ಸ್ಟೇಟಸ್ ಕತೆಗಳು (ಭಾಗ ೧೧೨೬)- ಪಾತ್ರೆಗಳು
ನಿನಗೆ ಹೇಳ್ತಾ ಇರೋದು, ನೀನು ಯಾವಾಗ ಅರ್ಥ ಮಾಡ್ಕೋತಿಯಾ? ಹಲವು ಸಮಯದಿಂದ ನಮ್ಮ ಜೊತೆಗೆ ಬದುಕ್ತಾ ಇದ್ರೂ ಕೂಡ ನಮ್ಮ ಒಂದು ಅಂಶವನ್ನು ನಿನ್ನೊಳಗೆ ಅಳವಡಿಸಿಕೊಳ್ಳದೆ ಇರುವುದನ್ನ ಕಂಡು ತುಂಬಾ ನೋವು ಅನ್ನಿಸ್ತಾ ಇದೆ. ಹೀಗೆ ನಮ್ಮ ಅಡುಗೆ ಮನೆಯ ಪಾತ್ರೆಗಳು ನನ್ನನ್ನು ನೋಡಿ ಮುಖಕ್ಕೆ ಉಗಿಯುತ್ತಿವೆಯೋ ಅನ್ನಿಸ್ತಾ ಇತ್ತು." ಅಲ್ಲೋ ಮಾರಾಯಾ, ನಾವು ದಿನವಾದರೆ ಸಾಕು ಒಂದೊಂದು ತರಹದ ಅಡುಗೆಗಳನ್ನು ತಯಾರಿಸ್ತಾನೆ ಇರುತ್ತೇವೆ. ನಿಮ್ಮ ಹೊಟ್ಟೆ ತುಂಬುವುದಕ್ಕೆ ಅಂತ ದುಡಿತಾನೆ ಇರುತ್ತೇವೆ. ಒಂದು ದಿನವೂ ಹೇಗಿದೆ ಅದರ ರುಚಿ ಏನು? ರುಚಿ ಸವಿಬೇಕು ಅಂತ ಯೋಚನೆಯೂ ಮಾಡಿಲ್ಲ. ನಾವು ಎಲ್ಲಾ ವಸ್ತುವಿನ ರುಚಿ ನೋಡುವುದಕ್ಕೆ ಆರಂಭವಾಗಿದ್ದಿದ್ದರೆ ನಿನಗೆ ಯಾವುದು ಸಿಗತ್ತಾನೂ ಇರಲಿಲ್ಲ. ಹಾಗಾಗಿ ಅರ್ಥ ಮಾಡ್ಕೊ ನಮ್ಮ ಕೆಲಸವೇನೋ ಅದನ್ನು ಶ್ರದ್ಧೆಯಿಂದ ಮಾಡಬೇಕು. ನಮಗೆ ಸಂಬಂಧವಿಲ್ಲದನ್ನು ಮಾಡಿ ನಮ್ಮದೇ ಅಧಿಪತ್ಯ ಸಾಧಿಸುವುದಕ್ಕೆ ಹೊರಟರೆ ಮಾಡುವ ಕೆಲಸ ತುದಿ ತಲುಪುವುದಿಲ್ಲ. ನಾವು ಅರ್ಥ ಮಾಡಿಕೊಂಡಿದ್ದೇವೆ ನೀನು ಅರ್ಥ ಮಾಡ್ಕೊ. ನಿನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡು ನಿನಗೆ ಸಂಬಂಧವಿಲ್ಲದ ಕಡೆಗೆ ತಲೆ ತೋರಿಸಿ ದಾರಿ ತಪ್ಪಿ ಅಲೆದಾಡಬೇಡ"
ಪಾತ್ರೆಗಳು ಮೌನವಾದವು ,ದಿನವು ಅವುಗಳ ನಡುವೆ ಬದುಕಿದ್ದವನಿಗೆ ಪಾತ್ರೆಗಳು ಪಾಠ ಕಲಿಸುತ್ತವೆ ಅಂತ ಅಂದುಕೊಂಡಿರಲಿಲ್ಲ. ಪಾತ್ರೆಗಳ ಪಾಠವನ್ನು ಮನಸ್ಸಿನೊಳಗಿಟ್ಟುಕೊಂಡು ಆ ದಿನ ನಿದ್ದೆ ಹೋದೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ