ಸ್ಕೈಪ್ - ಇಂಟರ್ನೆಟ್ ನಲ್ಲಿ ದೃಶ್ಯ ಮತ್ತು ಶ್ರಾವ್ಯ ಸಂವಾದ

ಸ್ಕೈಪ್ - ಇಂಟರ್ನೆಟ್ ನಲ್ಲಿ ದೃಶ್ಯ ಮತ್ತು ಶ್ರಾವ್ಯ ಸಂವಾದ

ಬರಹ

ಸ್ಕೈಪ್ ಉಪಯೋಗಿಸಿದ್ದೀರಾ? ದೂರ ದೂರಿಗೆ ಕಡಿಮೆ ಖರ್ಚಿನಲ್ಲಿ ಫೋನಾಯಿಸಲು ಅನುವು ಮಾಡಿ ಕೊಡುವ ಒಂದು ಮೆಸೆಂಜರ್ ಸ್ಕೈಪ್.

ಖರ್ಚಿಲ್ಲದೆ ಗೆಳೆಯರೊಂದಿಗೆ ಹರಟಲು, ವಿಡಿಯೋ ಮತ್ತು ಆಡಿಯೋ ಕಾನ್ಫರೆಂನ್ಸಿಂಗ್ ಕೂಡ ಮಾಡಬಹುದು. ಕೆಳಗಿನ ಚಿತ್ರ ಸ್ಕೈಪ್ ನ ಲಿನಕ್ಸ್ ಆವೃತ್ತಿಯದು. ಅದರಲ್ಲಿ ವಿಡಿಯೋ ಕ್ಯಾಮರ ಕೂಡ ಕೆಲಸ ಮಾಡ್ತಿದೆ. ಯಾವುದೇ ತಲೆ ನೋವಿಲ್ಲದೆ ತಂತಾನೆ ಎಲ್ಲಾ ಕಾರ್ಯಗಳನ್ನ ನಿರ್ವಹಿಸ್ತಿದೆ. ಸೂಪರ್ ಅಲ್ವಾ?

ಇದೇ ರೀತಿ ಲಿನಕ್ಸ್ ನಲ್ಲಿ ಎಕಿಗ (ekiga) ಅನ್ನೋ ಮತ್ತೊಂದು ತಂತ್ರಾಂಶವನ್ನ ಕೂಡ ಕೆದಕಿ ನೋಡಿ. VoIP ಬಗ್ಗೆ ಕೊಂಚ ಅರಿವು ನಿಮಗಾದೀತು. ತುಂಬಾ ಸುಲಭವಾಗಿ ಹೊಸದನ್ನ ಕೆದಕಿ ಕಲಿತು ಎಲ್ಲರಿಗೂ ಕಲಿಸಿ.

ಯುಗಾದಿ ಹಬ್ಬದ ಶುಭಾಶಯಗಳೊಂದಿಗೆ,

ನಿಮ್ಮ, ಓಂ ಶಿವಪ್ರಕಾಶ;