ಸ್ಟೇಟಸ್ ಕತೆಗಳು (ಭಾಗ ೬೫೧) - ಕಷ್ಟ ಸುಖ

ಸ್ಟೇಟಸ್ ಕತೆಗಳು (ಭಾಗ ೬೫೧) - ಕಷ್ಟ ಸುಖ

ತರಗತಿಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರು ವಿದ್ಯಾರ್ಥಿಗಳಿಗೂ ಒಂದಷ್ಟು ಚಟುವಟಿಕೆಗಳಲ್ಲಿ ನೀಡುತ್ತಾರೆ, ಆಗ ತರಗತಿಯಲ್ಲಿ ಚುರುಕಾಗಿರುವ ಎಲ್ಲದರಲ್ಲೂ ತನ್ನನ್ನು ತೊಡಗಿಸಿಕೊಳ್ಳುವ ವಿದ್ಯಾರ್ಥಿಯ ಹೆಸರು ಶಿಕ್ಷಕರ ಬಾಯಲ್ಲಿ ನಲಿದಾಡುತ್ತಿರುತ್ತದೆ . ಅದಲ್ಲದೆ ಎಲ್ಲರ ಹೆಸರನ್ನ ಅವರಿಂದ ಹೇಳೋಕ್ಕಾಗದೆ ಇರೋ ಕಾರಣ ಗೊತ್ತಿರುವ ನಾಲ್ಕು ಹೆಸರುಗಳನ್ನು ಮತ್ತೆ ಮತ್ತೆ ಪ್ರಯೋಗಿಸುತ್ತಾರೆ. ಎಲ್ಲಾ ಕೆಲಸವನ್ನ ಅವರ ಬಳಿಯಲ್ಲಿ ಮಾಡಿಸ್ತಾ ಹೋಗ್ತಾರೆ. ಹೀಗೆಯೇ ದೇವರೂ ಕೂಡಾ ಕಷ್ಟಗಳನ್ನು ಕೊಡುವಾಗ ತನಗೆ ತಿಳಿದ ಒಂದಷ್ಟು ಜನರಿಗೆ ಕೊಡುತ್ತಾ ಹೋಗುತ್ತಾರೆ. ಮತ್ತೆ ಅವರ ಬಳಿಯಿಂದ ತಪ್ಪಿಸಿ ಯಾರು ಸುಖದಿಂದ ಇರ್ತಾರಲ್ಲ ಅವರ ಬಳಿಗೆ ಕಷ್ಟ ತಲುಪುದೆ ಇಲ್ಲ. ಮತ್ತೆ ಮತ್ತೆ ಹುಡುಕಿ ಹುಡುಕಿ ಕಷ್ಟಗಳನ್ನ ಇವರ ಬಳಿ ತಂದು ಸುರಿತಾರೆ. ಒಂದಷ್ಟು ಜನರ ಪಟ್ಟಿ ಮಾಡಿ ಒಳಿತು ಅವರ ಬಳಿಯೇ ಓಡಾಡುತ್ತಿರುತ್ತದೆ. ಒಂದು ಸಲ ಹೋಗಿ ಭಗವಂತನ ಲೆಡ್ಜರ್ ನಲ್ಲಿ ಒಂದಷ್ಟು ಹೆಸರುಗಳನ್ನ ತಿದ್ದಿ ಮತ್ತೆ ಆ ಹೆಸರುಗಳು ಸದ್ಯಕ್ಕೆ ಏನು ಮಾಡ್ತಾ ಇದ್ದಾವೆ ಅಂತ ತಿಳಿಸಿ ಬರಬೇಕು ಅಂದುಕೊಂಡಿದ್ದೇನೆ. ಭಗವಂತ, ಪ್ರತಿಯೊಂದು ಹಾಗೆ ಕಷ್ಟ ಸುಖ ಬಂದವರಿಗೆ ಬರ್ತಾನೆ ಹೋಗ್ತಾ ಇರುತ್ತೆ. ಹಾಗಾಗಿ ಈ ಭಗವಂತನ ಬಳಿಗೆ ಇಲ್ಲಿಂದಲೇ ದೂರವಾಣಿ ಕರೆ ಮಾಡುವ ಯಾವ ಅವಕಾಶವೂ ಇಲ್ಲ.ನೇರವಾಗಿ ಅಲ್ಲಿ ಹೋಗಬೇಕು. ನನಗಂತೂ ದಾರಿ ಗೊತ್ತಾಗ್ತಾ ಇಲ್ಲ ಯಾವುದಾದರೂ ಅದ್ಭುತವಾದ ವಾಹನ ಇದೆಯೋ ಗೊತ್ತಿಲ್ಲ ಒಂದು ಸಲ ಹೋಗಿ ಅವರ ಪುಸ್ತಕದಲ್ಲಿರುವ ಒಂದಷ್ಟು ಹೆಸರುಗಳ ಪರಿಸ್ಥಿತಿ ಗಳನ್ನು ತಿಳಿಸಿ ಸುಖ ದುಃಖಗಳನ್ನ ಬದಲಾಯಿಸಿ ಬರಬೇಕು ಅಂದುಕೊಂಡಿದ್ದೇನೆ .ನೀವು ಬರುವುದಿದ್ದರೆ ತಿಳಿಸಿ ಜೊತೆಯಾಗಿ ಹೋಗೋಣ ಸ್ವಲ್ಪ ಖರ್ಚಿನ ಹಣ ಕಡಿಮೆಯಾದರೂ ಆಗಬಹುದು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ