ಹನಿಗಳು ಮತ್ತು ಗಝಲ್

ಹನಿಗಳು ಮತ್ತು ಗಝಲ್

ಕವನ

ಸತ್ಯ

ಇರುವ ಸತ್ಯವಾದ 

ಮಿಥ್ಯೆಗಳ 

ಹೇಳಲು ಹೋದರೆ 

ಹಿಂದೆ “ ಏನ್ ಸಾರ್

ನೀವೊಂದು

ಅದ್ಭುತ “

ಎಂದೆನ್ನುತ್ತಿದ್ದ 

ಮಹನೀಯರೆಲ್ಲ 

ಸದ್ದಿಲ್ಲದೆ  

ನನ್ನ ವಾಲಿನಿಂದ

ಎದ್ದು ಹೋದರು

ಛಲವಾದಿಯೆ !

***

ಸ್ಪೋಟ

ನಮ್ಮ ದೇಶದ 

ಕಾನೂನುಗಳಲ್ಲಿ

ಹಲವಾರು

ಕಡಕ್ಕ್ 

ಇಲ್ಲ !

ಜಾತಿಗಳಿಗೆ

ಅನುಗುಣವಾಗಿ

ಕಾನೂನುಗಳು

ಇರುವುದರಿಂದಾಗಿ

ನಾವಿಂದು

ಜಗತ್ತಿನಲ್ಲಿಯೇ

ಜನಸಂಖ್ಯೆಯಲ್ಲಿ 

ಪ್ರಥಮರು

ಆಗುತ್ತಿದ್ದೇವೆ

ಬೀಗುತ್ತಿದ್ದೇವೆ !

***

ಮಡಿಲು

ಬುವಿಗೆ

ಸಾಟಿ

ಲೋಕವಿದೆಯೆ

ಹುಟ್ಟಿ

ಬೆಳೆದ

ತಾಣವಿದುವೆ

ನೋವು ನಲಿವು

ಸಾವುಯೆಲ್ಲ

ಭೂಮಿ ತಾಯ

ಮಡಿಲಲೆ !

***

ಗಝಲ್

ನಮ್ಮದೆನುವ ರಾಷ್ಟ್ರವೊಂದೆ ಜನತೆಗಿರಲಿ ಪುಣ್ಯವು

ಮನುಜ ಮತವುಯಿಲ್ಲೆ ಇರಲು ಕುಲಕೆಯಿರಲಿ ಪುಣ್ಯವು

 

ದ್ವೇಷ ಬಣ್ಣ ಬೇಡವೆಂದು ಒಟ್ಟು ಸೇರಿ ಅರಿಯಲಿ

ಮಾನವತೆಯು ಬೆಳೆದ ಸಮಯ ಮನಕೆಯಿರಲಿ ಪುಣ್ಯವು

 

ಪ್ರೀತಿಯೆಂಬ ಪ್ರೇಮ ಸುಮದಿ ಸತ್ಯಶಾಂತಿ ನೆಲೆಸಲಿ

ತ್ಯಾಗದೊಳಗೆ ಸಮತೆ ಚಿಗುರೆ ತನುವಿಗಿರಲಿ ಪುಣ್ಯವು

 

ಜಗದ ಒಳಗೆ ಬಂಧುವೆನುತ ಜೀವ ಹೀಗೆ ಸಾಗಲಿ

ಬದುಕಿನಲ್ಲಿ ಹಿತವು ಬರಲು ಒಲವಿಗಿರಲಿ ಪುಣ್ಯವು

 

ನಡತೆಯೊಳಗೆ ಶೀಲ ಮೆರೆಯೆ ಬರುವ ಜೊತೆಗೆ ಈಶನು

ಭೇದಭಾವ ಬಿಡುತಲಿಂದು ಬಾಳಿಗಿರಲಿ ಪುಣ್ಯವು

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್