ಸ್ಟೇಟಸ್ ಕತೆಗಳು (ಭಾಗ ೧೦೧೮)- ಪ್ರಶ್ನೆ

ಸ್ಟೇಟಸ್ ಕತೆಗಳು (ಭಾಗ ೧೦೧೮)- ಪ್ರಶ್ನೆ

ಅವಳು ಬದುಕನ್ನ ಪ್ರಶ್ನಿಸುತ್ತಿದ್ದಾಳೆ. ಹಲವು ಸಮಯದಿಂದ ಪ್ರಶ್ನಿಸುತ್ತಿದ್ದರೂ ಕೂಡ ಬದುಕು ಅದಕ್ಕೆ ಸಮಂಜಸವಾದ ಉತ್ತರವನ್ನು ನೀಡುತ್ತಿಲ್ಲ. ಅವಳ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಾನೆ ಇದೆ. ಹುಟ್ಟಿನಿಂದ ಇವತ್ತಿನವರೆಗೂ ಕೂಡ ಬದುಕಲ್ಲೇನು ಬದಲಾವಣೆ ಕಾಣುತ್ತಾನೆ ಇಲ್ಲ. ಸಮಸ್ಯೆಗಳ ಪಟ್ಟಿ ದೊಡ್ಡದಾಗುತ್ತಿದೆ ವಿನಃ ಅದು ಮಾಯವಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ತಂದೆಯ ಆರೋಗ್ಯ ತಪ್ಪಿದಾಗ ತಾಯಿ ಮನೆ ನಡೆಸ್ತಾರೆ ಅಂತ ಅಂದುಕೊಂಡರೆ ತಾಯಿಯ ಆರೋಗ್ಯವು ಹದಗೆಟ್ಟಿತು. ಜೊತೆಗಿದ್ದ ಸಂಬಂಧಿಕರು ಅಪರಿಚಿತರಂತೆ ವರ್ತಿಸುತ್ತಿದ್ದಾರೆ. ಆ ದಿನವನ್ನು ದಾಟಬೇಕಾದರೆ ಸಾಲ ಒಂದೇ ದಾರಿಯಾಗಿಬಿಟ್ಟಿದೆ. ಈಗೀಗ ಯಾವುದೇ ಒಂದು ಬ್ಯಾಂಕಿನಿಂದ ನೋಟಿಸ್ ಗಳು ಮನೆ ತಲುಪುತ್ತಿವೆ .ಓದಿ ವಿದ್ಯೆ ಸಂಪಾದಿಸಿ ಕೆಲಸವೊಂದು ಹುಡುಕೋಣವೆಂದರೆ ಮನೆಯ ಪರಿಸ್ಥಿತಿ ಒಪ್ಪಿಗೆ ಕೊಡುತ್ತಿಲ್ಲ. ಅವಳ ತಲೆಯ ಮೇಲಿನ ಜವಾಬ್ದಾರಿಯ ಭಾರಗಳು ಹೆಚ್ಚಾಗಿ ನಡೆಯೋಕ್ಕಾಗದ ಪರಿಸ್ಥಿತಿಗೆ ತಲುಪಿದ್ದಾಳೆ. ಅವಳು ಭಗವಂತನನ್ನ ಪ್ರಶ್ನಿಸುತ್ತಿದ್ದಾಳೆ, ನಾನು ಮಾಡಿರುವ ತಪ್ಪೇನು? ಯಾವ ಕಾರಣದಿಂದ ಕಷ್ಟಗಳನ್ನ ಹೆಚ್ಚು ಹೆಚ್ಚು ಕೊಡುತ್ತಿದ್ದೀಯಾ? ಒಂದು ದಿನವಾದರೂ ಸ್ವಲ್ಪ ನೆಮ್ಮದಿಯಲ್ಲಿ ಉಸಿರಾಟವನ್ನಾಡುವುದಕ್ಕಾದರೂ  ಅವಕಾಶ ಕೊಡು ಎಂದು ಬೇಡುತ್ತಿದ್ದಾಳೆ. ಭಗವಂತ ಉತ್ತರ ನೀಡದೆ ಮೌನವಾಗಿ ಬಿಟ್ಟಿದ್ದಾನೆ. ಬದುಕು ಕೂಡ ಆಕೆಗೆ ಉತ್ತರವನ್ನು ನೀಡುತ್ತಿಲ್ಲ. ಪ್ರಶ್ನೆಗಳನ್ನಷ್ಟೇ ದಾಟಿಸುತ್ತಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ