ಸ್ಟೇಟಸ್ ಕತೆಗಳು (ಭಾಗ ೬೮೮) - ಉತ್ತರ ಬೇಕು ಗೆಳೆಯಾ...

ಲೆಕ್ಕಾಚಾರದಲ್ಲಿ ತಪ್ಪಿ ಬಿಟ್ಟಿದ್ದೇವೆ ಗೆಳೆಯ, ವಯಸ್ಸು ನೂರು ಸಾವಿರ ವರ್ಷ ಬದುಕಿ ಅನ್ನೊದನ್ನ ಕೇಳ್ತಾ ಬಂದಿದ್ವಿ, ಆದರೆ ನೂರರ ಹತ್ತಿರ ತಲುಪುವುದಕ್ಕೂ ನಮ್ಮಿಂದ ಸಾಧ್ಯವಾಗ್ತಾ ಇಲ್ಲ ಅಂದಾಗ ಮನಸ್ಸು ಒಂದು ಸಲ ನಿಧಾನವಾಗಿ ಕಂಪಿಸುತ್ತದೆ. ಬದುಕು ಭಯವಾಗುತ್ತದೆ. ಸಾವು ಮಾರಾಟಕ್ಕೆ ನಿಂತುಬಿಟ್ಟಿದೆ. ಬದುಕಿಗಿಂತ ಸಾವು ಹೆಚ್ಚು ಜನರನ್ನ ತನ್ನ ಕಡೆಗೆ ಸೆಳೆಯುತ್ತಿದೆ. ಎಲ್ಲರಿಗೂ ಅದನ್ನೇ ನೋಡುವ ತನಕ ಅದಕ್ಕಾಗಿ ವಿವಿಧ ರೀತಿಯ ಪ್ರಯತ್ನಗಳು ನಡಿತಾ ಇದ್ದಾವೆ. ಖಾಲಿಯಾಗಿದ್ದ ಟಿವಿಯ ಒಳಗಡೆ ಸಾವಿನ ಸುದ್ದಿಗಳು ಹೆಚ್ಚಾದಾಗ ಕಣ್ಣುಗಳು ಅದಕ್ಕೆ ಸಂಬಂಧಪಟ್ಟ ಬೇರೆ ಬೇರೆ ರೀತಿಯ ಹಾಡುಗಳು ಕೇಳೋದಕ್ಕೆ ಆರಂಭವಾಗುತ್ತದೆ. ಕ್ರೂರ ಪ್ರಪಂಚದಲ್ಲಿ ನಾವಿದ್ದೇವೆ ಜಗತ್ತಿನ ಮುಂದೆ ತೋರಿಸಿ ಅದ್ಭುತವಾದ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದೇವೆ ಅಂತ ಹೇಳೋಕೆ ಹೊರಟಿರುವ ಮಾಧ್ಯಮ ಒಂದು ಕಡೆ ಮೌನವಾಗಿರಬೇಕಾದ ಸಾವಿನ ಮನೆಯನ್ನ ಮಾತಿಗೆಳೆಯುತ್ತಿದೆ. ತೆರೆಮರೆಯಲ್ಲಿ ಇರಬೇಕಾದ ಭಾವಗಳು ಜಗಧಗಲ ಬಿತ್ತರವಾಗುತ್ತಿದೆ. ಗೆಳೆಯ ದಾರಿ ತಪ್ಪಿದ್ದೇವೋ ತಪ್ಪಿದ ದಾರಿಯನ್ನ ನಾವು ನೋಡುತ್ತಿದ್ದೆವು ಗೊತ್ತಿಲ್ಲ. ಸರಿಯಿದ್ದ ಬದುಕಿನಲ್ಲಿ ತಪ್ಪು ನಡೆಯುತ್ತಾ ಇದ್ದರೂ ಕೂಡ ಸುಮ್ಮನೆ ನಿಂತು ನೋಡುವ ಜಾಯಮಾನ ನಮ್ಮದಾಗಿ ಬಿಟ್ಟಿದೆ. ಪ್ರಶ್ನಿಸ ಹೋದರೆ ನಮ್ಮನ್ನು ಒಂದು ಪಂಗಡಕ್ಕೆ ಸೇರಿಸುವ ವರ್ಗವು ಹುಟ್ಟಿಕೊಂಡಿದೆ. ಮೌನವಾಗಿದ್ದು ಬಿಡುವುದು ಒಳ್ಳೆಯದೋ ಪ್ರಶ್ನಿಸಿ ಯಾವುದಾದರೂ ಒಂದು ವರ್ಗದ ಹಣೆ ಪಟ್ಟಿ ಕಟ್ಟುಕೊಳ್ಳುವುದು ಒಳ್ಳೆಯದೋ ಏನೆಂದು ಗೊತ್ತಾಗುತ್ತಿಲ್ಲ ಉತ್ತರಿಸು ಗೆಳೆಯ ಉತ್ತರಿಸು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ