ಸ್ಟೇಟಸ್ ಕತೆಗಳು (ಭಾಗ ೭೬೩) - ಕರೆದವರು
ಹತ್ತಿರ ಕರೆದವನು ನೀನು, ಆತ್ಮೀಯತೆಯಿಂದ ನನಗೆ ಇರೋದ್ದಕ್ಕೆ ವ್ಯವಸ್ಥೆ ಮಾಡಿದವನು ನೀನು, ಈಗ ಯಾಕೆ ಬಂದಿದ್ದೀಯಾ ಹೊರಡು ಅಂದರೆ ಏನರ್ಥ? ನೀನು ನಿನ್ನ ಕಾರ್ಯ ಮತ್ತು ಮಾತಿನ ಮೇಲೆ ನಿಲ್ಲಬೇಕು. ಹೋ, ನಿಮಗೆ ನಾನ್ಯಾರು ಅಂತ ಗೊತ್ತಾಗಬೇಕಾ, ನನಗೆ ಹಲವು ರೂಪ ಇದೆ. ಎಲ್ಲವನ್ನು ನಿನಗೆ ತಿಳಿಸ್ತೇನೆ. ಆಗಾಗ ಹುಷಾರು ತಪ್ಪಿ ಆಸ್ಪತೆಗೆ ಓಡ್ತೀಯಲ್ಲಾ ಆ ಎಲ್ಲಾ ರೋಗವೂ ನಾನೇ, ಜೊತೆಗೆ ಸದ್ಯಕ್ಕೆ ಸೆಕೆ ಸೆಕೆ ಅಂತಾ ಪರದಾಡ್ತಾ ಇದೀಯಲ್ಲಾ ಅದೂ ನಾನೇ. ಹಾಗಾಗಿ ನೀನು ಏನೇನೋ ತೊಂದರೆ ಅನುಭವಿಸ್ತಾ ಇದ್ದೀಯಲ್ಲಾ ಅದೆಲ್ಲಾ ನಾನೇ. ಇದೆಲ್ಲಾ ಆಗೋದ್ದಕ್ಕೆ ಕಾರಣ ಯಾರು? ನೀನು. ನೀನು ಮಾಡಿದ ಕೆಲಸ, ನಿನ್ನ ನಿರ್ಧಾರ, ನಿನ್ನ ಅಜಾಗರೂಕತೆ ಇವೆಲ್ಲವೂ ನಿನ್ನ ಸಮಸ್ಯೆಗೆ ಕಾರಣ. ಹಾಗಾಗಿ ನಾನು ನಿನ್ನ ಬಳಿಗೆ ಬರೋದ್ದಕ್ಕೆ ನಿನ್ನ ಆಮಂತ್ರಣ. ಈಗ ಹತ್ತಿರ ಬಂದ ಮೇಲೆ ನನಗೆ ಬೈಯೋದು ಎಷ್ಟು ಸರಿ. ನೀನು ಸ್ವಾಗತ ಕೊಡಬೇಡ. ನನ್ನನ್ನು ಹತ್ತಿರ ಸೇರದ ಹಾಗೆ ಮಾಡು, ಆಗ ನಿನಗೆ ಏನೂ ತೊಂದರೆ ಆಗೋದ್ದಿಲ್ಲ. ನಾನು ಕರೆಯದೆ ಬರುವವನಲ್ಲ. ಕರೆದ ಮೇಲೆ ಬಿಡುವುದಿಲ್ಲ. ಹಾಗಾಗಿ ಯೋಚಿಸಿ ಕರೆಯಬೇಕು. ಎಚ್ಚರ!
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ