ಸ್ಟೇಟಸ್ ಕತೆಗಳು (ಭಾಗ ೯೦೫)- ಸೋಲು

ಸ್ಟೇಟಸ್ ಕತೆಗಳು (ಭಾಗ ೯೦೫)- ಸೋಲು

ಸೋತು ಹೋಗುತ್ತಿದ್ದೇನೆ ನಾನು. ಹೇಳುವುದನ್ನು ಹೇಳುವುದಕ್ಕೆ ಆಗದೆ ಮನಸ್ಸಿನಲ್ಲಿ ಹಾಗೆ ಗಟ್ಟಿಯಾಗಿ ಮುಚ್ಚಿಟ್ಟುಕೊಂಡು ಸೋತು ಹೋಗುತ್ತಿದ್ದೇನೆ ನಾನು. ಮತ್ತೆ ಮತ್ತೆ ಎದುರಿನವರು ಸ್ವಲ್ಪವಾದರೂ ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸಬಹುದು ಒಂದಷ್ಟು ಪ್ರಶ್ನೆಗಳನ್ನ ಕೇಳಿ ನನ್ನೊಳಗೆ ಅವಿತಿರುವ ಉತ್ತರವನ್ನ ಹೊರಗೆ ತೆಗೆಯಬಹುದು ಅಂತ ಕಾದದ್ದೇ ಬಂತು. ಪ್ರತಿಯೊಬ್ಬರಿಗೂ ವಿಷಯ ಅರ್ಥವಾದರೂ ಕೇಳಬೇಕು ಅನಿಸಿದರೂ ಸಹ ಸುಮ್ಮನಿದ್ದು ಮೌನವಾಗಿ ಬಿಟ್ಟು ನನ್ನೊಳಗೆ ಉತ್ತರವನ್ನ ಹೇಳದ ಹಾಗೆ ಮಾಡುತ್ತಿದ್ದಾರೆ. ಹಾಗಾಗಿ ಸೋತುಬಿಟ್ಟಿದ್ದೇನೆ. ನಾನು ಸಮಸ್ಯೆ ಆಗಿರುವುದೆಲ್ಲಿ ಗೊತ್ತಾ ಪ್ರತಿಯೊಬ್ಬರಿಗೂ ಅವರು ಬಯಸಿದ ಉತ್ತರವೇ ಬೇಕು ಅವರು ಮನಸ್ಸಿನಲ್ಲಿ ಕಟ್ಟಿಕೊಂಡ ಪ್ರಶ್ನೆಗಳಿಗೆ ಅವರೇ ನಿರ್ಧರಿಸಿದ ಉತ್ತರಗಳನ್ನ ಹೇಳುವವರು ಬೇಕು. ನನಗೆ ನನ್ನೊಳಗೆ ಉತ್ತರಗಳ ರಾಶಿಯನ್ನ ತುಂಬಿಕೊಂಡಿದೆನಲ್ಲಾ ಅದನ್ನ ತೆರೆದಿಡುವುದಕ್ಕೆ ಸಣ್ಣ ಸಣ್ಣ ಅವಕಾಶಗಳು ಬೇಕು. ಅವಕಾಶಗಳು ಸಿಗದೇ ಸೋತು ಹೋಗಿದ್ದೇನೆ ನಾನು. ಇದು ಅವಳ ಮಾತು .ಪ್ರತಿ ದಿನವೂ ಉತ್ಸಾಹದಿಂದ ಓಡಾಡುತ್ತಿದ್ದವಳು ಹಾಗೆಯೇ ಕಣ್ಣೀರುಳಿಸುತ್ತಾ ಮೌನವಾಗುತ್ತಿದ್ದಾಳೆ. ಇನ್ನೊಬ್ಬರಿಗೆ ಸ್ಪೂರ್ತಿ ತುಂಬುತ್ತಿದ್ದವಳು ಒಂದಷ್ಟು ಸಾಂತ್ವಾನದ ಮಾತುಗಳಿಗೆ ಎದುರು ನೋಡುತ್ತಿದ್ದಾಳೆ. ಆಕೆ ಮೌನವಾಗಿ ಬಿಟ್ಟಿದ್ದಾಳೆ. ಕಣ್ಣಲ್ಲಿ ಕಣ್ಣು ಕಾಂತಿ ಕಳೆದುಕೊಂಡಿದೆ ನಗು ಮಾಯವಾಗಿದೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ