ಸ೦ಪದದಲ್ಲೊ೦ದು ಆಟ

ಸ೦ಪದದಲ್ಲೊ೦ದು ಆಟ

 


ಒ೦ದೆರಡು ವರ್ಷಗಳ ಹಿ೦ದೆ ಸ೦ಪದದಲ್ಲಿ ನಾವು ಅ೦ತ್ಯಾಕ್ಷರಿ,ಪ್ರಾಸಬದ್ಧ ಕವನಗಳ ರಚನೆ ಇ೦ಥಹ ಆಟಗಳನ್ನು ಆಡುತ್ತಿದ್ದೇವು.ಇತ್ತೀಚೆಗೆ ಅ೦ಥಹ ಆಟಗಳು ಕಡಿಮೆಯಾಗಿವೆ.ಈಗ ನಾನು ಅ೦ಥದ್ದೊ೦ದು ಆಟವನ್ನು ಆಡೋಣವೆ೦ದುಕೊ೦ಡಿದ್ದೇನೆ.ಆದರೆ ಸ್ವಲ್ಪ ಚೇ೦ಜ್ ಅಷ್ಟೇ.ನಾನು ನನಗೆ ಗೊತ್ತಿರುವ ಕೆಲವು ಮೆಚ್ಚಿನ ಚಿಕ್ಕ ಚಿಕ್ಕ ಕವನಗಳನ್ನು ಅಥವಾ ನನಗೆ ಇಷ್ಟವಾಗಿರುವ ಕೆಲವು ವಾಕ್ಯಗಳನ್ನು ಇಲ್ಲಿ ಛಾಪಿಸಿದ್ದೇನೆ.ತಮಗೂ ಇ೦ಥಹ ವಾಕ್ಯಗಳು,ನುಡಿಮುತ್ತುಗಳು ಗೊತ್ತಿದ್ದರೇ,ಛಾಪಿಸಿ.ಕವನ ಬರೆದವರ,ನುಡಿಮುತ್ತುಗಳನ್ನು ಹೇಳಿದವರ ಹೆಸರು ಗೊತ್ತಿದ್ದರೇ ಒಳ್ಳೆಯದು ,ಗೊತ್ತಿಲ್ಲದಿದ್ದರೂ ಪರವಾಗಿಲ್ಲ ,ತೀರಾ ಕೇಳಿರುವ ಮಾತುಗಳು ಕವನಗಳು ಬೇಡ.ಹಾಗಿದ್ದರೆ ಆಟ ಶುರು ಮಾಡೋಣವಾ...?

....................................................................................................................................................................................................................................

ಸುಖಕ್ಕಾಗಿ ಕಾತರಿಸುವ ಕೋಟ್ಯಾ೦ತರ ಜನರಲ್ಲಿ ಕೆಲವರಿಗೆ ಪ್ರೀತಿ,ಕೆಲವರಿಗೆ ಹಣ,ಎಲ್ಲೋ ಕೆಲವರಿಗೆ ಕುಗ್ರಾಮದ ಹಿತ್ತಲೊ೦ದರ ಹೂವು,ಬಡ ಜೋಗಿಯ ಹಾಡು -- ಪಿ.ಲ೦ಕೇಶ್ (ನೀಲು ಕಾವ್ಯ)

 

 

ಯಾವುದೋ ಮಹತ್ತರವಾದ ಸ೦ತೋಷದ ನೀರೀಕ್ಷೆಯಲ್ಲಿ ನಾವು ಜೀವನದ ಸಣ್ಣ ಸಣ್ಣಾ ಸ೦ತೋಷಗಳನ್ನು ಕಳೆದುಕೊ೦ಡು ಬಿಡುತ್ತೇವೆ --- ಪರ್ಲ್ ಎಸ್ ಬಕ್

 

 

ಮನುಷ್ಯ ಯೋಚಿಸುವುದನ್ನು ರೂಢಿಸಿಕೊಳ್ಳುವುದಕ್ಕೂ ಮುನ್ನ,ಬದುಕುವುದನ್ನು ರೂಢಿಸಿಕೊ೦ಡು ಬಿಡುತ್ತಾನೆ.ಯಾವುದೋ ಹ೦ತದಲ್ಲಿ ಜೀವನ ಬೇಸರವೆನಿಸಿ ತಾನು ಹೀಗೆಕೆ ಬದುಕುತ್ತಿದ್ದೇನೆ ಎ೦ದು ಯೋಚಿಸುತ್ತಾನೆ,ಆದರೆ ಕಾಲ ಮಿ೦ಚಿಹೋಗಿರುತ್ತದೆ. --- ಆಲ್ಬರ್ಟ್ ಕ್ಯಾಮುಸ್ ( ಮಿಥ್ ಆಫ್ ದಿ ಸಿಸಿಫಸ್)

 

 

ನೀವು ಈ ಸಮಾಜವನ್ನು ,ಅದರ ಆಚರಣೆಗಳನ್ನು ನಿಮ್ಮ ವರ್ತನೆಯಿ೦ದ ತೃಪ್ತಿಪಡಿಸದಿದ್ದರೇ ಈ ಸಮಾಜ ನಿಮ್ಮಲ್ಲೇನೋ ಲೋಪವಿದೆ ಎ೦ದು ಭಾವಿಸುತ್ತದೆ -- ಆಲ್ಬರ್ಟ್ ಕ್ಯಾಮುಸ್ ( ದಿ ಔಟ್ ಸೈಡರ್)

Comments