ಸ್ಸಾರಿ, ಇಲ್ಲೆಲ್ಲರೂ ಬ್ಯುಸಿ

ಸ್ಸಾರಿ, ಇಲ್ಲೆಲ್ಲರೂ ಬ್ಯುಸಿ

ಕವನ

ರಸ್ತೆಯಲ್ಲಿ ನಿಂತಾಗ,

ಯಾರಿಗಾಗಿಯೋ,

ಕಾಯುವಾಗ,

ಬಸ್ಸಲ್ಲಿ ಕುಳಿತಾಗ,

ರೈಲಲ್ಲಿ  ಮಲಗಿದಾಗ,

ರಸೀದಿ,ಬಿಲ್ಲುಗಳನ್ನು 

ಕಟ್ಟಲು ಸರತಿಯಾದಾಗ, 

ಮನೆಗೆ ಬಂದ ತಕ್ಷಣ,

ಹೊರಟ ತಕ್ಷಣ  ಮನೆಯಿಂದ,

ಬೋರಾದ ಟಾಕೀಸ್ ನಲ್ಲಿ, 

ಯಾವುದೋ ಸಮಾರಂಭ,

ಯಾರದೋ ಸಾವು,

ಒಂದೆರಡು ನಿಮಿಷದಲ್ಲಿಯೇ,

ಕೈಲಿರಬೇಕು,

ಮೊಬೈಲ್.

ಸ್ಸಾರಿ, ಯಾರಿಗಿಲ್ಲ  ಟೈಮಿಲ್ಲಿ. 

ಇಲ್ಲೆಲ್ಲರೂ  ಬ್ಯುಸಿ.

 

ಅಪಘಾತವಾದರೆ,

ವೀಡಿಯೊ ಮಾಡವರು. 

ರೇಪ್ ಆದರೆ,

ವೈರಲ್  ಮಾಡುವರು.

ಆದರೆ,ಹೊಡೆದಾಟ, 

ಮಾಡುವರು ನ್ಯೂಸ್.

ರೀಲ್  ಮಾಡುವರು,

ತುಂಡುಡುಗೆ  ತೊಡುವರು,

ಯಾರನ್ನೋ ಲೈಕಿಸಿ, 

ಇನ್ನಾರಿಗೋ ಕಾಮೆಂಟಿಸುವರು. 

ಫೇಸ್ಬುಕ್ ನಲ್ಲಿ  ಲವ್ ಮಾಡಿ,

ಇನ್ಸಟಾ ದಲ್ಲಿ ಮದುವೆಯಾಗಿ,

ವೀಡಿಯೋ ಕಾಲ್ ನಲ್ಲಿ ಮಕ್ಕಳ

ಮಾಡಿಕೊಳ್ಳುವರು.

ಆರೆಂಟು  ತಿಂಗ್ಳಿಗೆ, 

ಡೈವೋರ್ಸ್ ತಗೊಂಡು,

ಕಂಪ್ಯೂಟರ್,ಮೊಬೈಲ್ ಗಳಿಗೆ

ಹುಟ್ಟಿದವರಂತೆ,ನಪುಂಸಕರಾಗುತಿಯರು. 

ಸ್ಸಾರಿ, ಯಾರಿಲ್ಲ ಫ್ರೀ,

ಇಲ್ಲೆಲ್ಲರೂ  ಬ್ಯುಸಿ.

 

ವಾರಕ್ಕೊಮ್ಮೆ,ಭಾವನೆಗಳನ್ನು

ಕಾರಿಕೊಂಡು, 

ಪ್ಲಾಸ್ಟಿಕ್ ಹಣವನ್ನು,

ಉಜ್ಜಿಕೊಂಡು, 

ಯೂಟ್ಯೂಬ್  ನೋಡಿ ಅಡುಗೆ

ಮಾಡಿಕೊಂಡು,

ಝೋಮ್ಯಾಟೋ ದಲ್ಲಿ

ತರಿಸಿ,ತಿಂದುಕೊಂಡು.

ಐವಿಎಫ್ ನಿಂದ ಮಕ್ಕಳ

ಪಡ್ಕೊಂಡು, 

ಬಿಪಿ,ಶುಗರ್  

ಬರ್ಸಕೊಂಡು, 

ಕೂದಲು ನಾಟಿ

ಮಾಡಿಸಿಕೊಂಡು,

ಸ್ಟಾಡಪ್  ಕಾಮಿಡಿ,

ನೋಡಿ ನಗ್ತಿದ್ದಾರೆ.

ಸ್ಸಾರಿ,ಯಾರಿಗಿಲ್ಲ  ಭಾವನೆಗಳು,

ಇಲ್ಲೆಲ್ಲರೂ  ಬ್ಯುಸಿ.

 

ಮೊಬೈಲ್ ನೋಡ್ತಾನೆ,

ಉಣ್ಣುವರು.

ಮೊಬೈಕ್  ಕೊಡಿಸಿದ್ರೆ,

ಕಾಲೇಜಿಗೆ ಹೋಗುವರು,

ವೀಲಿಂಗ್ ಮಾಡುವರು,

ಗನ್ನಿಂದ  ಸುಡುವರು,

ಓದೋಲ್ವ, ಎಂದರೆ, 

ಆತ್ಮಹತ್ಯೆ ಮಾಡಿಕೊಳ್ಳುವರು.

ಆತ್ಮವಿಲ್ಲದ  ದೇಹಗಳಂತೆ, 

ಎಲ್ಲೆಂದರಲ್ಲಿ ಸೆಲ್ಫಿ,

ತೆಗೆದುಕೊಳ್ಳುವರು.

ಆನ್‌ಲೈನ್ ನಲ್ಲಿಯೇ,ಗೇಮ್ಸ್ 

ಆಡಿ,ದೇಹದಾಢ್ಯರಾಗುವರು.

ಯೌವ್ವನವೆಲ್ಲವ,

ಇಂಟರ್ನೆಟ್‌ನಲ್ಲಿಯೆ, 

ಸೋರಿಸಿಕೊಂಡಿರುವರು.

ಸೀಡ್ ಲೆಸ್ ಆಹಾರ ತಿನ್ನುವ, 

ಸೀಡ್ಲೆಸ್ ಪ್ರಜೆಗಳಾಗಿ, 

ಸೋಷಿಯಲ್  ಮೀಡಿಯದಲ್ಲೇ, 

ಹೋರಾಟ ಮಾಡುತ್ತಿದ್ದಾರೆ.

ಸ್ಸಾರಿ,ಯಾರಿಗೆ ಯಾರಿಲ್ಲ  ಇಲ್ಲಿ,

ಇರುವವರೆಲ್ಲರೂ ಬ್ಯುಸಿ.

 

ಸಿಕ್ಕಿದ್ದಲ್ಲೆವ, 

ತಿಂದು,

ಎಲ್ಲೆಂದರಲ್ಲಿ

ಉಗುಳಿ, 

ಪ್ಲಾಸ್ಟಿಕ್ ಎಲ್ಲ,

ಚರಂಡಿಗೆ ತುರುಕಿ,

ಬಾಟಲ್ ಗಳನ್ನು,

ನೀರಿನ ಮೂಲಗಳಿಗೆ ತುಂಬಿ,

ಪ್ರಾಣಿಗಳನ್ನು,

ಝೂಗಳಲ್ಲಿ  ಬಂಧಿಸಿ,

ವಯಸ್ಸಾದವರನ್ನು,

ಅನಾಥಾಶ್ರಮಗಳಿಗೆ ಭರ್ತಿಮಾಡಿ,

ಅಂಬ್ಯುಲೆನ್ಸ್ ಗಳಿಗೂ,

ದಾರಿಯಿಲ್ಲದಂತೆ,

ಟ್ರಾಫಿಕ್ ಜಾಮ್ ಮಾಡಿ,

ಸಂಗಾತಿಗಳ  ಬದಲಿಗೆ,

ಮೊಬೈಲ್ ಗಳ ಜೊತೆ,

ಮಲಗಿ,

ಸೆಕ್ಸ್  ಟಾಯ್ ಗಳೊಂದಿಗೆ,

ಸ್ಖಲಿಸಿ,

ಸ್ವಚ್ಛ ಭಾರತ್ ಗೆ,ಜೈ

ಅನ್ನುತ್ತಿದ್ದಾರೆ.

ಸ್ಸಾರಿ,ಇಲ್ಲಾರೂ  ಮನುಷ್ಯರಿಲ್ಲ,

ಇಲ್ಲಿರುವವರೆಲ್ಲರೂ,ಬ್ಯುಸಿ.

ಚಿತ್ರ್