ಸೋಮವಾರ, ಜೂನ್, ೧೨, ೨೦೦೬ - ಇಂದು ಫಿಫಾ ವಿಶ್ವಕಪ್ಪಿನಲ್ಲಿ ಕಾದಲಿರುವ ಪಡೆಗಳು !

ಸೋಮವಾರ, ಜೂನ್, ೧೨, ೨೦೦೬ - ಇಂದು ಫಿಫಾ ವಿಶ್ವಕಪ್ಪಿನಲ್ಲಿ ಕಾದಲಿರುವ ಪಡೆಗಳು !

ಬರಹ

ಸೋಮವಾರ, ಜೂನ್, ೧೨, ೨೦೦೬. ಇಂದಿನ ಫಿಫಾ ವಿಶ್ವ ಕಪ್ಪಿನಲ್ಲಿ ಸೆಣೆಸುವ ಪಡೆಗಳು.

೬-೩೦ ಸಾ. ಆಸ್ಟ್ರೇಲಿಯ ವಿರುದ್ಧ ಜಪಾನ್ 'ಎಫ್' ಗ್ರುಪ್ ನಲ್ಲಿ
೯-೩೦ ರಾ. ಅಮೆರಿಕ ಸಂ.ಸಂ. ವಿರುದ್ಧ ಚಿಕ್ ರೆಪಬ್ಲಿಕ್ 'ಇ' ಗ್ರುಪ್ ನಲ್ಲಿ
೧೨-೩೦ಮ.ರಾ. ಇಟಲಿ ವಿರುದ್ಧ ಘಾನ 'ಇ' ಗ್ರುಪ್ ನಲ್ಲಿ.

ಇಂದಿನ ಆಟದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ, ೧೬ ವರ್ಷಗಳ ನಂತರ, ಚೆಕ್ ಗಣರಾಜ್ಯದ ಜೊತೆಗೆ ಸೆಣೆಸಲಿದೆ.೧೯೯೦ ರಲ್ಲಿ ಫ್ಲಾರೆಂನ್ಸ್ ನಲ್ಲಿ ನಡೆದ ವಿಶ್ವ ಕಪ್ಪಿನ ಪ್ರಥಮ ದಿನದಂದು ಚೆಕ್ ಗಣರಾಜ್ಯ ೫-೧ ಗೋಲುಗಳ ಅಂತರ ದಿಂದ ಯು.ಎಸ್.ಎ ಯನ್ನು ಬಗ್ಗು ಬಡಿದಿತ್ತು.ಅಮೆರಿಕದ ಕೊಚ್ ಬ್ರೂಸ್ ಅರೇ ನಾ, ಇದರ ಬಗ್ಯೆ ಚೆನ್ನಾಗಿ ತಿಳಿದಿದ್ದಾರೆ.ಅವರ ಪ್ರಕಾರ ಅನುಭವದಿಂದ ಅಮೆರಿಕ, ಈಗ ಬುದ್ಧಿ ಕಲಿತಿದೆ.ಆದರೆ ಈಗಿನ ಚೆಕ್ ಪಡೆಯಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಾಗಿದೆ.ಫಾರ್ವರ್ಡ್ ಆಟಗಾರರಾದ ಮಿಲಾನ್ ಬರೋಸ್, ಪೊವೆಲ್ ನವೀದ್ ಆಡುವ ಸಾಧ್ಯತೆಗಳ ಬಗ್ಗೆ, ಕಾದು ನೋಡಬೇಕಾಗಿದೆ.

ವಿಶ್ವ ಕಪ್ಪಿನ, "ಗೋಲ್ಡನ್ ಶೂ" ಪ್ರಶಸ್ತಿ :

ಇದು ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪ್ರತಿನಿಧಿಸುವ ಯಾವುದೇ ತಂಡದ ಅತಿ ಹೆಚ್ಚು ಗೋಲ್ ಹೊಡೆದ ವ್ಯಕ್ತಿಗೆ ಸಲ್ಲುವ ಗೌರವ. ಮೆ.ಆಡಿಡಾಸ್ ಪ್ರಾಯೋಜಿಸಿದ, ಈ ಪ್ರಶಸ್ಥಿ ಬಹಳ ಮನ್ನಣೆ ಗಳಿಸಿದೆ. ಇದನ್ನು ಈಗಾಗಲೆ ಪಡೆದ ವ್ಯಕ್ತಿಗಳು :

೧. ಗರ್ಡ್ ಮುಲ್ಲರ್, ೨. ರೋನಾಲ್ಡೋ, ಜಸ್ಟಿನ್ ಫೋಂಟೇನಾ.

ನೆನ್ನೆ ನಡೆದ ಆಟದ ವಿವರ ಹೀಗಿದೆ.

೧.ಮೆಕ್ಸಿಕೊ ವಿರುದ್ಧ ಇರಾನ್ (೩-೧) ನಿಂದ ಗೆದ್ದು ಮುಂದುವರೆದಿದೆ.
ಗೋಲ್ ಮಾಡಿದವರು: (ಉಮರ್ ಬ್ರೇವೋ ೨೮ ನೆ .ಮಿ, ಮತ್ತು ೭೬ನೆ ಮಿ. ಝಿನ್ಹಾ ೭೯ ನೆ ಮಿನಿಟ್.: ಯಾಹ್ಯಾ ಗೋಲ್ ಮೊಹಮ್ಮದಿ ೩೬ ನೆ ಮಿನಿಟ್ ನಲ್ಲಿ)
ಇರಾನ್ ಕೊನೆಯವರೆವಿಗು ಚಿನ್ನಾಗಿ ಆಡಿತು.

೨. ಹಾಲೆಂಡ್ ವಿರುದ್ಧ ಸರ್ ಬಿಯ (೧-೦) ನಿಂದ ಸರ್ ಬಿಯವನ್ನು ಮಣಿಸಿತು.

೩. ಪೋರ್ಚುಗಲ್ ವಿರುದ್ಧ ಆಂಗೋಲ (೧-೦) ಪೋರ್ಚುಗಲ್ ತನ್ನ ಕಾಲೋನಿಯಡಿಯಲ್ಲಿದ್ದ ಆಂಗೋಲವನ್ನು ಸೋಲಿಸುವಲ್ಲಿ ಪಾತ್ರರಾದವರು ಪೌರೇಲಾ,ತಮ್ಮ ಮಿಂಚಿನ ಗೋಲ್ ಮಾಡಿ ಮತ್ತೆ ಇನ್ನೊಂದು ಗೋಲ್ ಮಾಡಲು, ಹವಣಿಸುತ್ತಿದ್ದರು. ಆದರೆ ಆಗಲಿಲ್ಲ. ಆಂಗೋಲ ೧೯೭೫ ರಲ್ಲಿ ಪೋರ್ಚುಗಲ್ ಸಂಕೋಲೆಯಿಂದ ತಪ್ಪಿಸಿಕೊಂಡು ಸ್ವತಂತ್ರ್ಯ ಪಡೆಯಿತು !

ಭಾರತ, ವಿಶ್ವ ಕಪ್ಪಿನಲ್ಲಿ ಭಾಗ ವಹಿಸದೆ ಇರಬಹುದು.ಇಡಿ ದೇಶವೇ 'ಸಾಕರ ಜ್ವರದಿಂದ' ಪೀಡಿತ ವಾಗಿದೆ. ಕೊಲ್ಕತಾ, ಕೇರಳ ಗಳಂತೆಯೇ ಬೇರೆ ರಾಜ್ಯಗಳೂ ಇದರಿಂದ ಹೊರಗೆ ಬಂದಿಲ್ಲ. ಕ್ರಿಕೆಟ್ ಸ್ವಲ್ಪ ಹಿಂದೆ ಬಿದ್ದಿರುವಂತೆ ತೋರುತ್ತಿದೆ !