ಸ್ಟೇಟಸ್ ಕತೆಗಳು (ಭಾಗ ೬೫೮) - ಕೊನೆಯ ಮಾತು
ನಿಮಗೆ ನೆನ್ನೆ ನಾನು ಮಳೆ ನೀರು ನನ್ನ ಕೋಣೆಯಲ್ಲಿ ಇದ್ದಿದ್ರೆ ಒಂದಿಷ್ಟು ಕಥೆ ಹೇಳುತ್ತೇನೆ ಅಂದುಕೊಂಡಿದ್ದೆ, ಸಂಜೆ ಹೋಗಿ ನೋಡುವಾಗ ನನ್ನ ಕೋಣೆಯಲ್ಲಿ ನೀರು ಇಲ್ಲವೇ ಇಲ್ಲ. ಬರುವಾಗ ತಿಳಿಸಲಿಲ್ಲದ ಕಾರಣ ಹೋಗುವಾಗಲೂ ತಿಳಿಸಲಿಲ್ಲ. ನನ್ನ ಪ್ರಕಾರ ನೀರಿಗೆ ಹೋಗುವುದಕ್ಕೆ ಸರಿಯಾದ ದಾರಿ ಸಿಕ್ಕಿರಬಹುದು ಹಾಗಾಗಿ ಹೊರಟು ಹೋಗಿಬಿಟ್ಟಿದೆ. ಹೆದರಿಕೆ ಏನು ಗೊತ್ತಾ ಈಗ ಕೋಣೆಯಿಂದ ನೀರು ಮುಂದೊಂದಿನ ಭೂಮಿಯಿಂದ ಹೋಗಿ ಬಿಟ್ಟರೆ ಅಂತ. ಸದ್ಯಕ್ಕೆ ನಿನ್ನೆ ಆ ನೀರು ಮಾತನಾಡುತ್ತಿತ್ತು .ಈ ಮನುಷ್ಯರು ಮಳೆ ಬಂದಾಗ ಮಾತ್ರ ಅದರ ಸಂಭ್ರಮವನ್ನು ಅನುಭವಿಸ್ತಾರೆ ಮತ್ತೆ ಬೇಸಿಗೆಕಾಲದಲ್ಲಿ ನೀರಿಲ್ಲ ಅಂತ ಬೊಬ್ಬೆ ಹೊಡಿತಾರೆ. ನೀರನ್ನು ಉಳಿಸಿಕೊಳ್ಳುವ ಯಾವ ಕೆಲಸವನ್ನು ಮಾಡ್ತಾ ಇಲ್ಲ. ಮೊದಲು ಹರಿಯೋ ನನ್ನನ್ನ ನಿಲ್ಲುವ ಹಾಗೆ ಮಾಡಿ, ನಿಂತವನನ್ನು ಇಂಗುವ ಹಾಗೆ ಮಾಡಿ. ಅದಕ್ಕೆ ಒಂದಿಷ್ಟು ಬೇಕಾದ ದಾರಿಗಳನ್ನು ಯೋಚನೆ ಮಾಡಿಕೊಳ್ಳಿ ಆಗ ನಿಮ್ಮನ್ನ ತೊರೆದು ಹೋಗುವ ಪರಿಸ್ಥಿತಿ ಬರುವುದಿಲ್ಲ .ಇಲ್ಲವಾದರೆ ನಾನು ನಿಮ್ಮೆಲ್ಲರನ್ನ ಬಿಟ್ಟು ದೂರ ಹೋಗಬೇಕಾಗಿದೆ. ಪ್ರತಿ ಸಲವು ಕೆಟ್ಟದಾದಾಗ ನನ್ನ ಹೆಸರಿಡದು ಎಲ್ಲಾ ನನ್ನದೇ ತಪ್ಪು ಅನ್ನುವ ತರ ಬಿಂಬಿಸುವುದಲ್ಲ. ಸರಿದಾರಿಯಲ್ಲಿ ಸಾಗಿದ್ರೆ ನಾನು ನಿಮ್ಮ ಜೊತೆಗೆ ಬದುಕಬಹುದು ಹೀಗಂದಿದ್ದ ನೀರು ನನ್ನ ಕೋಣೆಯನ್ನ ತೊರೆದು ಹೋಗಿದೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ