ಸ್ಟೇಟಸ್ ಕತೆಗಳು (ಭಾಗ ೧೦೬೬)- ಸಿಟ್ಟು

ಸ್ಟೇಟಸ್ ಕತೆಗಳು (ಭಾಗ ೧೦೬೬)- ಸಿಟ್ಟು

ಅವತ್ತು ಶಾಲೆಯಲ್ಲಿ ನನ್ನ ಬ್ಯಾಗ್ ಅನ್ನು ನೀನು‌ ಹಿಡಿದೆಳೆದದ್ದು ಯಾಕೆ? ಆ ಕಾರಣ ನಿನ್ನ ಮೇಲೆ‌ ನನಗೆ ಕೋಪ , ಇದ್ಯಾವತ್ತೂ ಕಡಿಮೆ‌ ಆಗೋದಿಲ್ಲ. ಹೀಗೆ ಇನ್ನೂ ಸಿಟ್ಟು ಹೊತ್ತಿರುವ ಶೀಲಾ ಆಗಾಗ ಭೇಟಿಯಾಗುತ್ತಾಳೆ ಭಾರತಿಯನ್ನು.  ಅಲ್ಲಿ‌ ಕೆಲಸಗಳ ಬಗ್ಗೆ ಮಾತುಕತೆ ನಡೆಯುತ್ತದೆ ಹೊರತು ವೈಯಕ್ತಿಕ ಬದುಕಿನ‌ ಬಗ್ಗೆ ಒಂದಿನಿತೂ ಕುಶಲೋಪರಿ ಇಲ್ಲ. ಭಾರತಿ ಆಗಾಗ ಆಕೆಯನ್ನ ಮಾತನ್ನಾಡಿಸುವುದ್ದಕ್ಕೆ ಪ್ರಯತ್ನ ಪಟ್ಟರೂ ಕೂಡಾ ಶೀಲ ಕೋಪ‌ ಕಡಿಮೆ‌ ಮಾಡಿಕೊಂಡಿಲ್ಲ. ಇಲ್ಲಿರುವ ವಿಚಿತ್ರ ಏನು ಗೊತ್ತಾ ಇಬ್ಬರಿಗೂ ವಯಸ್ಸು 45 ದಾಟಿದೆ. ಒಬ್ಬರ ಮನಸ್ಸಲ್ಲಿ ಆ ಕೋಪದ ಬಗ್ಗೆ ಯೋಚನೆಯೂ ಇಲ್ಲದೆ ಮಾತುಕತೆಗೆ ಇಳಿಯೋದ್ದಕ್ಕೆ ಪ್ರಯತ್ನ, ಇನ್ನೊಬ್ಬರೂ ಇನ್ನೂ ಕೂಡ ಶಾಲೆಯ ಕತೆಯನ್ನಿಟ್ಟುಕೊಂಡು ದ್ವೇಷ ಸಾಧಿಸುತ್ತಿದ್ದಾರೆ. ಬದುಕನ್ನು ಪ್ರೀತಿಸುವ ಶುಭ ಘಳಿಗೆಯಲ್ಲಿ ದ್ವೇಷ ತೊರೆದು ಪ್ರೀತಿಸುವ ಮನಸ್ಸು ಮೂಡಲಿ ಅನ್ನುವುದ್ದಷ್ಟೇ ಆಸೆ.... ಹೀಗೂ ಇದೆ   ಬದುಕಿನ‌ ಕತೆಗಳು... ವಿಚಿತ್ರ ಅಲ್ವಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ