರಣ ಆಮೇಲೆ ನೋಡೋಣ ಅನ್ಕೊಂಡು ಸುಮ್ಮ್ಮನಾದೆ).
ಸೆಂಟ್ರಲ್ ಇನ್ಸ್ಟಾನ್ಸ್ ಇನ್ಸ್ಟಾಲೇಷನ್ ಆಯ್ತು, ಇನ್ನು database ಇನ್ಸ್ಟಾಲೇಶನ ಆಗ್ತಿದೆ ಅಂದ್ಕೊಂಡಾಗಲೆ ಮತ್ತೇನೋ ಎರರ್.
ಏನು ಮಾಡಿದರೂ ಎರರ್ ಹಾಗೆ ಬರ್ತಾ ಇತ್ತು
ಕೊನೆಗೆ ಆಯ್ತು ನನ್ನ ಕೈಲಾಗಲ್ಲ ಬಿಟ್ಟು ಬಿಡೋಣ ಅಂದ್ಕೊಂಡೆ. ಸರಿ ಆಗಿದ್ದು ಆಗಲಿ ಮತ್ತೊಮ್ಮೆ ಲಾಗ್ ಫೈಲ್ ನೋಡೋಣ ಅಂತ ನೋಡಿದೆ
ಏನೊ ತಲೆಗೆ ಹೊಳೀತು
ಸರಿ usr ಅನ್ನೋ ಫೋಲ್ಡರ್ ತೆಗೆಯಲು ಹೋದರೆ ಅದು ಲಾಕ್ ಆಗಿದೆ ಅಂತ ಗೊತ್ತಾಯ್ತು ಹ್ಯಾಗಾಯ್ತು ಗೊತ್ತಿಲ್ಲ .
ಕೊನೆಗೆ ಆಕ್ಸೆಸ್ ಕಂಟ್ರೋಲ್ಸ್ ಎಲ್ಲಾ ಡಿಸೇಬಲ್ ಮಾಡಿ ದೇವರೆ ಅಂತ ಉಸಿರು ತಗೊಂಡು ಇನ್ಸ್ಟಾಲೇಷನ್ ಕೊಟ್ಟೆ
ಸೂಪರ್
ಗೆದ್ದೆ ಅಂತಾ ಕುಣಿಯೋ ಅಷ್ಟು ಸಂತಸ ಅಯ್ತು.
ರೂಪ