ಸ್ಟೇಟಸ್ ಕತೆಗಳು (ಭಾಗ ೬೬೨) - ಕತ್ತಲು
ಮಳೆ ತನ್ನ ಪ್ರತಾಪವನ್ನು ತೋರಿಸಿ ಆಗಷ್ಟೇ ಹೊರಟು ಹೋಗಿತ್ತು. ಆಕಾಶದಿಂದ ಒಂದಷ್ಟು ಹನಿಗಳು ನೆಲಕ್ಕೆ ಇಳಿಯುತ್ತಿದ್ದವು. ಪ್ರತಿದಿನ ರಸ್ತೆ ಬದಿಯಲ್ಲಿ ಗಿರಾಕಿಗಳಿಗೆ ಕಾಯುತ್ತಿದ್ದ ಆ ಮೂರು ಜನ ಅಂದು ಛತ್ರಿ ಹಿಡಿದುಕೊಂಡು ಬಂದು ನಿಂತಿದ್ರು. ಅವರಿಗೆ ಬೇರೆ ಬದುಕಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಪ್ರತಿದಿನ ರಾತ್ರಿ ತಮ್ಮ ಗಿರಾಕಿಗಳಿಗೋಸ್ಕರ ಕಾಯ್ತಾರೆ. ಅಲ್ಲಿಂದ ಸಿಕ್ಕ ಹಣದಿಂದ ಒಂದಷ್ಟು ಜೀವನವನ್ನು ನಿಭಾಯಿಸಿಕೊಳ್ಳುತ್ತಾರೆ .ಛತ್ರಿ ಹಿಡಿದಿದ್ದ ಅವರ ಬಳಿ ಪೊಲೀಸ್ ಗಾಡಿಯೊಂದು ಬಂದು ನಿಂತಿತು. ಪೊಲೀಸರಿಂದ ಅವರಿಗೆ ಉಪದೇಶವೋ ಬೈಗುಳವೋ ಜೀವನಾದರ್ಶದ ಮಾತುಗಳು ಗೊತ್ತಿಲ್ಲ. ಒಂದಷ್ಟು ಹೊತ್ತು ಮಾತುಕತೆಯಾಡಿ ಅವರನ್ನ ಅಲ್ಲಿಂದ ಕಳುಹಿಸಿಕೊಟ್ಟು ಪೊಲೀಸ್ ಜೀಪು ಮುಂದೆ ಹೋಯಿತು. ಆದರೆ ಅವರು ಆ ಮಾತುಗಳನ್ನು ಕೇಳಿಕೊಂಡು ನಾಲ್ಕು ಹೆಜ್ಜೆ ಹಿಂದೆ ಹೋಗಿ ಮತ್ತೆ ಗಿರಾಕಿಗಳಿಗೆ ಕಾಯತೊಡಗಿದರು. ದೇಹದ ಬೆವರು ಹರಿದರೆ ಆ ದಿನದ ಹೊಟ್ಟೆ ತುಂಬುತ್ತೆ. ಎರಡು ಗಾಡಿಗಳು ಬಂದು ಎರಡು ಜನರಿಗೆ ಆ ದಿನದ ಹೊಟ್ಟೆ ಹೊರೆಯುವುದಕ್ಕೆ ದಾರಿಯಾಯ್ತು. ಇನ್ನೊಬ್ಬರು ಆ ಮಳೆಯಲ್ಲಿ ಒದ್ದೆಯಾಗುತ್ತಾನೆ ಕಾಯ್ತಾ ನಿಂತಿದ್ರು. ಇದು ಸಮಾಜಕ್ಕೆ ಪೂರಕವಾದ ಕೆಲಸವಲ್ಲ ಅದನ್ನ ತಿಳಿಸಬೇಕಾದವರು ಯಾರು? ಅರ್ಥಮಾಡಿಕೊಳ್ಳಬೇಕಾದವರು ಯಾರು? ಅನ್ನೋದು ಇನ್ನೂ ಗೊತ್ತಾಗದೆ ಇನ್ನೂ ಪ್ರಶ್ನೆಯಾಗಿ ಉಳಿದು ಬಿಡ್ತು ಪೋಲೀಸ್ ಜಿಪಿನ ಸೈರನ್ ದೂರವಾಗುತ್ತಾ ಹೋದ ಹಾಗೆ ಇನ್ನೊಂದಷ್ಟು ಕಳ್ಳ ಚಟುವಟಿಕೆಗಳಿಗೆ ಕತ್ತಲು ದಾರಿಯಾಯಿತು. ಬದಲಾಗಬೇಕಾದ್ದು ಯಾರು ಬದಲಾಗಬೇಕಾದ್ದು ಏನು ಅನ್ನೋದು ಇನ್ನು ಗೊತ್ತಾಗದೆ ಕತ್ತಲು ಯೋಚಿಸಿತ್ತಿತ್ತು
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ